ಕೊಚ್ಚಿ-ಮಂಗಳೂರು ಗ್ಯಾಸ್ ಪೈಪ್‌ಲೈನ್ ಆಗಸ್ಟ್‌ನಲ್ಲಿ ಪೂರ್ಣ
ಮಂಗಳೂರು, ಜುಲೈ 23 : ಕೊಚ್ಚಿ- ಮಂಗಳೂರು ನಡುವಿನ ಗ್ಯಾಸ್ ಪೈಪ್ ಲೈನ್ ಯೋಜನೆ ಆಗಸ್ಟ್‌ನಲ್ಲಿ ಪೂರ್ಣಗೊಳ್ಳಲಿದೆ. 2,915 ಕೋಟಿ ರೂ.ಗಳ ಬೃಹತ್ ಮೊತ್ತದ ಯೋಜನೆ ಇದಾಗಿದೆ.
Recommended Video
ಮಂಗಳೂರಿಗೆ ರಿಗ್ಯಾಸಿಫೈಡ್ ಲಿಕ್ವಿಡ್ ನ್ಯಾಚುರಲ್ ಗ್ಯಾಸ್ (ಆರ್‌ಎಲ್‌ಎನ್‌ಜಿ) ಪೂರೈಕೆ ಮಾಡುವ ಯೋಜನೆಯನ್ನು ಜಿಎಐಎಲ್ ಆರಂಭಿಸಿತ್ತು. 2009ರಲ್ಲಿ ಆರಂಭವಾದ ಯೋಜನೆ ಈಗ ಪೂರ್ಣಗೊಳ್ಳುತ್ತಿದೆ.
ಗ್ಯಾಸ್ ಪೈಪ್ ಲೈನ್ ಸುರಕ್ಷತೆ ಮತ್ತು ಭೂ ಸ್ವಾಧೀನದ ವಿಚಾರದ ಕಾರಣಕ್ಕೆ ಯೋಜನೆ ವಿಳಂಬವಾಯಿತು. 444 ಕಿ. ಮೀ. ಉದ್ದದ ಈ ಯೋಜನೆಯ ವೆಚ್ಚ ಈಗ 5,751 ಕೋಟಿಗೆ ಏರಿಕೆಯಾಗಿದೆ.

ಕೊನೆಯ ಹಂತದ ಇಂಜಿನಿಯರಿಂಗ್ ಕೆಲಸಗಳು ನಡೆಯುತ್ತಿದ್ದು, ಆಗಸ್ಟ್‌ನಲ್ಲಿ ಯೋಜನೆ ಪೂರ್ಣವಾಗಲಿದೆ. ಕಾಸರಗೋಡಿನ ಚಂದ್ರಗಿರಿ ನದಿಯಯಲ್ಲಿ ಪೈಪ್ ಅಳವಡಿಕೆ ಮಾಡುವುದು ಸವಾಲಿನ ಕೆಲಸವಾಗಿತ್ತು.
1.5 ಕಿ. ಮೀ. ಮಾರ್ಗದ ಕೆಲವು ಭಾಗದ ಕಾಮಗಾರಿ ಮಾತ್ರ ಬಾಕಿ ಉಳಿದಿದ್ದು, ಅದು ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ. ಪೈಪ್‌ಲೈನ್ ಮಾರ್ಗವನ್ನು ಎಂದು ಉದ್ಘಾಟನೆ ಮಾಡಲಾಗುತ್ತದೆ ಎಂದು ಇನ್ನೂ ದಿನಾಂಕ ನಿಗದಿ ಮಾಡಿಲ್ಲ.
ಚಂದ್ರಗಿರಿ ನದಿಯಲ್ಲಿ 1.5 ಕಿ. ಮೀ. ಉದ್ದ ಪೈಪ್ ಲೈನ್ ಇದೆ. ನದಿಯೊಳಗೆ ಕೆಲವು ಕಡೆ 8 ಮೀಟರ್ ಆಳದಲ್ಲಿ ಪೈಪ್‌ಗಳನ್ನು ಹಾಕಲಾಗಿದೆ. ನದಿ ಮತ್ತು ಸಮುದ್ರದ ಕಾರಣದಿಂದಾಗಿಯೇ ಯೋಜನೆಯ ಕೆಲಸಗಳು ಸ್ವಲ್ಪ ವಿಳಂಬವಾಗಿದೆ.
2013ರಲ್ಲಿ ಕೊಚ್ಚಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಯೋಜನೆಗೆ ಚಾಲನೆ ನೀಡಲಾಗಿದೆ. 2016ರಿಂದ ಅದಾನಿ ಗ್ರೂಪ್ ಗ್ಯಾಸ್ ಪೂರೈಕೆ ಮಾಡುತ್ತಿದೆ. ಈ ಪೈಪ್ ಲೈನ್ ಮೂಲಕ ಪ್ರಸ್ತುತ ಪ್ರತಿದಿನ 3.8 ಮಿಲಿಯನ್ ಕ್ಯೂಬಿಕ್ ಗ್ಯಾಸ್‌ಗಳನ್ನು ಕೈಗಾರಿಕೆ ಮತ್ತು ಮನೆಗಳಿಗೆ ನೀಡಲಾಗುತ್ತಿದೆ.












Click it and Unblock the Notifications