ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೇಶ್ಯಾವಾಟಿಕೆ ಆರೋಪ: ಮಂಗಳೂರು ಸಿಸಿಬಿ ಪೊಲೀಸರಿಂದ 11 ಜನರ ಬಂಧನ

|
Google Oneindia Kannada News

ಮಂಗಳೂರು, ಏಪ್ರಿಲ್ 03: ಅಕ್ರಮ ಚಟುವಟಿಕೆ ನಡೆಯುತಿದ್ದ ಮಸಾಜ್ ಪಾರ್ಲರ್ ಒಂದರ ಮೇಲೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರ 11 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ನಗರದ ಬಂದರು ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಎಸ್.ರಾವ್ ರಸ್ತೆಯಲ್ಲಿರುವ ಟೋಪಾಝ್ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿರುವ ಸಂಜೀವಿನಿ ಆರ್ಯುವೇದಿಕ್ ಥೆರಪಿ ಕ್ಲಿನಿಕ್ ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಲಾಗಿದೆ. ಮಸಾಜ್ ಸೆಂಟರ್ ಹೆಸರಿನಲ್ಲಿ ವೇಶ್ಯಾವಾಟಿಕೆಗೆ ನಡೆಸುತ್ತಿದೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರ ತಂಡ ಹಾಗೂ ಬಂದರು ಪೊಲೀಸರು ದಾಳಿ ನಡೆಸಿದ್ದಾರೆ.

ಈ ಮಸಾಜ್ ಪಾರ್ಲರ್ ನಲ್ಲಿ ಬಾಡಿ ಮಸಾಜ್ ಎಂಬ ಹೆಸರಿನಲ್ಲಿ ವೇಶ್ಯಾವಾಟಿಕೆಗೆ ಪ್ರೇರೆಪಿಸುತ್ತಿದ್ದರು ಎಂದು ಅರೋಪಿಸಲಾಗಿದೆ. ಈ ಹಿನ್ನಲೆಯಲ್ಲಿ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

Mangaluru CCB busted prostitution racket, arrest 11

ಬಂಧಿತರನ್ನು 1)ಹರೀಶ್ ಶೆಟ್ಟಿ 2)ಸಿ ಕೆ ಪಟ್ಟಕಂಡಿ ಪ್ರಸೂರನ್, 3)ರವೂದ್ ಎಮ್ ಕೆ, 4)ಸಾದಕತುಲ್ಲಾ 5)ಅಬ್ದುಲ್ ರೆಹಮಾನ್, 6)ಸಚೀಂದ್ರ ಎಮ್, 7)ದಿತಿನ್ ದಾಸ್, 8)ಶಿಬೂಕೆ, 9) ಅನಸ್, 10)ರಾಜೇಶ್, 11)ಸಿಯಾದ್ ಟಿ ವಿ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ 53,400 ರೂಪಾಯಿ ನಗದು ಹಣ ಹಾಗೂ 13 ಮೊಬೈಲ್ ಪೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

English summary
The Mangaluru CCB police along with Bunder police raided a massage parlour at Bunder here and arrested 11 persons for allegedly running a prostitution racket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X