ಉಳ್ಳಾಲದಲ್ಲಿ ಬರ್ಬರವಾಗಿ ಹತ್ಯೆಗೊಳಗಾದ ರಿಕ್ಷಾ ಚಾಲಕ

ಉಳ್ಳಾಲ, ಆಗಸ್ಟ್, 29 : ಆಟೋ ಚಾಲಕ ನಾಟೆಕಲ್ ಸಮೀಪದ ಮಾಂಗಟ್ಟೆ ಎಂಬಲ್ಲಿ ಬರ್ಭರವಾಗಿ ಹತ್ಯೆಗೊಳಗಾಗಿದ್ದಾನೆ. ಶವ ಆಟೋದಲ್ಲಿಯೇ ಪತ್ತೆಯಾಗಿದ್ದು, ಈ ಘಟನೆ ಶನಿವಾರ ಮುಂಜಾನೆ ಬೆಳಕಿಗೆ ಬಂದಿದೆ.

ಅಳೇಕಲ ನಿವಾಸಿ ಹಿದಾಯತ್ (35) ಕೊಲೆಗೀಡಾದ ರಿಕ್ಷಾ ಚಾಲಕ. ಶುಕ್ರವಾರ ರಾತ್ರಿ ಮನೆಗೆ ತಡವಾಗಿ ಬರುವುದಾಗಿ ತಿಳಿಸಿದ ಹಿದಾಲತ್ ಬೆಳಿಗ್ಗೆ ಆದರೂ ಬಂದಿರಲಿಲ್ಲ. ವಿಷಯ ತಿಳಿದ ಹಿದಾಯತ್ ಸಹೋದರ ಹನೀಫ್ ಹಾಗೂ ಮಹಮ್ಮದ್ ರಫೀಕ್ ಈತನ ಹುಡುಕಾಟದಲ್ಲಿ ತೊಡಗಿದ್ದರೂ ಈತನ ಸುಳಿವು ಸಿಗದೆ ಮನೆಯವರು ಆತಂಕಕ್ಕೆ ಒಳಗಾಗಿದ್ದರು.[ದಕ್ಷಿಣ ಕನ್ನಡ ಕಂದಾಯ ಇಲಾಖೆಯಲ್ಲಿ 40 ಹುದ್ದೆಗಳು ಖಾಲಿ ಇವೆ]

Mangaluru: Auto driver murdered in rickshaw at Natekal on Saturday

ಹಿದಾಯತ್ ಗೆ ಜೀವ ಬೆದರಿಕೆ ಇತ್ತೇ?

ಹಿದಾಯತ್ ತನ್ನ ಸಹೋದರಿಗೆ ಕಿರುಕುಳ ನೀಡುತ್ತಿದ್ದ ಫಾರುಕ್ ವಿರುದ್ಧ ಉಳ್ಳಾಲ ಪೊಲೀಸರ ಬಳಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಫಾರುಕ್ ಎರಡು ದಿನಗಳ ಹಿಂದೆ ಹಿದಾಯತ್ ಗೆ ಜೀವ ಬೆದರಿಕೆ ಒಡ್ಡಿದ್ದನು.

ಕೆಲವು ದಿನಗಳ ಹಿಂದೆ ಇದ್ದಕ್ಕಿದಂತೆ ನಾಪತ್ತೆಯಾದ ಹಿದಾಯತ್ ಕೊಲೆಯಾಗಿದ್ದಾನೆ. ಈ ಪ್ರಕರಣದಲ್ಲಿ ಪೊಲೀಸರಿಗೆ ಫಾರುಕ್ ಮೇಲೆ ಹಲವು ಅನುಮಾನಗಳು ಮೂಡಿದ್ದು, ಇದುವರೆಗೂ ಕೊಲೆಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷಿಗಳು ಲಭ್ಯವಾಗಿಲ್ಲ.[ಹಲ್ಲೆಗೊಳಗಾದ ಮುಸ್ಲಿಂ ಯುವಕ ಮಾಡಿದ ತಪ್ಪೇನು ಗೊತ್ತಾ?]

ಡಿಸಿಪಿ ಶಾಂತರಾಜು ಕೆ.ಎಸ್.ಪಿ.ಎಸ್, ಎಸಿಪಿ ಕಲ್ಯಾಣ ಶೆಟ್ಟಿ ಆರ್.ಆರ್, ಉಳ್ಳಾಲ ಠಾಣಾಧಿಕಾರಿ ಸವಿತೃ ತೇಜ, ಎಸ್.ಐ ಭಾರತಿ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಮಾಹಿತಿ ಸಂಗ್ರಹಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+