ಮಂಗಳೂರು-ಬೆಂಗಳೂರು ಅನಿಲ ಮಾರ್ಗ ಶತಃಸಿದ್ಧ
ಮಂಗಳೂರು, ಡಿ.24: ಮಂಗಳೂರು-ಹಾಸನ-ಮೈಸೂರು-ಬೆಂಗಳೂರು ನಡುವೆ ಎಲ್ ಪಿಜಿ ಸಾಗಾಟಕ್ಕೆ 362 ಕಿಲೋಮೀಟರ್ ದೂರದ ಕೊಳವೆ ಮಾರ್ಗ ನಿರ್ಮಿಸಲಾಗುವುದು ಎಂದು ಕೇಂದ್ರ ಇಂಧನ ಖಾತೆ ಸಚಿವ ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ. ಎಲ್ ಪಿಜಿ ಎಂಎಲ್ ಐಎಫ್ ಟ್ರಾನ್ಸ್ ಪೋರ್ಟ್ ಹಬ್ ನ್ನು ಉದ್ಘಾಟಿಸಿ ಮಾತನಾಡಿದ ಮೊಯ್ಲಿ ಕೊಳವೆ ಮಾರ್ಗ ಹಲವಾರು ರೀತಿಯಲ್ಲಿ ಉಪಯುಕ್ತ ಎಂದರು.
ಜಯಂತಿ ನಟರಾಜನ್ ಅವರಿಂದ ತೆರವಾಗಿರುವ ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಖಾತೆಯನ್ನು ಹೆಚ್ಚುವರಿಯಾಗಿ ಪಡೆದಿರುವ ಇಂಧನ ಸಚಿವ ಮೊಯ್ಲಿ ಅವರು ತೈಲ ಕಂಪನಿಗಳ ಬಹುದಿನಗಳ ಬೇಡಿಕೆ ಈಡೇರಿಸಿದ್ದಾರೆ. ಎಂದಿನಂತೆ ಈ ಕೊಳವೆ ಮಾರ್ಗಕ್ಕೆ ಪರಿಸರವಾದಿಗಳ ವಿರೋಧ ಇದ್ದೇ ಇದೆ. ಈ ಕೊಳವೆ ಮಾರ್ಗ ಯೋಜನೆ 701 ಕೋಟಿ ರು. ವೆಚ್ಚದ್ದಾಗಿದ್ದು 2015ರ ನವೆಂಬರ್ ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಈ ಕೊಳವೆ ಮಾರ್ಗ ಪೂರ್ಣಗೊಂಡ ಬಳಿಕ ರಸ್ತೆ ಹಾಗೂ ರೈಲು ಮಾರ್ಗದ ಮೂಲಕ ಸಾಗಾಟದ ಹೊರೆ ಕಡಿತವಾಗಲಿದೆ ಎಂದು ಮೊಯ್ಲಿ ತಿಳಿಸಿದರು.
ದಕ್ಷಿಣ ಭಾರತದ ಪ್ರಥಮ ಹಬ್: ಎಚ್ ಪಿಸಿಎಲ್ ಘಟಕದ ಆವರಣದಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಶಿಲಾನ್ಯಾಸಗೊಂಡು ನಿರ್ಮಾಣವಾದ ಟ್ರಾನ್ಸ್ ಪೋರ್ಟ್ ಹಬ್ 3,500 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣ ಗೊಂಡಿದೆ. ಇದು ದಕ್ಷಿಣ ಭಾರತದ ಪ್ರಥಮ ಟ್ರಾನ್ಸ್ಸ್ ಪೋರ್ಟ್ ಹಬ್ ಆಗಿದ್ದು, ಪ್ರಸಕ್ತ ಇಲ್ಲಿ 300 ಟ್ರಕ್ ಗಳು ನಿಲುಗಡೆ ಯಾಗಲು ಅವಕಾಶವಿದೆ. 60 ಬೆಡ್ ಗಳಿದ್ದು, ಇಲ್ಲ್ಲಿ ವಿಶ್ರಾಂತಿ ಪಡೆಯುವ ಮೂಲಕ ಟ್ರಕ್ ನ ಸಿಬ್ಬಂದಿಗೆ ಮಾನಸಿಕವಾದ ಒತ್ತಡ ನಿವಾರಣೆಗೂ ಸಹಕಾರಿ ಯಾಗಲಿದೆ ಎಂದು ಮೊಯ್ಲಿ ತಿಳಿಸಿದರು.

ಈ ಎಪಿ ಸಿಎಲ್ ಹಬ್ ನಲ್ಲಿ ಎಲ್ ಪಿಜಿ ಆಮದು ಮಾಡಿಕೊಂಡು ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿರುವ ಎಚ್ ಪಿಸಿಎಲ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ನ ಬಾಟ್ಲಿಂಗ್ ಘಟಕಕ್ಕೆ ಪೂರೈಸಲಾಗುತ್ತಿದೆ. ದಿನಕ್ಕೆ 200-300 ಎಲ್ ಪಿಜಿ ಟ್ಯಾಂಕರ್ ಲೋಡ್ ಆಗಲಿದೆ.
ಅಡಿಕೆ ಬೆಳೆ ನಿಷೇಧಿಸುವ ಪ್ರಸ್ತಾಪ : ಅಡಿಕೆ ಬೆಳೆ ನಿಷೇಧಿಸುವ ಪ್ರಸ್ತಾಪ ಸರಕಾರದ ಮುಂದಿಲ್ಲ. ಆದರೆ ಅನಗತ್ಯವಾಗಿ ಗೊಂದಲ ಸೃಷ್ಟಿಸಲಾ ಗುತ್ತಿದ್ದು, ಈ ಬಗ್ಗೆ ನಡೆಯುತ್ತಿರುವ ಪ್ರತಿಭಟನೆಗಳು ರಾಜಕೀಯ ಪ್ರೇರಿತವಾಗಿದೆ ಎಂದು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.[ಅಡಿಕೆ ನಿಷೇಧ ಇಲ್ಲ, ಆಜಾದ್ -ಸಿದ್ದು ಭರವಸೆ]
ಅಡಿಕೆ ಬೆಳೆಯ ನಿಷೇಧದ ಬಗ್ಗೆ ಕೇಂದ್ರ ಸರಕಾರ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಅವರೊಂದಿಗೆ ಸಮಾಲೋಚನೆ ಮಾಡಿದ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ. ವಿಜ್ಞಾನಿಗಳು ಸಂಶೋಧನೆ ನಡೆಸಿ ಅಡಿಕೆಯ ಬಗೆಗಿನ ಅಂಶಗಳ ಬಗ್ಗೆ ತಿಳಿಸಿದ್ದಾರೆ. ಆ ಕಾರಣಕ್ಕಾಗಿ ಅಡಿಕೆ ನಿಷೇಧ ಮಾಡುವ ನಿರ್ಧಾರಕ್ಕೆ ಸರಕಾರ ಬಂದಿಲ್ಲ. ಅದಕ್ಕಾಗಿ ಯಾವ ಹೋರಾಟವೂ ನಡೆಸಬೇಕಾದ ಅಗತ್ಯವಿಲ್ಲ ಎಂದು ಮೊಯ್ಲಿ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದಿಂದಲೇ ಸ್ಪರ್ಧೆ: ಈ ಬಾರಿಯ ಲೋಕಸಭಾ ಕ್ಷೇತ್ರಕ್ಕೆ ತಾನು ಸ್ಪರ್ಧಿಸಿದರೆ ಚಿಕ್ಕಬಳ್ಳಾಪುರ ದಿಂದ ಮಾತ್ರ ಎಂದು ಮೊಯ್ಲಿ ತಿಳಿಸಿದ್ದಾರೆ. ಹರ್ಷ ಮೊಯ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ತಾನು ಒತ್ತಡ ಹೇರುತ್ತಿಲ್ಲ. ಆಯ್ಕೆ ಮಾಡುವುದು ಬಿಡುವುದು ಕೆಪಿಸಿಸಿಗೆ ಸೇರಿದ್ದು ಎಂದು ಮೊಯ್ಲಿ ತಿಳಿಸಿದ್ದಾರೆ.[ಸಿಬಿ ಪುರದಿಂದಲೇ ಸ್ಪರ್ಧೆ; ರಾಹುಲ್ ಸಮರ್ಥ]












Click it and Unblock the Notifications