ಕರಾವಳಿಗೆ ಸೌತೆ ಕದಿಯಲು ಬಂದು ಸಿಕ್ಕಿಬಿದ್ದರು

ಮಂಗಳೂರು, ಏ.9: ಭಾರತೀಯ ಕಡಲ ವಿಶೇಷ ಆರ್ಥಿಕ ವಲಯ(ಇಇಜಡ್) ಗಡಿಯನ್ನು ದಾಟಿ ಕಡಲ ಸೌತೆ ಕದಿಯುತ್ತಿದ್ದ ಶ್ರೀಲಂಕನ್ನರನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ಬಂಧಿಸಿದ್ದಾರೆ.

ಸ್ಥಳೀಯ ಮೀನುಗಾರರ ಮಾಹಿತಿ ಆಧಾರಿಸಿ ಬಲೆ ಬೀಸಿದ ಭಾರತೀಯ ಕರಾವಳಿ ತಟ ರಕ್ಷಣಾ ಪಡೆ ICGS ರಾಜದೂತ್ ಹಡಗಿನ ಮೂಲಕ ನವಮಂಗಳೂರು ಬಂದರಿನಿಂದ 188 ನಾಟಿಕಲ್ ಮೈಲು ದೂರದ ಚೆರಿಯಪಾನಿ ರೀಫ್ ‌ನಲ್ಲಿ ಶ್ರೀಲಂಕಾದ ಬೋಟ್ ಪತ್ತೆ ಹಚ್ಚಿದ್ದಾರೆ. ಅದರಲ್ಲಿದ್ದ 16 ಮಂದಿ ಶ್ರೀಲಂಕಾ ಮೀನುಗಾರರನ್ನು ಬಂಧಿಸಲಾಗಿದೆ. ಭಾರತೀಯ ಮೀಸಲು ಆರ್ಥಿಕ ವಲಯದಲ್ಲಿ ಅಕ್ರಮ ಪ್ರವೇಶ ಹಾಗೂ ಕಡಲ ಸೌತೆ(ಏನಿದು sea cucumber?) ಕದ್ದ ಆರೋಪವನ್ನು ಇವರ ಮೇಲೆ ಹೊರೆಸಲಾಗಿದೆ. ಬೋಟ್, ಸುಸಜ್ಜಿತ ಡೈವಿಂಗ್ ಸಾಮಗ್ರಿಗಳ ಸಹಿತ 1.2 ಲಕ್ಷ ಡಾಲರ್ ವೌಲ್ಯದ 2 ಟನ್ ಕಡಲು ಸೌತೆ ವಶಪಡಿಸಿಕೊಳ್ಳಲಾಗಿದೆ.


ಕರ್ನಾಟಕ ಕರಾವಳಿ ತಟರಕ್ಷಣಾ ಪಡೆಯ ಡಿಐಜಿ ರಾಜಮಣಿ ಶರ್ಮ ಅವರು ಪಣಂಬೂರಿನ ಕರಾವಳಿ ತಟರಕ್ಷಣಾ ಪಡೆಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ವಿವರ ನೀಡಿದರು. ಶ್ರೀಲಂಕಾದ ಸಮುದ್ರದ ಮೀನುಗಾರಿಕೆ ಪರವಾನಿಗೆ ಹೊಂದಿರುವ ಕೊಲಂಬೊ ಮೆರೈನ್ ಎಂಬ ಬೋಟನ್ನು ಕರಾವಳಿ ತಟ ರಕ್ಷಣಾ ಪಡೆಯ ಹಡಗು ಪತ್ತೆಹಚ್ಚಿದ್ದು, ಅದರಲ್ಲಿದ್ದ 16 ಮೀನುಗಾರರನ್ನು ವಶಕ್ಕೆ ತೆಗೆದುಕೊಂಡಿದೆ. ಅಲ್ಲದೇ 1.2 ಲಕ್ಷ ಡಾಲರ್ ವೌಲ್ಯದ 2 ಟನ್ ತೂಕದ ವನ್ಯ ಪದಾರ್ಥ ಕಡಲು ಸೌತೆಯನ್ನು ವಶಪಡಿಸಿಕೊಳ್ಳಲಾಗಿದೆ.

ಲಕ್ಷದ್ವೀಪ, ಅಂಡಮಾನ್ ನಿಕೋಬಾರ್ ನಂಥ ದ್ವೀಪ ಪ್ರದೇಶಗಳಲ್ಲಿ ಕಂಡು ಬರುವ ಕಡಲು ಸೌತೆ ಔಷಧೀಯ ಗುಣವುಳ್ಳ ತರಕಾರಿಯಾಗಿದೆ. ಭಾರತದಲ್ಲಿ ಇದರ ಬಳಕೆ ಅಪರೂಪವಾಗಿದ್ದು, ಅಳಿವಿನಂಚಿನಲ್ಲಿರುವ ಈ ಕಾಡುತ್ಪನ್ನದ ಸಾಗಾಟ, ಬಳಕೆಯನ್ನು ಸರಕಾರ ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಬಂಧಿತ ಶ್ರೀಲಂಕಾ ಮೀನುಗಾರರ ವಿಚಾರಣೆ ನಡೆಯುತ್ತಿದ್ದು, ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು

Lankan poachers caught

ರಾತ್ರಿ ವೇಳೆ ಮೀನುಗಾರರು ಹಡಗಿನಲ್ಲಿದ್ದ ಸುಸಜ್ಜಿತ ಡೈವಿಂಗ್ ಸಾಧನಗಳನ್ನು ಬಳಸಿ ಸಮುದ್ರ ತೀರದ ದ್ವೀಪ ಪ್ರದೇಶಗಳಿಗೆ ತೆರಳಿ ಅಲ್ಲಿಂದ ಕಡಲು ಸೌತೆಯನ್ನು ತಂದು ಹಡಗಿಗೆ ತುಂಬುತ್ತಿದ್ದರು. ಕಡಲು ಸೌತೆ ಕೆಡದಂತೆ ಐಸ್ ಹಾಕಿಡುತ್ತಿದ್ದರು. ಬಳಿಕ ಅವುಗಳನ್ನು ಬೋಟ್ ‌ನಲ್ಲೇ ಬೇಯಿಸಿ ಉಪ್ಪು ಹಾಕಿ ಒಣಗಿ ಸುವ ಪ್ರಕ್ರಿಯೆಯನ್ನು ಅವರು ಮಾಡುತ್ತಿದ್ದರು. ಹಡಗಿನಲ್ಲಿದ್ದ ಎರಡು ಟನ್ ಕಡಲು ಸೌತೆಯಲ್ಲಿ 500 ಕಿಲೋದಷ್ಟು ಒಣಗಿಸಲಾಗಿತ್ತು. ಚೀನಾ ಮತ್ತು ಆಗ್ನೇಯ ಏಷ್ಯಾದಲ್ಲಿ ಈ ಕಡಲು ಉತ್ಪನ್ನಕ್ಕೆ ಬಹು ಬೇಡಿಕೆ ಇದೆ. ಇದನ್ನು ಅಲ್ಲಿ ಆಹಾರ ಪದಾರ್ಥವಾಗಿ, ಔಷಧಿಗಾಗಿ ಹಾಗೂ ಕಾಂತಿ ವರ್ಧಕಗಳಲ್ಲೂ ಇದನ್ನು ಉಪಯೋಗಿಸಲಾಗುತ್ತದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+