ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಹೋದ್ಯೋಗಿಯ ಅನುಚಿತ ವರ್ತನೆಗೆ ಬುದ್ದಿ ಕಲಿಸಿದ ಮಂಗಳೂರು

By Vanitha
|
Google Oneindia Kannada News

ಮಂಗಳೂರು, ಆಗಸ್ಟ್, 26 : ಅನ್ಯ ಧರ್ಮಿಯರ ಇಬ್ಬರ ಸಹೋದ್ಯೋಗಿ ಮಾತುಕತೆ ನಿಮಿತ್ತ ಮಂಗಳವಾರ ನಗರದಲ್ಲಿ ಭುಗಿಲೆದ್ದ ಸಂಘರ್ಷ ಇದೀಗ ಲೈಂಗಿಕ ದೌರ್ಜನ್ಯದ ರೂಪ ಪಡೆದುಕೊಂಡಿದೆ.

ಕಂಪನಿಯಲ್ಲಿ ಸೂಪರ್ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಕೀರ್ ನನ್ನೊಂದಿಗೆ ಹಲವಾರು ಬಾರಿ ಅನುಚಿತವಾಗಿ ವರ್ತಿಸಿದ್ದನು. ಇತ್ತೀಚೆಗೆ ಸಹಿಸಲು ಅಸಾಧ್ಯವಾದ ಕಿರುಕುಳ ನೀಡುತ್ತಿದ್ದನು ಎಂದು ಪತ್ರಿಕಾ ಸಂದರ್ಶನದಲ್ಲಿ ಈತನ ನೈಜ ವೃತ್ತಾಂತ ಬಿಚ್ಚಿಟ್ಟಿದ್ದಾಳೆ ಸಹೋದ್ಯೋಗಿ ಯುವತಿ.[ಹಲ್ಲೆಗೊಳಗಾದ ಮುಸ್ಲಿಂ ಯುವಕ ಮಾಡಿದ ತಪ್ಪೇನು ಗೊತ್ತಾ?]

Mangaluru colleague conflict its turn to sexual harassment way

ಪತ್ರಿಕಾ ಸಂದರ್ಶನಲ್ಲಿ ಮಾತನಾಡಿದ ಯುವತಿ 'ಮಂಗಳೂರಿನ ಕೂಳೂರು ನಿವಾಸಿಯಾದ ಶಕೀರ್ ನಾ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿಯೇ ಮೇಲ್ಮಟ್ಟದ ಹುದ್ದೆಯಲ್ಲಿದ್ದನು. ಈತ ನನ್ನೊಂದಿಗೆ ಮಾತನಾಡುತ್ತಾ ನನ್ನ ಮೊಬೈಲ್ ನಂಬರ್‌ ಪಡೆದು ಮೆಸೇಜ್ ಮಾಡಲು ಶುರುವಿಟ್ಟನು.

ಬಡವಳಾದ ನಾನು, ಬಹಳ ಕಷ್ಟಪಟ್ಟು ಈ ಹುದ್ದೆ ಪಡೆದಿದ್ದರಿಂದ ನನ್ನ ಕೆಲಸಕ್ಕೆ ಎಲ್ಲಿ ತೊಂದರೆಯಾಗುತ್ತದೋ ಎಂದು ಹೆದರಿ ಆತನ ಮೆಸೇಜ್‌ಗಳಿಗೆ ಉತ್ತರಿಸುತ್ತಿದ್ದೆ. ಆದರೆ ಇತ್ತೀಚೆಗೆ ಈತನ ಕಿರುಕುಳ ಮಿತಿ ಮೀರಿತ್ತು.

ಕೆಲವು ದಿನಗಳ ಹಿಂದೆ ಕಾರಿನಲ್ಲಿ ಮನೆಗೆ ಬಿಡುವುದಾಗಿ ಶಕೀರ್ ನನ್ನನ್ನು ಪೀಡಿಸಿದ್ದ. ಆತನಿಗೆ ಹೆದರಿದ ನಾನು ಅಂದು ಕಾರಿನಲ್ಲಿ ತೆರಳಿದ್ದೆ. ಆಗ ಆತ ನನ್ನೊಂದಿಗೆ ಬಹಳ ಅಸಹ್ಯಕರವಾಗಿ ವರ್ತಿಸಿದ್ದಾನೆ.

ಅದಾದ ಬಳಿಕ ಕೆಲವೊಮ್ಮೆ ಹಣ ಕೊಡುತ್ತೇನೆ ನನ್ನೊಟ್ಟಿಗೆ ಬಾ ಎಂದು ಹೇಳಿದ್ದಾನೆ. ಮಂಗಳವಾರ ಸಂಜೆ ಸುಮಾರು 5 ಗಂಟೆ ಸುಮಾರಿಗೆ ಆಫೀಸಿನಲ್ಲಿರುವಾಗ ಕಾರಿನಲ್ಲಿ ಬಿಡುವುದಾಗಿ ಹಿಂಸೆ ಮಾಡುತ್ತಿದ್ದ. ಕೆಲಸದ ಒತ್ತಡದಲ್ಲಿದ್ದ ನಾನು ಆತನಿಗೆ ಹೆದರಿ ಆಗಲಿ ಎಂದು ಸಮ್ಮತಿಸಿದೆ.

ಸಂಜೆ ಆಫೀಸಿನ ಕೆಲಸ ಮುಗಿದ ಬಳಿಕ ಕಾರಿನ ಬಳಿ ತೆರಳಿದ ನನ್ನನ್ನು ಕೈಹಿಡಿದು ಎಳೆದಿದ್ದಾನೆ. ಇದರಿಂದ ಭಯಗೊಂಡ ನಾನು ಜೋರಾಗಿ ಚೀರಿಕೊಂಡೆ. ಆಗ ಅಲ್ಲಿಯೇ ಇದ್ದ ಸಾರ್ವಜನಿಕರು ನನ್ನ ಸಹಾಯಕ್ಕೆ ಬಂದು ಶಕೀರ್ ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ' ಎಂದು ಶಕೀರ್ ನ ಕಾಮುಕ ಪ್ರವೃತ್ತಿಯನ್ನು ಬಯಲಿಗೆಳೆದಿದ್ದಾಳೆ.

English summary
Mangaluru colleague conflict its turn to sexual harassment way. Collegue Girl said that' Shakir is not innocent. His bihaviour is totally vulgar. He is daily tortured dropping in my home his own car. Really i am very afraid of his daily torturing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X