Get Updates
Get notified of breaking news, exclusive insights, and must-see stories!

ಅರಬ್ಬೀ ಸಮುದ್ರದಲ್ಲಿ ಸ್ನಾನಕ್ಕಿಳಿದ ವ್ಯಕ್ತಿ ನೀರು ಪಾಲು

ಮಾಸ್ತಿಕಟ್ಟೆ ನಿವಾಸಿ ಹನೀಫ್ ಮಾಸ್ತಿಕಟ್ಟೆ ಯವರಿಗೆ ಬಿಸಿಲಿನಿಂದಾಗಿ ಮೈಯಲ್ಲಿ ಹುಣ್ಣಾಗಿತ್ತು. ಇದರಿಂದ ಉಪ್ಪು ನೀರಿನ ಸ್ನಾನಕ್ಕೆಂದು ಅವರು ಬೆಳಿಗ್ಗೆ ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಸಮುದ್ರದ ಅಲೆಗಳಿಗೆ ಸಿಲುಕಿ ಸಮುದ್ರ ಪಾಲಾಗಿದ್ದಾರೆ.

ಮಂಗಳೂರು, ಏಪ್ರಿಲ್ 23: ಅರಬ್ಬೀ ಸಮುದ್ರದಲ್ಲಿ ಸ್ನಾನಕ್ಕಿಳಿದ ವ್ಯಕ್ತಿಯೋವ೯ರು ಸಮುದ್ರ ಪಾಲಾದ ಘಟನೆ ಭಾನುವಾರ ಸಂಭವಿಸಿದೆ. ಮಂಗಳೂರು ಹೊರವಲಯದ ಉಳ್ಳಾಲ ಸಮೀಪದ ಮುಕ್ಕಚ್ಚೇರಿ ಸೀಗ್ರೌಂಡ್ ಎಂಬಲ್ಲಿ ಈ ಘಟನೆ ಸಂಭವಿಸಿದೆ.

ಮಾಸ್ತಿಕಟ್ಟೆ ನಿವಾಸಿ ಹನೀಫ್ ಮಾಸ್ತಿಕಟ್ಟೆ (35) ಸಮುದ್ರಪಾಲಾದವರು. ಬಿಸಿಲಿನಿಂದಾಗಿ ಮೈಯಲ್ಲಿ ಹುಣ್ಣಾಗಿತ್ತು ಎಂದು ಉಪ್ಪು ನೀರಿನ ಸ್ನಾನಕ್ಕೆಂದು ಅವರು ಬೆಳಿಗ್ಗೆ ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ಸಮುದ್ರದ ಅಲೆಗಳಿಗೆ ಸಿಲುಕಿ ನಾಪತ್ತೆಯಾಗಿ ಸಮುದ್ರ ಪಾಲಾಗಿದ್ದಾರೆ.[ಬಾವಿಗೆ ಇಳಿಯುವ ಮೊದಲು ಆಳ ನೋಡಿ ಇಳಿಯುವುದು ಉತ್ತಮ]

 Man drown in Arabian Sea off Mangaluru’s Ullal

ಹನೀಫ್ ಮೃತ ದೇಹಕ್ಕಾಗಿ ಸ್ಥಳೀಯರು ಶೋಧ ಕಾಯ೯ ಮಂದುವರಿಸಿದ್ದಾರೆ. ವಿವಾಹಿತರಾಗಿದ್ದ ಹನೀಫ್ ಅವರಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ.

 Man drown in Arabian Sea off Mangaluru’s Ullal

ಬಿಹಾರ ಉದ್ಯೋಗಿಯ ಕೊಲೆ

ದೇರಳಕಟ್ಟೆಯ ತಾಜ್ ಹೊಟೇಲಿನಲ್ಲಿ ಕೆಲಸಕ್ಕಿದ್ದ ಬಿಹಾರ ಮೂಲದ ನಿತೇಶ್ ಎಂಬಾತನ್ನ ಆತನ ಸಹವರ್ತಿಗಳೇ ಕೊಲೆ ಮಾಡಿದ್ದಾರೆ.

ನಿತೇಶ್ ಸೇರಿದಂತೆ ಬಿಹಾರ ಮೂಲದ 6 ಜನರು ದೇರಳಕಟ್ಟೆಯ ಸಹರಾ ರೆಸಿಡೆನ್ಸಿಯಲ್ಲಿ ಬಾಡಿಗೆಗೆ ನೆಲೆಸಿದ್ದರು. ಶನಿವಾರ ಬೆಳಿಗ್ಗೆ ರೂಂನಲ್ಲಿ ನಿತೇಶ್ ಮತ್ತು ಪ್ರದೀಪ್ ಅವರು ಕೆಲಸಕ್ಕೆ ಹೊರಡುತ್ತಿದ್ದರು.[ಬಾವಿಗೆ ಇಳಿಯುವ ಮೊದಲು ಆಳ ನೋಡಿ ಇಳಿಯುವುದು ಉತ್ತಮ]

 Man drown in Arabian Sea off Mangaluru’s Ullal

ಈ ವೇಳೆ ರೂಂ ಒಳಗೆ ಬಂದ ಇನ್ನೋರ್ವ ರೂಂ ವಾಸಗಾರ ಕುಮಟಾ ನಿವಾಸಿ ಎಸ್ ಕೆ ತನ್ವೀರ್ ಯಾನೆ ಮುನ್ನ ನಿತೇಶ್ ಗೆ ಥಳಿಸಿದ್ದಾನೆ. ಮತ್ತೆ ಟೇಬಲ್ ಮೇಲಿದ್ದ ಚೂರಿಯಿಂದ ನಿತೇಶ್ ಕತ್ತಿಗೆ ಇರಿದಿದ್ದಾನೆ. ತಡೆಯಲು ಬಂದ ಪ್ರದೀಪ್ ಕೈಗೂ ಇರಿದಿದ್ದಾನೆ .

ರೂಂ ಒಳಗಡೆ ವಿಪರೀತ ರಕ್ತ ಸ್ರಾವವಾಗಿ ಗಂಭೀರ ಗಾಯ ಗೊಂಡ ನಿತೇಶನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಆರೋಪಿ ತನ್ವೀರ್ ತಲೆಮರೆಸಿಕೊಂಡಿದ್ದಾನೆ. ಉಳ್ಳಾಲ ಠಾಣಾ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+