ಅನೀಶ್ ಕೊಲೆ, ಭೂಗತ ಪಾತಕಿ ಕೈವಾಡವೇ?

ಮಂಗಳೂರು, ಮೇ.13: ಬಸ್ ಮಾಲೀಕ ಅನೀಶ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಅನೀಶ್ ಶೆಟ್ಟಿ ಕೊಲೆಗೆ ರಿಯಲ್ ಎಸ್ಟೇಟ್ ದಂಧೆಗೆ ಕಾರಣ ಎಂದು ತಿಳಿದು ಬಂದಿದೆ.

ಉದ್ಯಮಿ ಬಂಟ್ವಾಳ ತಾಲೂಕು ಇರಾ ಗ್ರಾಮದ ಮೂಳೂರು ನಿವಾಸಿ ಅನೀಶ್ ‌ ಶೆಟ್ಟಿ (33) ಅವರನ್ನು ಕಳೆದ ಶುಕ್ರವಾರ ನಗರದ ಕದ್ರಿ ಪಾರ್ಕ್ ‌ ಬಳಿ ಕತ್ತಿಯಿಂದ ಕಡಿದು ಬರ್ಬರವಾಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೊಯಿಗೆಬಜಾರ್ ‌ನ ಹೇಮಂತ್ ‌ಕುಮಾರ್ ‌ (40), ಬೋಳೂರಿನ ಡಯಾನ್ ‌ ಕ್ರಾಸ್ತ (40), ವಳಚ್ಚಿಲ್ ‌ನ ಅಬ್ದುಲ್ ‌ ರಹೀಂ (35), ಇರಾ ನಿವಾಸಿಗಳಾದ ರೋಹನ್ ‌ (30) ಮತ್ತು ಲೀಪಕ್‌ ಲಸ್ರಾದೊ (30) ಬಂಧಿತರು. ಆರೋಪಿಗಳನ್ನು ಸೋಮವಾರ ಕಂಕನಾಡಿ ರೈಲು ನಿಲ್ದಾಣದ ಬಳಿ ಬಂಧಿಸಲಾಗಿದ್ದು, ಅವರಿಂದ 2 ಕತ್ತಿಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಝೆನ್ ‌ ಕಾರು ವಶಪಡಿಸಿಕೊಳ್ಳಲಾಗಿದೆ.

ವಿಶ್ವನಾಥ್ ಶೆಟ್ಟಿ ಹೇಳಿಕೆ: ಅನೀಶ್ ಕೊಲೆ ಮಾಡಿರುವುದು ನನ್ನ ಗ್ಯಾಂಗ್ ಎಂದು ಭೂಗತ ಪಾತಕಿ ಕೊರಗ ವಿಶ್ವನಾಥ್ ಶೆಟ್ಟಿ ಹೇಳಿಕೊಂಡಿದ್ದಾರೆ. ನನ್ನ ಬಳಿ ಕೆಲಸಕ್ಕೆ ಇದ್ದ ಅನೀಶ್ ನಂತರ ನನ್ನ ಹೆಸರು ಹೇಳಿಕೊಂಡು ಕೋಟಿಗಟ್ಟಲೇ ಹಣ ಮಾಡುತ್ತಿದ್ದ. ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ ಲೆಕ್ಕಿಸಲಿಲ್ಲ. ರಿಯಲ್ ಎಸ್ಟೇಟ್ ದಂಧೆಗೆ ಇಳಿದ ಅನೀಶ್ ತನ್ನದೇ ಗ್ಯಾಂಗ್ ಕಟ್ಟಿಕೊಂಡು ನನಗೆ ಎದುರಾಗುತ್ತಿದ್ದ ಹೀಗಾಗಿ ಅವನನ್ನು ಮುಗಿಸಬೇಕಾಯಿತು ಎಂದು ಪಾತಕಿ ಕೊರಗ ವಿಶ್ವನಾಥ್ ಶೆಟ್ಟಿ ಹೇಳಿದ್ದಾರೆ.

Mangalore : Anish Shetty Murder case, Four Arrested

ಕನ್ನಡ ದಿನಪತ್ರಿಕೆಯೊಂದಕ್ಕೆ ನೀಡಿರುವ ಈ ಹೇಳಿಕೆಯಿಂದ ಈ ಪ್ರಕರಣ ಬೇರೆ ತಿರುವು ಪಡೆದುಕೊಂಡಿದೆ. ಇಲ್ಲಿ ತನಕ ಭೂಗತ ಪಾತಕಿ ಬನ್ನಂಜೆ ರಾಜನ ಶಿಷ್ಯ ಹೇಮಂತ್ ಹಾಗೂ ಅವನ ಗ್ಯಾಂಗ್ ಕೃತ್ಯ ಎಂದು ನಂಬಲಾಗಿತ್ತು. ಆದರೆ, ಅನೀಶ್ ಕೊಲೆ ಹಿಂದಿನ ಕಥೆ ಬೇರೆಯದ್ದೇ ಆಗಿದೆ.

ಅನೀಶ್ ಕೊಲೆ ಹಿಂದಿನ ಸಂಚು: ಅನೀಶ್ ಶೆಟ್ಟಿ ಮತ್ತು ಹೇಮಂತ್ ಕುಮಾರ್ ಆಪ್ತ ಸ್ನೇಹಿತರಾಗಿದ್ದರು ಎಂದು ಕೆಲವರು ಹೇಳುತ್ತಾರೆ. ಇಬ್ಬರಿಗೂ ಕೊರಗ ವಿಶ್ವನಾಥ ಶೆಟ್ಟಿ ಅವರೊಂದಿಗೆ ಸಂಪರ್ಕವಿತ್ತು ಎನ್ನಲಾಗಿದೆ. ಆದರೆ, ಬನ್ನಂಜೆ ರಾಜನಿಂದ ಸುಪಾರಿ ಪಡೆದಿದ್ದ ಹೇಮಂತ್ ಸ್ಕೆಚ್ ಹಾಕಿ, ಶುಕ್ರವಾರ ಅನೀಶ್ ಕಥೆ ಮುಗಿಸಿಬಿಟ್ಟ ಎಂದು ತಿಳಿಯಲಾಗಿದೆ.

ಆದರೆ, ವಿಶ್ವನಾಥ್ ಶೆಟ್ಟಿ ಹೇಳುವಂತೆ, ಇತ್ತೀಚೆಗೆ ಕೋರೆ ಮಾಲೀಕರಿಂದ ಅನೀಶ್ ಕೋಟಿಗಟ್ಟಲೇ ಹಣ ವಸೂಲಿ ಮಾಡಿಬಿಟ್ಟಿದ್ದ. ಇದರಿಂದ ಕೆರಳಿದ ಶೆಟ್ಟಿ ಹುಡುಗರು ಅನೀಶ್ ಸೋದರಿ ಮದ್ವೆ ಸಂದರ್ಭದಲ್ಲಿ ಹೇಮಂತ್ ಹಾಗೂ ಅನೀಶ್ ಪರಸ್ಪರ ಸಾವಿನ ಮುನ್ಸೂಚನೆ ಸಿಕ್ಕಿದೆ. ಈ ಸಮಯವನ್ನು ಬಳಸಿಕೊಂಡ ಶೆಟ್ಟಿ ತನ್ನ ಹೇಮಂತ್ ಮೂಲಕ ಅನೀಶ್ ಕಥೆ ಮುಗಿಸಿದ್ದಾರೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+