ಚಪ್ಪಲಿ ಸ್ಟಾಂಡ್‌ನಲ್ಲಿ ಅಡಗಿ ಕುಳಿತಿತ್ತು 13 ಅಡಿ ಉದ್ದ ಕಾಳಿಂಗ!

ಮಂಗಳೂರು, ಮಾರ್ಚ್ 09 : ಚಪ್ಪಲಿ ಸ್ಟಾಂಡ್‌ನಲ್ಲಿ ಬೆಚ್ಚಗೆ ಅಡಗಿ ಕುಳಿತಿದ್ದ 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದು, ಪಿಲಿಕುಳ ನಿಸರ್ಗಧಾಮಕ್ಕೆ ಒಪ್ಪಿಸಲಾಗಿದೆ. ಕಾಡಿನಿಂದ ನಾಡಿಗೆ ಬಂದಿದ್ದ ಕಾಳಿಂಗ ಸರ್ಪ ಚಪ್ಪಲಿ ಸ್ಟಾಂಡ್‌ನಲ್ಲಿ ಅಡಗಿ ಕುಳಿತಿತ್ತು.

ಗುರುಪುರದ ಕೈಕಂಬದ ಬಳಿಕ ಮಾರಿಸ್ ಫೆರ್ನಾಂಡೀಸ್ ಅವರ ಮನೆಯ ಚಪ್ಪಲಿ ಸ್ಟಾಂಡ್‌ನಲ್ಲಿ ಮಾರ್ಚ್ 5ರಂದು ಬೆಳಗ್ಗೆ 7.30ರ ಸುಮಾರಿಗೆ ಕಾಳಿಂಗ ಪತ್ತೆಯಾಗಿತ್ತು. ತಕ್ಷಣ ಅವರು ಉರಗ ತಜ್ಞ ಗಂಗೇಶ್ ಬೋಳಾರ್ ಅವರಿಗೆ ಮಾಹಿತಿ ನೀಡಿದರು. [ಶೇನ್ ವಾರ್ನ್ ಗೆ ಅನಕೊಂಡ ಕಚ್ಚಿದರೂ ಬಚಾವ್]

king cobra

ಸ್ಥಳಕ್ಕೆ ಆಗಮಿಸಿದ ಅವರು ಸುವಿತ್ (ಸ್ನೇಕ್ ಪಾಪು) ಅವರನ್ನು ಸ್ಥಳಕ್ಕೆ ಕರೆಸಿದರು. ನಂತರ ಇಬ್ಬರು ಸೇರಿ 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದು ಪಿಲಿಕುಳ ನಿಸರ್ಗಧಾಮಕ್ಕೆ ಒಪ್ಪಿಸಿದರು. ಗಂಗೇಶ್ (63) ಮತ್ತು ಸುವಿತ್ (31) ಅವರು ಕಳೆದ 8 ವರ್ಷಗಳಿಂದ ಹಾವುಗಳನ್ನು ಹಿಡಿಯುವ ಕೆಲಸ ಮಾಡುತ್ತಿದ್ದಾರೆ. [30 ಸಾವಿರ ಹಾವು ಹಿಡಿದು ದಾಖಲೆ ಮಾಡಿದ ಸ್ನೇಕ್ ಶ್ಯಾಮ್]

ಸಾಮಾನ್ಯವಾಗಿ ಡಿಸೆಂಬರ್‌ನಿಂದ ಮಾರ್ಚ್ ವರೆಗೆ ಹಾವುಗಳ ಮಿಲನದ ಸಮಯವಾಗಿದ್ದು. ಕಾಳಿಂಗ ಸರ್ಪವು ಗೂಡುಕಟ್ಟಿ 50-60 ಮೊಟ್ಟೆ ಇಡುತ್ತದೆ. 60 ದಿನಗಳಲ್ಲಿ ಮೊಟ್ಟೆಯೊಡೆದು ಮರಿಯಾಗುತ್ತವೆ. [ಬರೋಬ್ಬರಿ 3 ಹೆಬ್ಬಾವು ಹಿಡಿದ ಮಂಗಳೂರು ಯುವಕರು!]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+