ಮಂಗಳೂರು ಸ್ವಾತಂತ್ರ್ಯ ದಿನಾಚರಣೆ ಚಿತ್ರಗಳು
ಮಂಗಳೂರು, ಆ.15: ಭಾರತ ಚೈತನ್ಯಯುತ ರಾಷ್ಟ್ರವಾಗಬೇಕಾದರೆ ನಮ್ಮ ನಡುವೆ ಐಕ್ಯತೆ ಕಾಪಾಡಿಕೊಳ್ಳಬೇಕು ಎಂದು ಪರಿಸರ ಸಚಿವ ಬಿ.ರಮಾನಾಥ ರೈ ಹೇಳಿದರು. ನಗರದ ನೆಹರು ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರಿಗೆ ಗುರುತಿನ ಚೀಟಿ ನೀಡುವ ಕೆಲಸ ಮಾಡಲಾಗುತ್ತಿದೆ. ಮೈತ್ರಿ ಯೋಜನೆಯಡಿ ಮಾಶಾಸನ, ಸ್ವಸಹಾಯ ಸಂಘಗಳನ್ನು ರಚಿಸಿ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಮಟ್ಟದ ಎಲ್ಲಾ ಕಚೇರಿಗಳನ್ನು ಒಂದೇ ಸೂರಿನಡಿ ತರಲು ಪಡೀಲ್ನಲ್ಲಿ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ. ಡೀಮ್ಡ್ ಫಾರೆಸ್ಟ್ ಸಮಸ್ಯೆ ಪರಿಹರಿಸಲು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಸುಳ್ಯ ಹಾಗೂ ಪುತ್ತೂರು ತಾಲೂಕಿನಲ್ಲಿ ನೆಲೆಸಿರುವ ಶ್ರೀಲಂಕಾ ಪುನರ್ವಸತಿದಾರರಿಗೆ ಜಾತಿ ಪ್ರಮಾಣ ಪತ್ರ ನೀಡಲಾಗುವುದು. ನಗರೋತ್ಥಾನ ಯೋಜನೆಯಡಿ ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳ ಅಭಿವೃದ್ಧಿಗೆ 35 ಕೋಟಿ ರೂ. ಮಂಜೂರಾಗಿದೆ. ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಯೋಜನೆಗೆ ನಗರವನ್ನು ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ವೀರ ಸೇನಾನಿ ಬೋಳ ರವೀಂದ್ರ ಕೃಷ್ಣ ರಾವ್ ಹಾಗೂ ವಿಂಗ್ ಕಮಾಂಡರ್ ಡೆರಿಲ್ ಕ್ಯಾಸ್ತಲಿನೊ (ಮರಣೋತ್ತರ ಪ್ರಶಸ್ತಿ) ಅವರಿಗೆ "ಸ್ವತಂತ್ರ ಸಾಧಕರು' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹರೀಶ್ ಕುಮಾರ್, ಪ್ರಮೀಳಾ, ಮಾಣಿಕ್ಯ ಸೇರಿದಂತೆ ಉತ್ತಮ ಕಾರ್ಯ ನಿರ್ವಹಿಸಿದ ಅಧಿಕಾರಿಗಳಿಗೆ ಪದಕ ನೀಡಿಗೌರವಿಸಲಾಯಿತು. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಕೊರಗ ಜನಾಂಗದ ನಿರುದ್ಯೋಗಿಗಳಿಗೆ ಐಟಿಡಿಪಿ ಯೋಜನೆಯಡಿ ವಾಹನ ವಿತರಿಸಲಾಯಿತು.
ಸಂಸದ ನಳಿನ್ ಕುಮಾರ್ ಕಟೀಲ್, ಮೇಯರ್ ಮಹಾಬಲ ಮಾರ್ಲ, ಶಾಸಕ ಜೆ.ಆರ್.ಲೋಬೋ, ಮೊಯ್ದಿನ್ ಬಾವ, ಐವನ್ ಡಿಸೋಜಾ, ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಎಸ್ಪಿ ಡಾ. ಶರಣಪ್ಪ, ಉಪಸ್ಥಿತರಿದ್ದರು. ಪಥಸಂಚಲನದಲ್ಲಿ ಉತ್ತಮ ನಿರ್ವಹಣೆ ತೋರಿದ ಎನ್‌ಸಿಸಿ ಆರ್ಮಿ ಜೂನಿಯರ್ ತಂಡಕ್ಕೆ ಪ್ರಥಮ ಹಾಗೂ ಎನ್‌ಸಿಸಿ ಏರ್ವಿಂಗ್ ಸೀನಿಯರ್ ತಂಡಕ್ಕೆ ದ್ವಿತೀಯ ಬಹುಮಾನ ವಿತರಿಸಲಾಯಿತು. ಮಂಗಳೂರಿನ ಸ್ವಾತಂತ್ರ್ಯ ದಿನಾಚರಣೆ ಚಿತ್ರಗಳನ್ನು ನೋಡಿ...

ಸಂಸದರ ಹಾಜರಿ
ಕಾರ್ಯಕ್ರಮದಲ್ಲಿ ಹಾಜರಿದ್ದ ಸಂಸದ ನಳೀನ್‌ಕುಮಾರ್ ಕಟೀಲ್.

ತ್ರಿವರ್ಣ ಧ್ವಜ
ನೆಹರು ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದಾಗ ಕಂಡು ಬಂದ ರಾಷ್ಟ್ರಧ್ವಜ.

ಗೌರವ ವಂದನೆ ಸ್ವೀಕಾರ
ಮಕ್ಕಳು ಮತ್ತು ಪೊಲೀಸ್ ಅಧಿಕಾರಿಗಳಿಂದ ಗೌರವ ವಂದನೆ ಸ್ವೀಕರಸಿದ ಸಚಿವ ರಮಾನಾಥ ರೈ.

ಭಾರತ್ ಮಾತಾ ಕೀ ಜೈ
ಮಂಗಳೂರಿನ ನೆಹರು ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಚಿಣ್ಣ ಕಂಡುಬಂದಿದ್ದು ಹೀಗೆ.

ಆಕರ್ಷಕ ಪಥಸಂಚಲನ
ನೆಹರು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಆಕರ್ಷಕ ಪಥಸಂಚಲನ.

ನಳಿನ್‌ಕುಮಾರ್ ಬ್ಯಾಟಿಂಗ್
ಸ್ವಾತಂತ್ರ್ಯೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಸಂಸದ ನಳಿನ್‌ಕುಮಾರ್ ಕಟೀಲ್ ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿದರು.

ಎನ್‌ಸಿಸಿ ಸ್ವಯಂ ಸೇವಕರಿಂದ ಪಥಸಂಚಲನ.
ನೆಹರು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಎನ್‌ಸಿಸಿ ಸ್ವಯಂ ಸೇವಕರಿಂದ ಆಕರ್ಷಕ ಪಥಸಂಚಲನ.

ಆಕರ್ಷಕ ಪಥಸಂಚಲನ
ನೆಹರು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಆಕರ್ಷಕ ಪಥಸಂಚಲನ

ರಾಷ್ಟ್ರಗೀತೆಗೆ ನಮನ
ಮಂಗಳೂರಿನ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರಗೀತೆಗೆ ನಮನ ಸಲ್ಲಿಸಿದ ಪರಿ.

ಸಾಧಕರಿಗೆ ಸನ್ಮಾನ
ಮಂಗಳೂರಿನ ಸ್ವಾತಂತ್ರ್ಯ ದಿನಾಚರಣೆ ವೇಳೆ ಸಾಧಕರನ್ನು ಸನ್ಮಾನಿಸಲಾಯಿತು.


Click it and Unblock the Notifications
