ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ಆಸ್ಪತ್ರೆ ಗೇಟ್ ಮುರಿದು ಕೊರೊನಾ ಸೋಂಕಿತ ಪತ್ನಿ, ಮಗು ಕರೆದೊಯ್ದ ಪತಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 17: ಇಲ್ಲಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಹೆರಿಗೆಗೆ ದಾಖಲಾಗಿದ್ದ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಈಕೆಗೆ ಸೋಂಕು ಇರುವುದು ತಿಳಿಯುತ್ತಿದ್ದಂತೆ ಈಕೆ ಪತಿ ಗೇಟ್ ಮುರಿದು ಆಸ್ಪತ್ರೆ ಪ್ರವೇಶಿಸಿ ಮಗು ಮತ್ತು ಬಾಣಂತಿಯನ್ನು ಕರೆದೊಯ್ದಿರುವ ಘಟನೆ ಗುರುವಾರ, ಜುಲೈ 16ರ ರಾತ್ರಿ ಬೆಳ್ತಂಗಡಿಯಲ್ಲಿ ಸಂಭವಿಸಿದೆ.

ನಾವೂರು ಗ್ರಾಮದ ಮಹಿಳೆಯು ಬುಧವಾರ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಆ ದಿನ ರಾತ್ರಿಯೇ ಮಹಿಳೆಗೆ ಹೆರಿಗೆ ಆಗಿತ್ತು.

Husband Escaped With Corona Infected Wife And Baby In Mangaluru

 ಕಾರವಾರ ಕೋವಿಡ್ ವಾರ್ಡ್ ನಿಂದ ಮೊಬೈಲ್ ಕದ್ದು ಸೋಂಕಿತ ಪರಾರಿ! ಹೈರಾಣದ ಪೊಲೀಸರು ಕಾರವಾರ ಕೋವಿಡ್ ವಾರ್ಡ್ ನಿಂದ ಮೊಬೈಲ್ ಕದ್ದು ಸೋಂಕಿತ ಪರಾರಿ! ಹೈರಾಣದ ಪೊಲೀಸರು

ಗುರುವಾರ ಸಂಜೆ ಕೊರೊನಾ ವೈರಸ್ ಪರೀಕ್ಷೆಯ ಫಲಿತಾಂಶ ಬಂದಿದ್ದು, ಅದರಲ್ಲಿ ಮಹಿಳೆಗೆ ಸೋಂಕು ಇರುವುದು ದೃಢಪಟ್ಟಿತ್ತು. ಈ ವಿಷಯವನ್ನು ಆಸ್ಪತ್ರೆ ಸಿಬ್ಬಂದಿ ಮಹಿಳೆಯ ಪತಿಗೆ ತಿಳಿಸಿದ್ದರು. ವಿಷಯ ತಿಳಿದ ಮಹಿಳೆ ಪತಿ ಕಾರಿನಲ್ಲಿ ಬಂದು, ಆಸ್ಪತ್ರೆ ಗೇಟ್ ಮುರಿದು ತಾಯಿ- ಮಗುವನ್ನು ಕರೆದೊಯ್ದಿದ್ದಾರೆ. ಇವರು ಎಲ್ಲಿಗೆ ತೆರಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

English summary
A woman who was admitted to a government hospital for delivery tested coronavirus positive. Her husband broke hospital gate and escaped with wife and baby
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X