• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಅನಂತ ಕುಮಾರ್ ಸಚಿವರಾದ ಬಳಿಕ ರಸಗೊಬ್ಬರದ ಕೊರತೆಯಾಗಿಲ್ಲ'

|

ಮಂಗಳೂರು, ನವೆಂಬರ್. 12: ಕೇಂದ್ರ ಸಚಿವ ಅನಂತ ಕುಮಾರ್ ನಿಧನಕ್ಕೆ ರಾಜಕೀಯ ಮುಖಂಡರು ಕಂಬನಿ ಮಿಡಿಯುತ್ತಿದ್ದು, ಮಂಗಳೂರಿನಲ್ಲಿ ಈ ಕುರಿತು ಮಾತನಾಡಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ರಾಜ್ಯಕ್ಕೆ ಕೇಂದ್ರದಿಂದ ಅನುದಾನ ತರಲು ಅನಂತ್ ಕುಮಾರ್ ಪಾತ್ರ ಅಪಾರ.

ಶ್ರದ್ಧಾಂಜಲಿ:ರಾಜ್ಯ ನಾಯಕರ ಮನದಲ್ಲಿ 'ಅನಂತ'ಭಾವ

ಅನಂತ ಕುಮಾರ್ ಅಗಲಿಕೆಯಿಂದ ರಾಷ್ಟ್ರ ಮತ್ತು ರಾಜ್ಯಕ್ಕೆ ನಷ್ಟ ಉಂಟಾಗಿದೆ. ಅನಂತಕುಮಾರ್ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಮೇಲೆ ರಸಗೊಬ್ಬರ ಕ್ಷೇತ್ರಗಳಲ್ಲಿ ಅಪಾರ ಸುಧಾರಣೆ ತಂದರು. ಅವರು ಸಚಿವರಾದ ಬಳಿಕ ರಾಷ್ಟ್ರದಲ್ಲಿ ಒಂದು ದಿನವೂ ರಸಗೊಬ್ಬರದ ಕೊರತೆ ಕಂಡಿಲ್ಲ.

ಅನಂತತಾನಂತವಾಗಿ.... ಅಗಲಿದ ನಾಯಕಗೆ ಗಣ್ಯರ ಅಶ್ರುತರ್ಪಣ

ಮಾಜಿ ಪ್ರಧಾನಿ ಅಟಲ್ ಜೀ ಅವರ ಚಿತಾಭಸ್ಮ ವಿಸರ್ಜನೆ ಸಂದರ್ಭದಲ್ಲಿ ಅನಂತ ಕುಮಾರ್ ಅವರ ಆರೋಗ್ಯದಲ್ಲಿ ವ್ಯತ್ಯಾಸ ಇತ್ತು. ಅವರನ್ನು ಮುಟ್ಟಿದ ಸಂದರ್ಭದಲ್ಲಿ ಅನುಭವವಾಗುತ್ತಿತ್ತು. ಅನಂತ ಕುಮಾರ್ ಆತ್ಮಕ್ಕೆ‌ ದೇವರು ಸದ್ಗತಿ ನೀಡಲಿ ಎಂದು ಕೋಟಾ ಶ್ರೀನಿವಾಸ ಪೂಜಾರಿ ಪ್ರಾರ್ಥಿಸಿದ್ದಾರೆ.

English summary
MLC Kota Srinivas Poojary pays his condolence to Union Minister Ananth Kumar for his demise
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X