ಪೊಲೀಸರ ಮೇಲೆ ಹಲ್ಲೆ ಮಾಡಿದ ಮಹಿಳೆ ಬಂಧನ
ಮಂಗಳೂರು, ಜು.25 : ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡಿದ್ದಕ್ಕಾಗಿ ದಂಡ ಕಟ್ಟಿ ಎಂದು ಹೇಳಿದ ಮಹಿಳಾ ಪಿಎಸ್ಐಗೆ ಕಪಾಳ ಮೋಕ್ಷ ಮಾಡಿದ್ದ ಮಹಿಳೆಯನ್ನು ಪೊಲೀಸರು ಶುಕ್ರವಾರ ಬೆಳಗ್ಗೆ ಬಂಧಿಸಿದ್ದಾರೆ. ಬಂಧಿತ ಮಹಿಳೆ ಪಿಂಜಲ್ ಗಾಂಧಿ ಗುಜರಾತ್ ಮೂಲದವರಾಗಿದ್ದು, ಕೇರಳದ ಪಯನೂರಿನ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಂಪನಕಟ್ಟೆ ವೃತ್ತದಲ್ಲಿ ಮಹಿಳಾ ಪಿಎಸ್ಐ ಭವ್ಯಾ ಅವರ ಮೇಲೆ ಹಲ್ಲೆ ಮಾಡಿದ ಪ್ರಕಕರಣಕ್ಕೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸರು ಪಿಂಜಲ್ ಗಾಂಧಿ ಅವರನ್ನು ಶುಕ್ರವಾರ ಬೆಳಗ್ಗೆ ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 323, 332 (ಕರ್ತವ್ಯಕ್ಕೆ ಅಡ್ಡಿ), 504, 506 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹಿಂದಿನ ಸುದ್ದಿ : ಮಂಗಳೂರಿನ ಹಂಪನಕಟ್ಟೆ ಸಿಗ್ನಲ್ ವೃತ್ತದಲ್ಲಿ ಗುರುವಾರ ಸಂಜೆ ಮಹಿಳೆಯೊಬ್ಬರು ಸಂಚಾರಿ ವಿಭಾಗದ ಮಹಿಳಾ ಪಿಎಸ್‌ಐ ಮತ್ತು ಇತರ ಇಬ್ಬರು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳೆಯನ್ನು ಬಂಧಿಸಿದ ಪೊಲೀಸರು ಪಾಂಡೇಶ್ವರ ಠಾಣೆಗೆ ಕೆರೆದುಕೊಂಡು ಹೋಗಿದ್ದರು. ಅಲ್ಲಿಂದಲೂ ಆಕೆ ಪರಾರಿಯಾಗಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಮತ್ತು ಹಲ್ಲೆ ನಡೆಸಿದ ಬಗ್ಗೆ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ. [ಆರ್ ಟಿಒ ಜತೆ 'ರಿಚ್' ಯುವತಿ ರಚ್ಚೆ]
ಪೊಲೀಸರ ಮೇಲೆ ಹಲ್ಲೆ ಮಾಡಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ಮಹಿಳೆ, ಪೊಲೀಸ್ ಠಾಣೆಗೆ ಬಂದಿದ್ದ ತನ್ನ ಪತಿಯ ಮೇಲೂ ರೇಗಾಡಿದ್ದಾಳೆ. ನಾನು ದಂಡ ಕಟ್ಟುವುದಿಲ್ಲ, ಏನು ಬೇಕಾದರೂ ಕೇಸ್ ಹಾಕಿಕೊಳ್ಳಿ ಎಂದು ಪೊಲೀಸರಿಗೆ ಸವಾಲು ಹಾಕಿದ್ದಾಳೆ. ಮಹಿಳೆಯಿಂದ ಹಲ್ಲೆಗೊಳಗಾದ ಪಿಎಸ್‌ಐ ಭವ್ಯಾ ಅವರು ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆಯ ವಿವರ ಇಲ್ಲಿದೆ

ಸಂಚಾರಿ ಪೊಲೀಸರಿಗೆ ಥಳಿಸಿದ ಮಹಿಳೆ
ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡಿದ್ದಕ್ಕಾಗಿ ದಂಡ ಕಟ್ಟಿ ಎಂದು ಹೇಳಿದ ಮಹಿಳಾ ಪಿಎಸ್ಐಗೆ ಮಹಿಳೆಯೊಬ್ಬಳು ಕಪಾಳ ಮೋಕ್ಷ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿದ ಮಹಿಳೆಯನ್ನು ಠಾಣೆಗೆ ಕರೆತಂದರೂ ಅಲ್ಲಿಂದಲೂ ಆಕೆ ಓಡಿ ಹೋಗಿದ್ದಾಳೆ.

ರಾತ್ರಿ 7.30ರ ಸುಮಾರಿಗೆ ಘಟನೆ
ಮಂಗಳೂರಿನ ಹಂಪನಕಟ್ಟೆ ಸಿಗ್ನಲ್ ವೃತ್ತದಲ್ಲಿ ಗುರುವಾರ ಸಂಜೆ 7.30ರ ಸುಮಾರಿಗೆ ಪಿಂಜಲ್ ಗಾಂಧಿ ಎಂಬ ಮಹಿಳೆ ಸಂಚಾರಿ ವಿಭಾಗದ ಮಹಿಳಾ ಪಿಎಸ್ಐ ಭವ್ಯಾ ಮತ್ತು ಇತರ ಇಬ್ಬರು ಸಿಬ್ಬಂದಿಗಳಾದ ಚಿನ್ನಮ್ಮ ಮತ್ತು ತಸ್ಲಿಂ ಆರಿಫ್ ಮೇಲೆ ಹಲ್ಲೆ ನಡೆಸಿದ್ದಾರೆ.

ಪೊಲೀಸ್ ಠಾಣೆಯಿಂದ ಪರಾರಿ
ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಮಹಿಳೆಯನ್ನು ಬಂಧಿಸಿದ ಪೊಲೀಸರು ಪಾಂಡೇಶ್ವರ ಠಾಣೆಗೆ ಕೆರೆದುಕೊಂಡು ಹೋಗಿದ್ದರು. ಅಲ್ಲಿಂದಲೂ ಆಕೆ ಪರಾರಿಯಾಗಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಮತ್ತು ಹಲ್ಲೆ ನಡೆಸಿದ ಬಗ್ಗೆ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ.

ಬೈಕ್ ನಿಲ್ಲಿಸಿದ ಭವ್ಯಾ
ಗುರುವಾರ ಸಂಜೆ 7.30 ರ ಸುಮಾರಿಗೆ ಹಂಪನಕಟ್ಟೆ ಸಿಗ್ನಲ್ ಮೂಲಕ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬಂದ ಮಹಿಳೆ ಪಿಂಜಲ್ ಗಾಂಧಿ ಹೆಲ್ಮೆಟ್ ಧರಿಸಿರಲಿಲ್ಲ. ಪಿಎಸ್‌ಐ ಭವ್ಯಾ ಅವರು ಆಕೆಯನ್ನು ತಡೆದು ನಿಲ್ಲಿಸಿ ಹೆಲ್ಮೆಟ್ ಧಾರಣೆ ಮಾಡದ್ದಕ್ಕಾಗಿ ದಂಡ ಪಾವತಿಸ ಬೇಕು ಎಂದು ತಿಳಿಸಿದಾಗ, "ನಾನು ಹೆಲ್ಮೆಟ್ ಧರಿಸುವುದಿಲ್ಲ; ಏನು ಮಾಡ್ತೀರಿ" ಎಂದು ಉಡಾಫೆಯ ಉತ್ತರ ನೀಡಿದ್ದಾರೆ.

ಸಿಬ್ಬಂದಿ ಮೇಲೆಯೂ ಹಲ್ಲೆ
ಅಷ್ಟರಲ್ಲಿ ಚಿನ್ನಮ್ಮ ಮತ್ತು ತಸ್ಲಿಂ ಆರಿಫ್ ಎಂಬ ಸಿಬ್ಬಂದಿಯೂ ಅಲ್ಲಿಗೆ ಆಗಮಿಸಿದ್ದಾರೆ. ಅವರ ಜೊತೆಗೆ ಜಗಳವಾಡಿದ ಪಿಂಜಲ್ ಗಾಂಧಿ ಅವರು ಪಿಎಸ್‌ಐ ಮತ್ತು ಇತರ ಇಬ್ಬರು ಕರ್ತವ್ಯ ನಿರತ ಪೊಲೀಸ್ ಸಿಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.












Click it and Unblock the Notifications