ಕುಂದಾಪುರದ ಕಾರ್ಟೂನ್ ಹಬ್ಬಕ್ಕೆ ಹೋಗೋಣ ಬನ್ನಿ

ಕುಂದಾಪುರ, ಡಿಸೆಂಬರ್, 09: ದುಡ್ಡ್ ಮಾಡ್ಕ್ ಅಂದೇಳಿ ಹ್ವಾರೆ ದುಡ್ಡ್ ಮಾತ್ರ ಮಾಡ್ಲಕ್ ! ಹೆಸ್ರ್ ಮಾಡ್ಕ ಅಂದೇಳಿ ಹ್ವಾರೆ ಹೆಸ್ರ್ ಮಾತ್ರ ಮಾಡ್ಲಕ್ !! ಅದೇ ಕೆಲ್ಸೂ ಮಾಡ್ಕ್ ಅಂದೇಳಿ ಹ್ವಾರೇ ದುಡ್ಡ್ - ಹೆಸ್ರ್ ಎರ್ಡು ಮಾಡ್ಲಕ್ !!! ಶ್ರಮಜೀವಿಗಳಾಗೊಣ.

ಕುಂದಾಪುರ ಈ ಡೈಲಾಗ್ ಇಡೀ ಜೀವನ ಪಾಠವನ್ನು ನಮ್ಮ ಮುಂದೆ ಇಡುತ್ತದೆ. ಇದಕ್ಕೆ ವ್ಯಂಗ್ಯಚಿತ್ರಗಳ ಸಾಥ್ ಸಿಕ್ಕರೆ! ವ್ಯಂಗ ಚಿತ್ರಗಳ ವೈಶಿಷ್ಟವೇ ಅಂಥದ್ದು. ಕೇವಲ ಒಂದು ಚಿತ್ರದಲ್ಲಿ ಇಡೀ ಸಮಾಜದ ವಕ್ರರೇಖೆಯನ್ನು ತೆರೆದಿಡುವ ಸಾಮರ್ಥ್ಯಕ್ಕೆ ಸರಿಸಾಟಿ ಯಾವುದು?[ಶಂಕರ್ ಕಾರ್ಟೂನಿಸ್ಟ್ ಮತ್ತು ಸೊಗಸಾದ ಕಾಫಿ ಪರಿಮಳ]

Kundapur: Cartoon festival on December 10 to 13

ಇಂಥ ವ್ಯಂಗ್ಯಚಿತ್ರಗಳ ಮೂಲಕ ಮನೆಮಾತಾಗಿರುವ ಅನೇಕರನ್ನು ಭೇಟಿ ಮಾಡಲು, ಸಂವಾದ ನಡೆಸಲು ಅವಕಾಶವೊಂದು ಒದಗಿ ಬಂದಿದೆ. ಖ್ಯಾತ ವ್ಯಂಗ್ಯಚಿತ್ರಚಾರ ಸತೀಶ್ ಆಚಾರ್ಯ ಅವರ ನೇತೃತ್ವದಲ್ಲಿ ಕುಂದಾಪುರದ ಕಲಾಮಂದಿರದಲ್ಲಿ ಡಿಸೆಂಬರ್ 10 ರಿಂದ 13ವರೆಗೆ ಕಾರ್ಟೂನ್ ಹಬ್ಬ ನಡೆಯಲಿದೆ. ಉದ್ಯಮಿ ಆನಂದ ಸಿ. ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

'ಕಾರ್ಟೂನ್ ಹಬ್ಬ, ಹಾಸ್ಯದ ಹೈವೇ' ಎಂಬ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕಾರ್ಟೂನ್ ಪ್ರದರ್ಶನ, ಖ್ಯಾತ ವ್ಯಂಗ್ಯಚಿತ್ರಕಾರರೊಂದಿಗೆ ಸಂವಾದ, ವಿದ್ಯಾರ್ಥಿನಿಯರಿಗೆ ಮಾಯಾ ಕಾಮತ್ ಕಾರ್ಟೂನ್ ಸ್ವರ್ಧೆ, ವೈದ್ಯರಿಗೆ ಡೂಡ್ಲಿಂಗ್ ವಿತ್ ಡಾಕ್ಟರ್, ವಿದ್ಯಾರ್ಥಿಗಳಿಗೆ ವ್ಯಂಗ್ಯಚಿತ್ರ ಸ್ವರ್ಧೆ, ಸಾರ್ವಜನಿಕರಿಗೆ ಕಾರ್ಟೂನ್ ಡೈಲಾಗ್ ಬರೆಯೋ ಸ್ವರ್ಧೆ, ಸೆಲ್ಫಿ ಕಾರ್ನ್‍ರರ್, ಲೈವ್ ಕ್ಯಾರಿಕೇಚರ್.... ಹೀಗೆ ಸ್ಪರ್ಧೆಗಳ ಸರಮಾಲೆಯೇ ನಡೆಯಲಿದೆ.

ಪಾರಿಜಾತ-ಪ್ರೀತಿ ಫಾರ್ಮ್ಸ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ನೀವು ಸ್ಥಳದಲ್ಲಿಯೇ ಕ್ಯಾರಿಕೇಚರ್ ಬಿಡಿಸಿ ನಗದು ಬಹುಮಾನವನ್ನು ಗೆಲ್ಲಬಹುದು.[ನಾನು ಕನ್ನಡಿಗ ಎಂದ ಲಕ್ಷ್ಮಣ್ ನೆನಪು]

Kundapur: Cartoon festival on December 10 to 13

ಕಾರ್ಟೂನ್ ಹಬ್ಬದದಲ್ಲಿ ಏನೇನಿದೆ?

* ಡಿಸೆಂಬರ್ 11
ಬೆಳಿಗ್ಗೆ: ಉದ್ಘಾಟನೆ
ಮಧ್ಯಾಹ್ನ 3 ಗಂಟೆ: ರೋಟರಿ ಕುಂದಾಪುರದೊಂದಿಗೆ ಲೈವ್ ಕ್ಯಾರಿಕೇಚರ್ ಚಿತ್ರದಾನ

* ಡಿಸೆಂಬರ್ 12
ಬೆಳಗ್ಗೆ 11 ಗಂಟೆ: ಖ್ಯಾತ ವ್ಯಂಗಚಿತ್ರಕಾರರಾದ ಪಿ ಮಹಮ್ಮದ್, ಪ್ರಕಾಶ್ ಶೆಟ್ಟಿ ಹಾಗೂ ಸತೀಶ್ ಆಚಾರ್ಯ ಅವರಿಂದ ಲೈವ್ ಪೊಲಿಟಿಕಲ್ ಕಾರ್ಟೂನು ರಚನೆ, ಸಂವಾದ

ಮಧ್ಯಾಹ್ನ 2.30 ಗಂಟೆ: ವಿದ್ಯಾರ್ಥಿಗಳಿಗೆ ಕಾರ್ಟೂನ್ ಸ್ಪರ್ಧೆ

* ಡಿಸೆಂಬರ್ 13

ಬೆಳಗ್ಗೆ 11 ಗಂಟೆ: ವೈದ್ಯರಿಗೆ ಕಾರ್ಟೂನ್ ವರ್ಕ್ ಶಾಪ್.

ಮಧ್ಯಾಹ್ನ 3 ಗಂಟೆ: ವಿದ್ಯಾರ್ಥಿನಿಯರಿಗೆ ಮಾಯಾ ಕಾಮತ್ ಕಾರ್ಟೂನ್ ಸ್ವರ್ಧೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+