ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿ ರಕ್ಷಣೆಗೆ ಬಂದ ಹೋವರ್‌ ಕ್ರಾಫ್ಟ್‌ಗಳು

|
Google Oneindia Kannada News

ಮಂಗಳೂರು, ನ.11 : ಕರಾವಳಿ ತಟರಕ್ಷಣಾ ಪಡೆಯ (ಕೋಸ್ಟ್‌ಗಾರ್ಡ್‌) ಕರ್ನಾಟಕ ವಲಯಕ್ಕೆ ಹೊಸದಾಗಿ ಅತ್ಯಾಧುನಿಕ ಹೋವರ್‌ ಕ್ರಾಫ್ಟ್ ಎಸಿವಿ ಐಸಿಜಿಎಸ್‌ ಎಚ್‌-196 ಹಾಗೂ ಎಚ್‌-198 ಕಣ್ಗಾವಲು ನೌಕೆಗಳು ಸೇರ್ಪಡೆಗೊಂಡಿವೆ. ಗಂಟೆಗೆ 45 ನಾಟಿಕಲ್‌ ಮೈಲು ವೇಗದಲ್ಲಿ ಚಲಿಸುವ ಶಕ್ತಿಯನ್ನು ಇವು ಹೊಂದಿವೆ.

ಪಣಂಬೂರಿನಲ್ಲಿರುವ ಕೋಸ್ಟ್‌ಗಾರ್ಡ್‌ ಮಂಗಳೂರು ಕೇಂದ್ರ ಕಚೇರಿಯಲ್ಲಿ ಸೋಮವಾರ ರಾಜ್ಯಪಾಲ ವಜೂಭಾಯಿ ವಾಲಾ ಅವರು ಹೋವರ್‌ಕ್ರಾಫ್ಟ್ ಎಸಿವಿ ಐಸಿಜಿಎಸ್‌ ಎಚ್‌-196 ಹಾಗೂ ಎಚ್‌-198 ಕಣ್ಗಾವಲು ನೌಕೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ.

ಈ ಹೋವರ್‌ ಕ್ರಾಫ್ಟ್‌ಗಳನ್ನು ಇಂಗ್ಲೆಂಡ್‌ನ‌ ಗ್ರಿಫೂನ್‌ ಹೋವರ್‌ ವರ್ಕ್ಸ್ ಲಿ. ನಿರ್ಮಿಸಿದೆ. 21 ಮೀಟರ್ ಉದ್ದ ಮತ್ತು 31 ಟನ್ ಭಾರವಿರುವ ಇವು ಗಂಟೆಗೆ 45 ನಾಟಿಕಲ್ ಮೈಲು ವೇಗದಲ್ಲಿ ಚಲಿಸುವ ಶಕ್ತಿ ಹೊಂದಿವೆ. 2 ಅಧಿಕಾರಿಗಳು 11 ಸಿಬ್ಬಂದಿ ಸೇರಿದಂತೆ ಒಟ್ಟು 13 ಮಂದಿ ನೌಕೆಯಲ್ಲಿ ಇರುತ್ತಾರೆ. ಹೋವರ್ ಕ್ರಾಫ್ಟ್‌ ಚಿತ್ರಗಳು [ಚಿತ್ರಗಳು : ಐಸಾಕ್ ರಿಚರ್ಡ್, ಮಂಗಳೂರು]

ರಾಜ್ಯಪಾಲರಿಂದ ಲೋಕಾರ್ಪಣೆ

ರಾಜ್ಯಪಾಲರಿಂದ ಲೋಕಾರ್ಪಣೆ

ಕರಾವಳಿ ತಟರಕ್ಷಣಾ ಪಡೆಯ (ಕೋಸ್ಟ್‌ಗಾರ್ಡ್‌) ಕರ್ನಾಟಕ ವಲಯಕ್ಕೆ ಹೊಸದಾಗಿ ಅತ್ಯಾಧುನಿಕ ಹೋವರ್‌ ಕ್ರಾಫ್ಟ್ ಎಸಿವಿ ಐಸಿಜಿಎಸ್‌ ಎಚ್‌-196 ಹಾಗೂ ಎಚ್‌-198 ಕಣ್ಗಾವಲು ನೌಕೆಗಳು ಸೇರ್ಪಡೆಗೊಂಡಿವೆ. ರಾಜ್ಯಪಾಲ ವಝೂಭಾಯಿ ವಾಲಾ ಅವರು ಹೋವರ್ ಕ್ರಾಫ್ಟ್‌ ಲೋಕಾರ್ಪಣೆ ಮಾಡಿದ್ದಾರೆ.

45 ಕಿ.ಮೀವೇಗದ ಹೋವರ್ ಕ್ರಾಫ್ಟ್

45 ಕಿ.ಮೀವೇಗದ ಹೋವರ್ ಕ್ರಾಫ್ಟ್

ಅತ್ಯಾಧುನಿಕ ಎಸಿವಿ ಐಸಿಜಿಎಸ್‌ ಎಚ್‌ - 196 ಹಾಗೂ ಎಚ್‌-198 ಹೋವರ್‌ ಕ್ರಾಫ್ಟ್‌ಗಳು 21 ಮೀಟರ್‌ ಉದ್ದವಿದ್ದು 31 ಟನ್‌ ಭಾರವಿದೆ. ಗಂಟೆಗೆ 45 ನಾಟಿಕಲ್‌ ಮೈಲು ವೇಗದಲ್ಲಿ ಚಲಿಸಲಿವೆ. ಇವುಗಳಲ್ಲಿ ಒಟ್ಟು 13 ಮಂದಿ ಪ್ರಯಾಣಿಸಬಹುದು.

ನೀರು, ನೆಲದಲ್ಲಿ ಸಂಚಾರ ನಡೆಸಲಿದೆ

ನೀರು, ನೆಲದಲ್ಲಿ ಸಂಚಾರ ನಡೆಸಲಿದೆ

ಸಮುದ್ರ ಮತ್ತು ಸಮುದ್ರ ದಂಡೆಯಲ್ಲಿ ಹಾಗೂ ಸಮತಟ್ಟಾದ ಪ್ರದೇಶದಲ್ಲಿಯೂ ಹೋವರ್ ಕ್ರಾಪ್ಟ್‌ ಚಲಿಸುತ್ತದೆ. ಸಾಗರದಲ್ಲಿ ಕಣ್ಗಾವಲಿಡಲು, ಅವಘಡಗಳು ಸಂಭವಿಸಿದರೆ, ರಕ್ಷಣೆ ಮತ್ತು ಶೋಧ ಕಾರ್ಯ ನಡೆಸಲು ಈ ಹೋವರ್ ಕ್ರಾಫ್ಟ್‌ ನೆರವಾಗುತ್ತದೆ. ಆಧುನಿಕ ನೇವಿಗೇಶನ್ ಹಾಗೂ ಮಾಹಿತಿ ಸಾಧನಗಳನ್ನು ಇದು ಒಳಗೊಂಡಿದೆ.

ಇಂಗ್ಲೆಂಡ್‌ನಲ್ಲಿ ನಿರ್ಮಾಣಗೊಂಡಿವೆ

ಇಂಗ್ಲೆಂಡ್‌ನಲ್ಲಿ ನಿರ್ಮಾಣಗೊಂಡಿವೆ

ಈ ಹೋವರ್‌ ಕ್ರಾಫ್ಟ್‌ಗಳನ್ನು ಇಂಗ್ಲೆಂಡ್‌ನ‌ ಗ್ರಿಫೂನ್‌ ಹೋವರ್‌ ವರ್ಕ್ಸ್ ಲಿ. ನಿರ್ಮಿಸಿದೆ. ಗುಲ್ವಿಂದರ್‌ಸಿಂಗ್‌ ಅವರು ಎಸಿವಿ ಐಸಿಜಿಎಸ್‌ ಎಚ್‌ -196 ಹಾಗೂ ಅಮಿತಾಬ್‌ ಬ್ಯಾನರ್ಜಿ ಅವರು ಎಚ್‌-198 ಹೋವರ್‌ ಕ್ರಾಫ್ಟ್‌ ಕಮಾಂಡೆಂಟ್‌ಗಳಾಗಿದ್ದಾರೆ.

ನಿಲ್ದಾಣಕ್ಕಾಗಿ ಜಾಗ ಕೊಡಲು ಮನವಿ

ನಿಲ್ದಾಣಕ್ಕಾಗಿ ಜಾಗ ಕೊಡಲು ಮನವಿ

ಕರ್ನಾಟಕದ ಕರಾವಳಿಯಲ್ಲಿ ಕೋರ್ಸ್ಡ್ ಗಾರ್ಡ್‌ನ ನೌಕೆಗಳು, ಸೌಲಭ್ಯಗಳನ್ನು ಇಡಲು ಸ್ಥಳಾವಕಾಶದ ಸಮಸ್ಯೆಯಿದೆ. ಈ ಹಿನ್ನಲೆಯಲ್ಲಿ ಕಾರವಾರದಲ್ಲಿ ಕೋಸ್ಟ್‌ಗಾರ್ಡ್‌ ಉಪಕೇಂದ್ರವನ್ನು ಸ್ಥಾಪಿಸಲು ಅಗತ್ಯ ಭೂಮಿಯನ್ನು ಒದಗಿಸಬೇಕು ಎಂದು ಕೋಸ್ಟ್‌ಗಾರ್ಡ್‌ ಪಶ್ಚಿಮ ವಲಯ ಐಜಿಪಿ ಎಸ್‌.ಪಿ.ಎಸ್‌. ಬಸ್ರಾ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸಂಸದ ನಳೀನ್ ಕುಮಾರ್ ಕಟೀಲ್ ಪಾಲ್ಗೊಂಡಿದ್ದರು

ಸಂಸದ ನಳೀನ್ ಕುಮಾರ್ ಕಟೀಲ್ ಪಾಲ್ಗೊಂಡಿದ್ದರು

ಹೋವರ್ ಕ್ರಾಫ್ಟ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಮಂಗಳೂರು ಪೊಲೀಸ್ ಆಯುಕ್ತ ಹೀತೇಂದ್ರ ಮುಂತಾದವರು ಪಾಲ್ಗೊಂಡಿದ್ದರು.

English summary
Two air cushion vehicles also known as hovercraft (H-196 and H-198) were commissioned at the Karnataka headquarters of the Indian Coast Guard (ICG) at Panambur, Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X