ದಾಖಲೆ ಬರೆದ ಮಂಗಳೂರು ಕೆಎಂಸಿ ಕಾಲೇಜು
ಮಂಗಳೂರು, ಸೆ. 29 : ವಿಶ್ವ ಹೃದಯ ದಿನದ ಅಂಗವಾಗಿ ಮಂಗಳೂರಿನ ಕಸ್ತೂರಬಾ ಮೆಡಿಕಲ್ ಕಾಲೇಜು(ಕೆಎಂಸಿ) ಭಾನುವಾರ ಹಮ್ಮಿಕೊಂಡಿದ್ದ 'ಹೃದಯ ಬಡಿತ ದಾಖಲೆ' ಮತ್ತು 'ಓಟ' ಏಷ್ಯಾ ಬುಕ್ ಆಫ್ ದಾಖಲೆಗೆ ಸೇರಿದೆ.
ನಿರಂತರ ಹತ್ತು ವರ್ಷಗಳಿಂದ ಕೆಎಂಸಿ ಈ ರೀತಿಯಲ್ಲಿಯೇ ವಿಶ್ವ ಹೃದಯ ದಿನ ಆಚರಣೆ ಮಾಡಿಕೊಂಡು ಬರುತ್ತಿದೆ. ಈ ಬಾರಿ ದಾಖಲೆ ಪುಟ ಸೇರಲು ಕೇವಲ 1,500 ಸಾವಿರ ಜನ ಭಾಗವಹಿಸಿದ್ದರೆ ಸಾಕಾಗಿತ್ತು. ಆದರೆ ಮೂರು ಸಾವಿರಕ್ಕೂ ಹೆಚ್ಚು ಜನ ಓಟದಲ್ಲಿ ಭಾಗವಹಿಸಿ ದಾಖಲೆ ಬರೆದರು. ದಕ್ಷಿಣ ಭಾರತದ ಚಿತ್ರನಟಿ ಶರ್ಮಿಳಾ ಮಾಂಡ್ರೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.(ಈತನಿಗಿತ್ತು ನಾಲ್ಕರ ಬದಲು ಐದು ಹೃದಯ ಕವಾಟ)
ಈ ವೇಳೆ ಮಾತನಾಡಿದ ಕೆಎಂಸಿ ಆಸ್ಪತ್ರೆ ಮೆಡಿಕಲ್ ಸುಪರಿಟೆಂಡೆಂಟ್ ಡಾ. ಆನಂದ್ ವೇಣುಗೋಪಾಲ್, ಈ ಬಾರಿ ನಾವು ಏಷ್ಯಾ ಬುಕ್ ಆಫ್ ರೇಕಾರ್ಡ್ಗೆ ಸೇರುತ್ತಿರುವುದು ಸಂತಸ ತಂದಿದೆ. ಈ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೆ ಧನ್ಯವಾದ ಅರ್ಪಿಸುತ್ತೆನೆ ಎಂದು ಹೇಳಿದರು.
ಓಟದ ನಂತರ ರಾಷ್ಟ್ರೀಯ ಅಥ್ಲೀಟ್ ಕ್ಲೀಯೋಫೋರ್ಡ್ ಧ್ವಜಾರೋಹಣ ಮಾಡಿದರು. ಭಾಗವಹಿಸಿದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ವೈಸ್ ಛಾನ್ಸೆಲರ್ ಡಾ, ವಿ.ಸುರೇಂದ್ರ ಶೆಟ್ಟಿ, ಡೀಮ್ ವೆಂಕಟ್ರಾಯಾ ಪ್ರಭು, ದಂತ ವೈದ್ಯಕೀಯ ಕಾಲೇಜಿನ ಡೀಮ್ ದಿಲೀಪ್ ನಾಯಕ್, ಸಗೀರ್ ಸಿದ್ದಿಕ್ವಿ, ಆರ್.ಎಲ್ ಕಮಲನಾಥ್ ಹಾಜರಿದ್ದರು.

ವಿಶ್ವ ಹೃದಯ ದಿನ
ವಿಶ್ವ ಹೃದಯ ದಿನದ ಅಂಗವಾಗಿ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು.

ಬ್ಯಾನರ್ ಹಿಡಿದು ಜಾಗೃತಿ
ವಿಶ್ವ ಹೃದಯ ದಿದ ಅಂಗವಾಗಿ ಜನ ಜಾಗೃತಿ ಜಾಥಾ.

ಜಾಗೃತಿ ಜಾಥಾ
ಮಂಗಳೂರು ನಗರದಾದ್ಯಂತ ಸಂಚರಿಸಿದ ಜಾಗೃತಿ ಜಾಥಾ.

ಸಭಾ ಕಾರ್ಯಕ್ರಮದಲ್ಲಿ ಹಾಜರಿದ್ದ ಸಾರ್ವಜನಿಕರು
ಜಾಥಾನಂತರ ನಡೆದ ಸಭಾ ಕಾರ್ಯಕ್ರಮವನ್ನು ಆಸಕ್ತಿಯಿಂದ ವೀಕ್ಷಿಸಿದ ನಾಗರಕರು.

ಹೃದಯ ಜೋಪಾನ
ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನಾಗರಿಕರಿಗೆ ಮಾಹಿತಿ ತೆರಳುತ್ತಾ ತೆರಳಿದ ಕೆಎಂಸಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ.


Click it and Unblock the Notifications
