ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಲೂಡೊ ಆಟಕ್ಕೂ ಪಂದ್ಯಾಟದ ಸ್ವರೂಪ

|
Google Oneindia Kannada News

ಮಂಗಳೂರು, ಜುಲೈ 4: ನಾಲ್ಕು ಮಕ್ಕಳು ಒಟ್ಟಿಗೆ ಸೇರಿದರೆ ಅಲ್ಲೊಂದು ಮಕ್ಕಳ ಪ್ರಪಂಚವೇ ಅನಾವರಣಗೊಳ್ಳುತ್ತದೆ. ಕಣ್ಣಾಮುಚ್ಚಾಲೆ, ಲಗೋರಿ, ಚಿನ್ನಿದಾಂಡು, ಕುಂಟಾಬಿಲ್ಲೆ, ಮರಕೋತಿ, ಐಸ್ ಪೈಸ್, ಗೋಲಿಯಾಟ ಹೀಗೆ ಏನೆಲ್ಲಾ ಆಟಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ಕೇವಲ ಕಂಪ್ಯೂಟರ್, ಆನ್ ಲೈನ್ ಆಟಗಳಿಗೆ ಸೀಮಿತವಾಗಿಬಿಟ್ಟಿದ್ದಾರೆ. ಆದರೂ ಕೆಲವು ಕಡೆ, ನಾಲ್ಕು ಮಕ್ಕಳು ಒಂದೆಡೆ ಕುಳಿತು ಆಡುವ ಹಾವು ಏಣಿ ಆಟ, ಲೂಡೊ ಸಹ ಅಪರೂಪಕ್ಕೆ ಕಾಣ ಸಿಗುತ್ತದೆ.

ಇತ್ತೀಚೆಗೆ ಅಪ್ಪಟ ಗ್ರಾಮೀಣ ಆಟವಾಗಿದ್ದ ಲಗೋರಿ ಆಟಕ್ಕೆ ರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ದೊರೆತಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಪಂದ್ಯಾಟಗಳನ್ನು ಆಯೋಜಿಸಲಾಗುತ್ತಿದೆ. ಈಗ ಲೂಡೊ ಆಟದ ಸರದಿ.

 ಕನ್ನಡ, ತುಳು ನಟ-ನಟಿಯರ ಸೆಲೆಬ್ರಿಟಿ ಲಗೋರಿ ಲೀಗ್ ಇನ್ನೇನು ಶುರು ಕನ್ನಡ, ತುಳು ನಟ-ನಟಿಯರ ಸೆಲೆಬ್ರಿಟಿ ಲಗೋರಿ ಲೀಗ್ ಇನ್ನೇನು ಶುರು

ಮಳೆಗಾಲದ ಸಂದರ್ಭ ಮನೆಯಲ್ಲಿ ನಾಲ್ಕೈದು ಮಂದಿ ಕುಳಿತು ಮನೋರಂಜನೆಗಾಗಿ ಆಡುವ ಲೂಡೊ ಆಟಕ್ಕೆ ಈಗ ಪಂದ್ಯದ ಸ್ವರೂಪ ನೀಡಲಾಗುತ್ತಿದೆ. ಈ ಹಿಂದೆ ರಾಷ್ಟ್ರೀಯ ಮಟ್ಟದಲ್ಲಿ ಲಗೋರಿ ಪಂದ್ಯಾಟಗಳನ್ನು ಆಯೋಜಿಸಿ ಗಮನ ಸೆಳೆದಿದ್ದ ಮಂಗಳೂರಿನ ಪಾಥ್‌ ವೇ ಸಂಸ್ಥೆ ಲೂಡೊ ಪಂದ್ಯ ನಡೆಸಲು ಸಿದ್ಧತೆ ನಡೆಸುತ್ತಿದೆ. ಲೂಡೊ ಆಟವನ್ನು ಮುಖ್ಯವಾಹಿನಿಗೆ ತರಬೇಕು ಎಂಬ ನಿಟ್ಟಿನಲ್ಲಿ ಪಾಥ್‌ ವೇ ಸಂಸ್ಥೆ ಲೂಡೊ ಟೂರ್ನಮೆಂಟ್ ಅನ್ನು ನಗರದಲ್ಲಿ ಆಯೋಜಿಸುತ್ತಿದೆ.

Ludo tournament in Mangaluru

ಪಾಥ್‌ ವೇ ಎಂಟರ್‌ಪ್ರೈಸಸ್ ವತಿಯಿಂದ ಲೆಟ್ಸ್ ಪಾರ್ಟಿ, ಜೆಸಿಐ, ಮೈ ರೋಡ್‌ ರನ್ನರ್ ಸಹಯೋಗದಲ್ಲಿ ರೋವರ್ ಅವರ ಸಹಕಾರದಲ್ಲಿ ಜುಲೈ 6 ಮತ್ತು 7ರಂದು ನಗರದ ಮಲ್ಲಿಕಟ್ಟೆ ಸುಮ ಸದನದಲ್ಲಿ ಲೂಡೊ ಟೂರ್ನಮೆಂಟ್ ಆಯೋಜಿಸಲಾಗಿದೆ. 6ರಂದು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿರುವ ಪಂದ್ಯಾಟ 7ರಂದು ಸಮಾರೋಪಗೊಳ್ಳಲಿದೆ.

ಲಗೋರಿ, ಬುಗುರಿ, ಗೋಲಿ, ಗಿಲ್ಲಿ-ದಾಂಡು, ಚಾಟರ ಬಿಲ್ಲು....ಲಗೋರಿ, ಬುಗುರಿ, ಗೋಲಿ, ಗಿಲ್ಲಿ-ದಾಂಡು, ಚಾಟರ ಬಿಲ್ಲು....

ಪಂದ್ಯದಲ್ಲಿ ಲೂಡೊ ಆಡಲು ಯಾವುದೇ ವಯಸ್ಸಿನ ಮಿತಿ ಇಲ್ಲ. ಎಲ್ಲರೂ ಮುಕ್ತವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಂದು ಬೋರ್ಡ್‌ನಲ್ಲಿ ನಾಲ್ಕು ಜನರಿಗೆ ಆಡಲು ಅವಕಾಶವಿದೆ. ಸ್ಪರ್ಧಿಗಳ ಸಂಖ್ಯೆಗನುಗುಣವಾಗಿ 15ಕ್ಕೂ ಹೆಚ್ಚು ಲೂಡೊ ಬೋರ್ಡ್‌ಗಳಲ್ಲಿ ಪಂದ್ಯಾಟ ನಡೆಯಲಿದೆ. ಬಹುಮಾನವು ನಗದು ಮತ್ತು ಟ್ರೋಫಿಯನ್ನು ಒಳಗೊಂಡಿದೆ.

English summary
Ludo, a game which was popular in every house and with all age group is now played as tournament. Path way institution organised Ludo tournament in Mangaluru on july 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X