ಚೈತ್ರಾ ಕುಂದಾಪುರ ತಂಡದ ಸದಸ್ಯನಿಗೆ ಸಭ್ಯತೆಯ ಪಾಠ ಮಾಡಿದ ನ್ಯಾಯಾಧೀಶರು
ಮಂಗಳೂರು, ಅಕ್ಟೋಬರ್.26: ಚೈತ್ರಾ ಕುಂದಾಪುರ ತಂಡದ ಸದಸ್ಯನೋರ್ವನಿಗೆ ನ್ಯಾಯಾಧೀಶರು ಸಭ್ಯತೆಯ ಪಾಠ ಮಾಡಿದ ಪ್ರಸಂಗ ಗುರುವಾರ (ಅ.26) ಸಂಜೆ ಸುಳ್ಯದ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಹಿಂದೂ ಜಾಗರಣಾ ವೇದಿಕೆ ಮುಖಂಡ ಗುರುಪ್ರಸಾದ್ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚೈತ್ರಾ ಕುಂದಾಪುರ ಹಾಗೂ ತಂಡದ ಸದಸ್ಯರನ್ನು ನಿನ್ನೆ ಪೊಲೀಸರು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಈ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ತಂಡದ ಸದಸ್ಯನಿಗೆ ಸುಳ್ಯದ ಜೆ ಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರು ಸಭ್ಯತೆಯ ಪಾಠ ಹೇಳಿದ್ದಾರೆ.

ಕೂದಲು ಹಾಗೂ ಗಡ್ಡ ಬಿಟ್ಟುಕೊಂಡಿದ್ದ ಯುವಕನನ್ನು ಗಮನಿಸಿದ ನ್ಯಾಯಾಧೀಶರು ಇದೇನು ಭಾರತನಾ ಅಥವಾ ವಿದೇಶನಾ? ಕೂದಲನ್ನು ಹೆಣ್ಣುಮಕ್ಕಳಂತೆ ಬಿಟ್ಟುಕೊಂಡಿದ್ಯಲ್ಲಾ? ಎಂದು ಪ್ರಶ್ನಿಸಿದ್ದಾರೆ. ಇನ್ನೊಮ್ಮೆ ನ್ಯಾಯಾಲಯಕ್ಕೆ ಬರುವಾಗ ಎಲ್ಲಾ ಕತ್ತರಿಸಿ ನೀಟಾಗಿ ಬರಬೇಕೆಂದು ಆದೇಶಿಸಿದ್ದಾರೆ.
ಅಲ್ಲದೇ ಫೇಸ್ ಬುಕ್ ನಲ್ಲಿ ಚೈತ್ರಾ ಕುಂದಾಪುರ ಅವರ ವಿರುದ್ಧ ಪ್ರಕಟಿಸಿರುವ ಕಮೆಂಟ್ ಗಳಿಗೂ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ಪೋಲಿಸರು ಈ ಬಗ್ಗೆ ನಿಗಾವಹಿಸಬೇಕು ಎಂದು ಸೂಚಿಸಿದ್ದಾರೆ.












Click it and Unblock the Notifications