ಕರಾವಳಿಯಲ್ಲಿ ಈ ಋತುವಿನ ಕಂಬಳಕ್ಕೆ ಯಶಸ್ವಿ ತೆರೆ

ಮಂಗಳೂರು, ಮಾರ್ಚ್ 18:ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಪೆರ್ಮುಡದ ಸೂರ್ಯಚಂದ್ರ ಜೋಡುಕರೆ ಕಂಬಳದ ಮುಕ್ತಾಯದೊಂದಿಗೆ ಕಂಬಳದ ಋತು ಯಶಸ್ವಿಯಾಗಿ ಕೊನೆಯಾಗಿದೆ.

ಪ್ರತಿ ವರ್ಷ ಕಂಬಳ ಕ್ರೀಡೆಯ ಋತು ನವೆಂಬರ್‌ನಲ್ಲಿ ಆರಂಭಗೊಳ್ಳುತ್ತದೆ. ನವೆಂಬರ್ ನಿಂದ ಆರಂಭಗೊಳ್ಳುವ ಈ ಕಂಬಳದ ಋತುವಿನಲ್ಲಿ ಈ ಬಾರಿ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳು ಸೇರಿ ಒಟ್ಟು 18 ಕಂಬಳಗಳು ಆಯೋಜನೆಗೊಂಡಿದ್ದವು.

ಕಂಬಳದಲ್ಲಿ ಪ್ರಾಣಿಹಿಂಸೆ ಮಾಡಲಾಗುತ್ತಿದೆ ಎಂಬ ಪೆಟಾ ಸಂಸ್ಥೆಯ ಆರೋಪಗಳ ಹಿನ್ನೆಲೆಯಲ್ಲಿ ಬೆತ್ತ ಹಿಡಿಯದೆ ಕೋಣಗಳನ್ನು ಓಡಿಸುವ ಪ್ರಯೋಗವನ್ನು ಈ ಬಾರಿ ಕಂಬಳದಲ್ಲಿ ಮಾಡಲಾ ಗಿದೆ. ಮೂಡುಬಿದಿರೆ, ಕಕ್ಕೆಪದವು ಹಾಗೂ ಪೈವಳಿಕೆ ಕಂಬಳಗಳಲ್ಲಿ ಕೋಣಗಳನ್ನು ಓಡಿಸುವಾಗ ಬೆತ್ತ ಬಳಕೆ ಮಾಡಲಾಗಿಲ್ಲ.+

Kambala season ends in coastal districts successfully

ಕಂಬಳಕ್ಕೆ ತಡೆ ಕೋರಿ ಪೆಟಾ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ಸಂವಿಧಾನ ಪೀಠದಲ್ಲಿ ವಿಚಾರಣೆಗೆ ಬಾಕಿ ಇದೆ. ತುಳುನಾಡಿನ ಜಾನಪದ ಕ್ರೀಡೆ ಕಂಬಳವು ಕಳೆದ 2 ವರ್ಷಗಳಿಂದ ಸುಗಮವಾಗಿ ಸಾಗುತ್ತಿದೆ.

ಈ ಬಾರಿ ಕಂಬಳ ಕ್ರೀಡೆ ನಿರ್ವಿಘ್ನವಾಗಿ ಮುಕ್ತಾಯಗೊಂಡಿದರುವುದು ಕಂಬಳ ಪ್ರಿಯರಲ್ಲಿ ಸಮಾಧಾನ ಮೂಡಿಸಿದೆ. ಎಂಟು ತಿಂಗಳ ಬಳಿಕ ಮತ್ತೆ ನವೆಂಬರ್‌ನಲ್ಲಿ ಮುಂದಿನ ಕಂಬಳ ಋತು ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಮುಂದಿನ ಕಂಬಳ ಋತುವಿಗಾಗಿ ಕಂಬಳ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+