katrina kaif: ಮಂಗಳೂರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ನಟಿ ಕತ್ರಿನಾ ಕೈಫ್
ಮಂಗಳೂರು ಜುಲೈ 15: ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಮಂಗಳವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ತಮ್ಮ ಬರ್ತ್‌ಡೇಗೂ ಮುನ್ನ ಅವರು ಮಂಗಳೂರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
ಹೌದು... ನಟಿ ಕತ್ರಿನಾ ಕೈಫ್ ಮುಸ್ಲಿಂ. ಆದರೆ ಅವರು ಹಿಂದೂ ಆಗಿರುವ ವಿಕ್ಕಿ ಕೌಶಲ್ ಅವರನ್ನು ಮದುವೆಯಾಗಿದ್ದಾರೆ. ಹೀಗಾಗಿ ಅವರಿಗೆ ಹಿಂದೂ ದೇವರ ಬಗ್ಗೆ ಭಕ್ತಿ ಇದೆ. ಕತ್ರಿನಾ ಕೈಫ್, ಕ್ರಿಕೆಟಿಗ ಕೆ.ಎಲ್. ರಾಹುಲ್ ಹಾಗೂ ನಟ ಸುನಿಲ್ ಶೆಟ್ಟಿ ಕುಟುಂಬ ಉಳ್ಳಾಲದ ಕುತ್ತಾರು ಕೊರಗಜ್ಜನ ಕಟ್ಟೆಯಲ್ಲಿ ಭಾನುವಾರ ನಡೆದ ಹರಕೆಯ ಕೋಲದಲ್ಲಿ ಭಾಗಿಯಾಗಿತ್ತು.

ಮಹಿಳೆಯರಿಗೆ ರಾತ್ರಿ ಹೊತ್ತು ಕಟ್ಟೆಯ ಒಳಗೆ ಪ್ರವೇಶ ಇಲ್ಲದ ಕಾರಣ ಕತ್ರಿನಾ, ಅಥಿಯಾ ಮತ್ತು ರೇಷ್ಮಾ ದೈವಸ್ಥಾನದ ಹೊರಗಡೆಯಿಂದ ಕೋಲವನ್ನು ವೀಕ್ಷಿಸಿದರು. ರಾಹುಲ್ ಮತ್ತು ಅಹಾನ್ ಕೋಲದಲ್ಲಿ ಭಾಗಿಯಾಗಿದ್ದರು. ಸದ್ಯ ಅವರೆಲ್ಲರೂ ಮಂಗಳೂರಿಗೆ ಭೇಟಿ ನೀಡಿದ ಫೋಟೋಗಳು ವೈರಲ್ ಆಗಿದೆ.
ಶಿಲ್ಪಾ ಶೆಟ್ಟಿ, ಸುನೀಲ್ ಶೆಟ್ಟಿ ಮೊದಲವಾದವರು. ಆಗಾಗ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಬಾಲಿವುಡ್‌ನ ಉಳಿದವರಿಗೂ ಈ ಬಗ್ಗೆ ನಂಬಿಕೆ ಮೂಡಿದೆ. ಸುನೀಲ್ ಶೆಟ್ಟಿ ಅವರು ಮಂಗಳೂರು ಮೂಲದವರು. ಅವರು ಆಗಾಗ ಇಲ್ಲಿಗೆ ಭೇಟಿ ನೀಡುತ್ತಾರೆ.
ಕುತ್ತಾರುನಲ್ಲಿ ಕೊರಗಜ್ಜನ ಕೋಲ ನೀಡುವ ಮೊದಲು ಟೀಂ ಇಂಡಿಯಾ ಆಟಗಾರ ಕೆ.ಎಲ್ ರಾಹುಲ್ ಮಂಗಲೂರು ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪತ್ನಿ ಸಮೇತರಾಗಿ ಭೇಟಿ ನೀಡಿದರು.
ದೇವಿಯ ದರ್ಶನ ಪಡೆದ ಕೆ.ಎಲ್ ರಾಹುಲ್, ಪತ್ನಿ ಆಥಿಯಾ ಶೆಟ್ಟಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು.
ಹಿಂದಿನಿಂದಲೂ ಕೊರಗಜ್ಜನ ಕ್ಷೇತ್ರದಲ್ಲಿ ಚಿತ್ರೀಕರಣಕ್ಕೆ ಅವಕಾಶ ಇಲ್ಲ. ಆದರೂ ಸೆಲೆಬ್ರಿಟಿಗಳು ಬಂದಾಗ ಕ್ಷೇತ್ರದ ದ್ವಾರದ ಮುಂಭಾಗ ಹಾಗೂ ಕಚೇರಿ ಒಳಗೆ ಇದಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದ್ರೆ ಕಳೆದ ದಿನ ಬಾಲಿವುಡ್ ನ ದೊಡ್ಡ ತಂಡವೇ ಆಗಮಿಸಿದ ಕಾರಣದಿಂದ ಯಾರಿಗೂ ಫೋಟೋ ವೀಡಿಯೋಕ್ಕೆ ಅವಕಾಶವನ್ನು ನೀಡಿಲ್ಲ. ಇದರ ನಡುವೆಯೂ ಕ್ಷೇತ್ರದಲ್ಲಿದ್ದ ಕತ್ರಿನಾ ಕೈಫ್ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕತ್ರಿನಾ ಗರ್ಭಿಣಿ?
ಇತ್ತೀಚೆಗೆ ನಟಿ ಕತ್ರಿನಾ ಕೈಫ್ ಗರ್ಭಿಣಿ ಎನ್ನುವ ಸುದ್ದಿ ಸಖತ್ ವೈರಲ್ ಆಗ್ತಿದೆ. ಕತ್ರಿನಾ ಕೈಫ್ ಕ್ಯಾಮೆರಾ ಕಣ್ಣಿಗೆ ಬಿದ್ದಿಲ್ಲ. ಆಗೊಮ್ಮೆ ಈಗೊಮ್ಮೆ ಮಾಧ್ಯಮಗಳ ಕಣ್ಣಿಗೆ ಬಿದ್ರೂ ನಟಿ ಲೂಸ್ ಡ್ರೆಸ್ ನಲ್ಲಿ ಕಾಣಿಸಿಕೊಳ್ತಾರೆ. ನಟಿ ಬೇಬಿ ಬಂಪ್ ಮರೆಮಾಚಲು ಈ ರೀತಿ ಮಾಡ್ತಿದ್ದಾರೆ ಎನ್ನಲಾಗ್ತಿದೆ.
ಲಂಡನ್ ವಿಮಾನ ನಿಲ್ದಾಣದಲ್ಲಿ ವಿಕ್ಕಿ ಮತ್ತು ಕತ್ರಿನಾ ಇರುವ ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಕತ್ರಿನಾ ತನ್ನ ಮಗುವಿನ ಬಂಪ್ ಅನ್ನು ಮರೆಮಾಡಿದ್ದಾರೆ. ಅದರ ನಂತರ ಕತ್ರಿನಾ ಅನಂತ್ ಮತ್ತು ರಾಧಿಕಾ ಮದುವೆಯಲ್ಲಿ ಕಾಣಿಸಿಕೊಂಡರು. ಮದುವೆಯಲ್ಲೂ ತನ್ನ ಬೇಬಿ ಬಂಪ್ ಮರೆಮಾಚಲು ಯತ್ನಿಸಿದ್ದಾರೆ ಎನ್ನಲಾಗ್ತಿದೆ. ಆದರೆ ಪ್ರೆಗ್ನೆಂಟ್ ವಿಚಾರ ಬಂದಾಗಲೆಲ್ಲಾ ಕತ್ರಿನಾ ಸ್ಪಷ್ಟನೆ ನೀಡುತ್ತಾರೆ.












Click it and Unblock the Notifications