ಮಂಗಳೂರಿನ ಆಟೋ ಡ್ರೈವರ್ 'ಇಂಕೇಮ್ ಕಾವಾಲೇ' ಧಾಟಿಯ ಕನ್ನಡ ಹಾಡು ವೈರಲ್

ಮಂಗಳೂರು, ಸೆಪ್ಟೆಂಬರ್ 4: ರಶ್ಮಿಕಾ ಮಂದಣ್ಣ ಅಭಿನಯದ ತೆಲುಗಿನ 'ಗೀತಾ ಗೋವಿಂದಂ' ಸಿನಿಮಾ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸುತ್ತಿದ್ದು, ಅದೇ ಪ್ರಮಾಣದಲ್ಲಿ ಹಣವನ್ನೂ ಮಾಡುತ್ತಿದೆ. ಚಿತ್ರದ ಅತೀ ಹೆಚ್ಚು ಪ್ರಚಾರ ಪಡೆದ 'ಇಂಕೇಮ್ ಇಂಕೇಮ್ ಕಾವಾಲೇ' ಹಾಡು ಎಲ್ಲರ ಫೇವರಿಟ್. ಯೂಟ್ಯೂಬ್ ನಲ್ಲಿ ಆ ಹಾಡನ್ನು ಎಷ್ಟು ಮಂದಿ ಕೇಳಿದ್ದಾರೆ ಅಂತ ನೋಡಿದರೆ ಗೊತ್ತಾಗುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಕೂಡ ಈ ಹಾಡು ವೈರಲ್ ಆಗಿದೆ. ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ್ ದೇವರಕೊಂಡ ಅವರ ತೆರೆ ಮೇಲಿನ ಕೆಮಿಸ್ಟ್ರಿ ಸೂಪರ್ ಹಿಟ್ ಆಗಿದೆ. ಈ ಮಧ್ಯೆ ಗೀತಾ ಗೋವಿಂದಂ ಸಿನಿಮಾದ ಹಿಟ್ ಸಾಂಗ್ 'ಇಂಕೇಮ್ ಇಂಕೇಮ್ ಕಾವಾಲೆ' ಧಾಟಿಯ ಕನ್ನಡ ಹಾಡು ಸೂಪರ್ ಹಿಟ್ ಆಗುವ ನಿಟ್ಟಿನಲ್ಲಿ ದಾಪುಗಾಲಿಟ್ಟಿದೆ.

'ಇಂಕೇಮ್ ಇಂಕೇಮ್ ಕಾವಾಲೇ' ಧಾಟಿಯ ಕನ್ನಡದ ಹಾಡು ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ. ಈ ಹಾಡನ್ನು ಕನ್ನಡಕ್ಕೆ ಡಬ್ ಮಾಡಿದ್ದು ಮಂಗಳೂರಿನ ಆಟೋ ಡ್ರೈವರ್‌ ಎಂಬುದು ಗಮನಿಸಬೇಕಾದ ಸಂಗತಿ. ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಸಂದೇಶ್ ನೀರುಮಾರ್ಗ ಎಂಬ ವಾಮಂಜೂರು ನಿವಾಸಿ ಈ ಹಾಡನ್ನು ಹಾಡಿದ್ದು, ಈಗ ಇದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.

Mangaluru auto drivers Inkem Kavale version Kannada song viral in social media

ಯೂಟ್ಯೂಬ್ ನಲ್ಲಿ ಈ ಹಾಡನ್ನು ಲಕ್ಷಾಂತರ ಜನ ವಿಕ್ಷಿಸಿದ್ದಾರೆ. ಸಂದೇಶ್ ಗೆ ಸಂಗೀತದ ಹಿನ್ನೆಲೆ ಇಲ್ಲ. ಚಿಕ್ಕಂದಿನಿಂದಲೇ ಭಜನೆಯಲ್ಲಿ ತೊಡಗಿಕೊಂಡು ತಂಡ ಕಟ್ಟಿರುವ ಸಂದೇಶ್, ಸಂಗೀತ ಕಲಿತವರಲ್ಲ. ಆಟೋ ಓಡಿಸಿಕೊಂಡು ಹಾಡುಗಳನ್ನು ಹೇಳುತ್ತಾ ಜೀವನ ಸಾಗಿಸುತ್ತಿರುವ ಸಂದೇಶ್ ಗೆ ಚಿಕ್ಕದೊಂದು ಅಪಘಾತವಾಗಿ ಮನೆಯಲ್ಲೇ ಇದ್ದರು.

ಈ ವೇಳೆ ತೆಲುಗಿನ ಹಾಡನ್ನು ಕೇಳುತ್ತಲೇ ಆ ಸಂಗೀತಕ್ಕೆ ಕನ್ನಡದಲ್ಲೇ ಸಾಹಿತ್ಯ ಬರೆದಿದ್ದಾರೆ. ಸ್ನೇಹಿತರ ಸಹಾಯದಿಂದ ಗೆಳೆಯನ ಸ್ಟುಡಿಯೋದಲ್ಲಿ ಹಾಡಿ, ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಆ ನಂತರ ಲಕ್ಷಾಂತರ ಮಂದಿ ಹಾಡನ್ನು ನೋಡಿ, ಮೆಚ್ಚಿಕೊಂಡಿದ್ದಾರೆ.

Mangaluru auto drivers Inkem Kavale version Kannada song viral in social media

ಶಾರ್ಟ್ ಫಿಲ್ಮ್ ಗಳಿಗೆ ಧ್ವನಿ ನೀಡಿರುವ ಸಂದೇಶ್ ಈಗಾಗಲೇ ತಮ್ಮ ಪ್ರತಿಭೆ ಮೂಲಕ ಗುರುತಿಸಿಕೊಂಡಿದ್ದಾರೆ. ಸಂದೇಶ್ ಆಸೆಯಂತೆ ಕನ್ನಡ ಸಿನಿಮಾಗಳಲ್ಲಿಯೂ ಹಾಡಲು ಅವಕಾಶ ಸಿಗಲಿ ಎನ್ನುತ್ತಾರೆ ಅವರ ಸ್ನೇಹಿತರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+