ನೇತ್ರಾಣಿ ದ್ವೀಪದಲ್ಲಿ ಅಲೆಗಳ ಹೊಡೆತಕ್ಕೆ ಮುಳುಗಿದ ದೋಣಿ; ಮೀನುಗಾರರ ರಕ್ಷಣೆ

ಭಟ್ಕಳ, ಸೆಪ್ಟೆಂಬರ್ 9: ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ ಮಂಗಳೂರು ಮೂಲದ ಬೋಟ್ ನೇತ್ರಾಣಿ ದ್ವೀಪದಲ್ಲಿ ಮುಳುಗಡೆಯಾದ ಘಟನೆ ನಡೆದಿದೆ. ಅಲೆಗಳ ರಭಸ ಹೆಚ್ಚಾಗಿ ಬೋಟ್ ಮುಳುಗಿರುವುದಾಗಿ ತಿಳಿದುಬಂದಿದೆ.

ಈ ಬೋಟ್ ನಲ್ಲಿದ್ದ ಹತ್ತು ಮಂದಿ ಮೀನುಗಾರರನ್ನು ಮತ್ತೊಂದು ಬೋಟ್ ನಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ. ಇವರೆಲ್ಲರೂ ಆಂಧ್ರ ಮೂಲದವರು ಎನ್ನಲಾಗಿದೆ.

Mangaluru Boat Drowns In Netrani Island And Fisherman Rescued

ಸೈಮಾ 1 ಎಂಬ ಈ ಬೋಟ್ ಮಂಗಳೂರಿನ ಮೊಹಮದ್ ಆಸಿಫ್ ಎಂಬುವರಿಗೆ ಸೇರಿದ್ದು, ಭಾನುವಾರ ವೆಂಕಟೇಶ್ ಎಂಬುವರು ಬೋಟ್ ಚಲಾಯಿಸುತ್ತಿದ್ದರು. ವಾರದ ಹಿಂದೆ ಮಂಗಳೂರಿನಿಂದ ಈ ಬೋಟ್‌ ಮೀನುಗಾರಿಕೆಗೆ ತೆರಳಿತ್ತು. ಆದರೆ ನೇತ್ರಾಣಿಗುಡ್ಡದ ಸಮೀಪ ಸಮುದ್ರದ ಅಲೆಗಳು ಹೆಚ್ಚಾದ್ದರಿಂದ ಅಲ್ಲೇ ನಿಲುಗಡೆ ಮಾಡಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಬೋಟ್ ಮುಳುಗಲು ಆರಂಭಿಸಿದೆ. ಕ್ಷಣವೇ ಮತ್ತೊಂದು ಬೋಟ್ ನಲ್ಲಿದ್ದ ಸಿಬ್ಬಂದಿ ಈ ಬೋಟ್ ನಲ್ಲಿದ್ದವರನ್ನು ರಕ್ಷಿಸಿದ್ದು, ಅವರನ್ನು ಮಂಗಳೂರಿಗೆ ಕಳುಹಿಸಲಾಗಿದೆ.

ಈ ಅವಘಡದಿಂದ ಸುಮಾರು ಕೋಟಿ ರೂಪಾಯಿ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+