ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಳು ಭಾಷೆಗೆ ರಾಷ್ಟ್ರೀಯ ಸ್ಥಾನಮಾನದ ಗುರಿ

|
Google Oneindia Kannada News

ಮಂಗಳೂರು ಅ. 20: ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವಲ್ಲಿ ಹಿನ್ನಡೆ ಉಂಟಾಗಿದೆ ಎಂದು ಕೇಂದ್ರದ ಮಾಜಿ ಸಚಿವ, ಸಂಸದ ಎಂ.ವೀರಪ್ಪ ಮೊಯ್ಲಿ ತಿಳಿಸಿದರು.

ಅಖಿಲ ಭಾರತ ತುಳು ಒಕ್ಕೂಟದ ಗೌರವ ಅಧ್ಯಕ್ಷ ಬಿ. ದಾಮೋದರ ನಿಸರ್ಗ ಅವರು ಮಂಗಳೂರಿನ ಅಡ್ಯಾರ್‍ನ ಸಹ್ಯಾದ್ರಿ ಕಾಲೇಜ್ ಆವರಣದಲ್ಲಿ ಬರುವ ಡಿಸೆಂಬರ್ 12ರಿಂದ 14ರ ವರೆಗೆ ನಡೆಯುವ ವಿಶ್ವ ತುಳುವೆರೆ ಪರ್ಬದಲ್ಲಿ ಭಾಗವಹಿಸಲು ಮನವಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.[ಮಂಗಳೂರು : ನ.1ರಿಂದ ರಾತ್ರಿ ವಿಮಾನ ರದ್ದು]

ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭ ನಾನು ತುಳುಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ ಮಾಡಿದ್ದೆ. ಕೃಷ್ಣ ಸಹ ಈ ಬಗ್ಗೆ ವರದಿಯನ್ನು ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದರು. ಆದರೆ ರಾಜಕೀಯ ಸ್ಥಿತ್ಯಂತ್ರಗಳಿಂದ ತುಳುಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವಲ್ಲಿ ಹಿನ್ನಡೆಯಾಯಿತು ಎಂದರು.

ಮುಂದಿನ ದಿನಗಳಲ್ಲಿ ಸಂವಿಧಾನಾತ್ಮಕವಾಗಿ ತುಳುಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ನಿಮ್ಮೊಂದಿಗೆ ನಾನು ಸೇರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದು ಭರವಸೆ ನೀಡಿದರು.

ಮೊಯ್ಲಿ ಭೇಟಿ ಮಾಡಿದ ನಿಯೋಗದಲ್ಲಿ ಅಡ್ಯಾರ್ ಮಹಾಬಲ ಶೆಟ್ಟಿ, ಎ.ಸಿ.ಭಂಡಾರಿ, ವಿ.ಜಿ.ಪಾಲ್, ಡಾ.ಕಿಶೋರ್ ಕುಮಾರ್ ರೈ, ಎನ್.ಶಶಿಧರ್ ಶೆಟ್ಟಿ, ಪಿ.ಎ.ಪೂಜಾರಿ, ಪ್ರದೀಪ್ ಆಳ್ವ, ಹರೀಶ್ ಉಪಸ್ಥಿತರಿದ್ದರು.[ವೀರಪ್ಪ ಮೋಯ್ಲಿ ಮೇಲೆ ಭ್ರಷ್ಟಾಚಾರದ ಕರಿನೆರಳು]

ತುಳು ಭಾಷೆಗೆ ಅಧಿಕೃತ ಮಾನ್ಯತೆ: ಪ್ರೊ. ಬಿ.ಎ. ವಿವೇಕ್ ರೈ
ಅಖಿಲ ಭಾರತ ತುಳು ಒಕ್ಕೂಟದ ಮಾಜಿ ಅಧ್ಯಕ್ಷ ಅಡ್ಯಾರ್ ಮಹಾಬಲ ಶೆಟ್ಟಿಯವರ ನೇತೃತ್ವದ ನಿಯೋಗವೊಂದು ಪ್ರೊ. ಬಿ.ಎ. ವಿವೇಕ ರೈ ಅವರನ್ನು ಭೇಟಿ ಮಾಡಿ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಲ್ಲಿ ಸೇರಿಸುವ ಕುರಿತು ಚರ್ಚೆ ನಡೆಸಿತು.

ತುಳು ಭಾಷೆಗೆ ,ಒದಲು ಕರ್ನಾಟಕದ ಅಧಿಕೃತ ರಾಜ್ಯಭಾಷೆಯಾಗಿ ಮಾನ್ಯತೆ ದೊರೆಯಬೇಕು. ತದನಂತರ ತುಳುಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಲ್ಲಿ ಸೇರಿಸುಸಲು ಪ್ರಯತ್ನ ಆರಂಭವಾಗಬೇಕು. ಕೇಂದ್ರ ಸರ್ಕಾರ ನೀಮಿಸಿರುವ ಭಾಷಾ ತಜ್ಞರ ಸಮಿತಿಗೆ ಸಂಬಂಧಪಟ್ಟ ದಾಖಲೆಗಳನ್ನು ಈಗಾಗಲೇ ಸಲ್ಲಿಸಲಾಗಿದೆ ಎಂದು ಮಹಾಬಲ ಶೆಟ್ಟಿ ವಿವರಣೆ ನೀಡಿದರು.

ವಿವೇಕ ರೈ ಅವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಅಖಿಲ ಭಾರತ ತುಳು ಒಕ್ಕೂಟ ಗೌರವಾಧ್ಯಕ್ಷ ಬಿ.ದಾಮೋದರ ನಿಸರ್ಗ, ಎ.ಸಿ. ಭಂಡಾರಿ, ವಿ.ಜಿ.ಪಾಲ್ ಉಪಸ್ಥಿತರಿದ್ದರು.

ವಿನಯಕುಮಾರ ಸೊರಕೆಗೆ ಆಹ್ವಾನ
ಅಖಿಲ ಭಾರತ ತುಳು ಒಕ್ಕೂಟದ ಬೆಳ್ಳಿ ಹಬ್ಬದ ಅಂಗವಾಗಿ ಡಿಸೆಂಬರ್ 12ರಿಂದ 14ರ ವರೆಗೆ ಅಡ್ಯಾರ್‍ನ ಸಹ್ಯಾದ್ರಿ ಕಾಲೇಜ್ ಆವರಣದಲ್ಲಿ ನಡೆಯುವ ವಿಶ್ವ ತುಳುವೆರೆ ಪರ್ಬ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅವರನ್ನು ವಿಶ್ವ ತುಳುವೆರೆ ಪರ್ಬ ಸಮಿತಿಯ ಪದಾಧಿಕಾರಿಗಳು ಆಹ್ವಾನಿಸಿದರು.

sorake

ದಾಮೋದರ ನಿಸರ್ಗ ಅವರ ನೇತೃತ್ವದ ನಿಯೋಗದಲ್ಲಿ ಎ.ಸಿ. ಭಂಡಾರಿ, ಅಡ್ಯಾರ್ ಮಹಾಬಲ ಶೆಟ್ಟಿ, ವಿ.ಜಿ. ಪಾಲ್, ಡಾ. ಕಿಶೋರ್ ಕುಮಾರ್ ರೈ, ಲೀಲಾಕ್ಷ ಕರ್ಕೆರಾ, ಹರೀಶ್ ನೀರ್ ಮಾರ್ಗ ಮೊದಲಾದವರು ಉಪಸ್ಥಿತರಿದ್ದರು. ಮಂಗಳೂರು ಮೇಯರ್ ಮಹಾಬಲ ಮಾರ್ಲ ಮತ್ತು ಉಪಮೇಯರ್ ಕವಿತಾ ಕೂಡಾ ಈ ಸಂದರ್ಭದಲ್ಲಿ ತಮ್ಮ ಸಹಕಾರವನ್ನು ನೀಡುವುದಾಗಿ ತಿಳಿಸಿದರು.[ಎಲ್ಲ ಜಿಲ್ಲೆಗಳಲ್ಲೂ ಪ್ರಾದೇಶಿಕ ವಿಜ್ಞಾನ ಕೇಂದ್ರː ಸಿಎಂ]

ಸಾಮರಸ್ಯ ಸೌಹಾರ್ದತೆಗಾಗಿ ನಡೆಯುವ ವಿಶ್ವ ತುಳುವೆರೆ ಪರ್ಬ ಸಮಾರಂಭದಲ್ಲಿ ತಾನು ಸಕ್ರಿಯವಾಗಿ ಭಾಗವಹಿಸುವುದಾಗಿ ವಿನಯಕುಮಾರ್ ಸೊರಕೆ ಈ ಸಂದರ್ಭದಲ್ಲಿ ತಿಳಿಸಿದರು.

ಸಂವಿಧಾನದ ಎಂಟನೇ ಪರಿಚ್ಚೇದ ಏನು ಹೇಳುತ್ತದೆ?
ಭಾರತದ ಸಂವಿಧಾನದ ಎಂಟನೇ ಪರಿಚ್ಚೇದ ಶಾಸನಬದ್ಧ ಭಾಷೆಗಳ ಕುರಿತಾಗಿ ಇದೆ. ಇಲ್ಲಿಯವರೆಗೆ ಸಂವಿಧಾನ ಬದ್ಧವಾಗಿ 18 ಭಾಷೆಗಳಿಗೆ ಮಾನ್ಯತೆ ನೀಡಲಾಗಿದೆ. ಹಿಂದಿ, ಉರ್ದು, ತಮಿಳು, ಮಲೆಯಾಳಂ, ಕನ್ನಡ ಸೇರಿದಂತೆ ಅನೇಕ ಭಾಷೆಗಳು ಸ್ಥಾನ ಪಡೆದುಕೊಂಡಿವೆ. ಈ ಪಟ್ಟಿಗೆ ತುಳು ಭಾಷೆಯೂ ಸೇರ್ಪಡೆಯಾಗಬೇಕು ಎಂಬುದು ನಾಗರಿಕರ ಬೇಡಿಕೆ.

English summary
The lack of political willingness is the real problem of 'Tulu' became a constitutional language. In S.M.krishna Government I am try to make Tulu is a state recognized language, said by MP veerappa moily. When he invited by 'World Tuluvere Parbha' by the administrative committee of festival he uphold this opinion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X