ಬಕ್ರೀದ್ ಪ್ರಯುಕ್ತ ಉಡುಪಿ, ದಕ್ಷಿಣ ಕನ್ನಡದಲ್ಲಿ ಸೆ. 1 ರಂದು ರಜೆ
Recommended Video

Bakrid festival : Holiday on September 1st in Udupi
ಮಂಗಳೂರು, ಆಗಸ್ಟ್ 31: ಮುಸ್ಲಿಂ ಸಮುದಾಯದ ಬಕ್ರೀದ್ ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 1ರಂದು (ಶುಕ್ರವಾರ) ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಸರಕಾರವೇ ಈ ಅಧಿಕೃತ ಆದೇಶ ಹೊರಡಿಸಿದೆ.
ಹೀಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೆಪ್ಟೆಂಬರ್ 1ರಂದು ಶಾಲೆ, ಕಾಲೇಜು ಮತ್ತು ಸರಕಾರಿ ಕಚೇರಿಗಳಿಗೆ ರಜೆ ಇರಲಿದೆ.

ಮುಸ್ಲಿಂ ಬಾಂಧವರಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದಲ್ಲಿ ಚಂದ್ರ ದರ್ಶನ ಒಂದು ದಿವಸ ಮುಂಚಿತವಾಗಿ ಆಗಿರುವುದರಿಂದ ಜಿಲ್ಲೆಗಳಲ್ಲಿ ಮಾತ್ರ ಒಂದು ದಿವಸ ಮುಂಚಿತವಾಗಿ ಅಂದರೆ ಸೆಪ್ಟೆಂಬರ್ 1ರಂದು ಬಕ್ರೀದ್ ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ರಜೆಯಲ್ಲೂ ಸರಕಾರ ಮಾರ್ಪಾಟು ಮಾಡಿದೆ.
ಇನ್ನು ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಪೂರ್ವನಿಗದಿಯಂತೆ ಸೆಪ್ಟೆಂಬರ್ 2 ರಂದು ಸಾರ್ವತ್ರಿಕ ರಜೆ ಇರಲಿದೆ.












Click it and Unblock the Notifications