ಮಂಗಳೂರಿನಲ್ಲಿ ಮುಂಗಾರು ಮಳೆ ಆರಂಭ

ಮಂಗಳೂರು, ಜೂ. 12 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಮುಂಗಾರು ಬಿರುಸುಗೊಂಡಿದ್ದು, ಬುಧವಾರ ದಿನಪೂರ್ತಿ ಬಿಟ್ಟೂ ಬಿಟ್ಟೂ ಉತ್ತಮ ಮಳೆಯಾಗಿದೆ. ಉಳ್ಳಾಳ, ಸೋಮೇಶ್ವರ, ಬೈಂದೂರು, ಕಾಪು ವ್ಯಾಪ್ತಿಯಲ್ಲಿ ಕಡಲ್ಕೊರೆತವೂ ಜೋರಾಗಿದ್ದು, ಹಲವು ಮನೆಗಳು ಅಪಾಯದಲ್ಲಿವೆ.

ಬುಧವಾರ ಪುತ್ತೂರು, ಸುಬ್ರಹ್ಮಣ್ಯ, ಬಂಟ್ವಾಳದಲ್ಲಿ ಉತ್ತಮ ಮಳೆಯಾಗಿದೆ. ಉಳಿದಂತೆ ಬೆಳ್ತಂಗಡಿ, ಸುಳ್ಯ, ವಿಟ್ಲ, ಕಡಬ, ಉಳ್ಳಾಲ, ಬಜಪೆ, ಕಿನ್ನಿಗೋಳಿ, ಮುಲ್ಕಿ, ಸುರತ್ಕಲ್‌ ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಸುರಿದಿದೆ. ಉಡುಪಿ, ಕಾರ್ಕಳ, ಕುಂದಾಪುರ ತಾಲೂಕಿನಾದ್ಯಂತ ಸಾಧಾರಣ ಮಳೆಯಾಗಿದೆ. [ಪಥ ಬದಲಾವಣೆ : ಓಮನ್‌ ಕರಾವಳಿಯತ್ತ ಮುಂಗಾರು]

ಹವಾಮಾನ ಇಲಾಖೆಯ ಮಾಹಿತಿಯಂತೆ ಪಣಂಬೂರು, ಪುತ್ತೂರು, ಉಪ್ಪಿನಂಗಡಿಯಲ್ಲಿ 6 ಸೆಂ.ಮೀ., ಮುಲ್ಕಿ, ಬೆಳ್ತಗಂಡಿ ಧರ್ಮಸ್ಥಳದಲ್ಲಿ 5 ಸೆಂ.ಮೀ. ಮಂಗಳೂರು ಮತ್ತು ಉಡುಪಿಯಲ್ಲಿ 4 ಸೆಂ.ಮೀ. ಮಳೆಯಾಗಿದೆ. ಮಂಗಳವಾರ ರಾತ್ರಿ ಕೂಡ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿತ್ತು. ಚಿತ್ರಗಳಲ್ಲಿ ಮಳೆಯ ಚಿತ್ರಗಳು

ಎರಡು ದಿನಗಳಿಂದ ಮಳೆ

ಎರಡು ದಿನಗಳಿಂದ ಮಳೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮುಂಗಾರು ಬಿರುಸುಗೊಂಡಿದ್ದು, ಬುಧವಾರ ದಿನಪೂರ್ತಿ ಬಿಟ್ಟೂ ಬಿಟ್ಟೂ ಉತ್ತಮ ಮಳೆಯಾಗಿದೆ. ಉಳ್ಳಾಳ, ಸೋಮೇಶ್ವರ, ಬೈಂದೂರು, ಕಾಪು ವ್ಯಾಪ್ತಿಯಲ್ಲಿ ಕಡಲ್ಕೊರೆತವೂ ಜೋರಾಗಿದ್ದು, ಹಲವು ಮನೆಗಳು ಅಪಾಯದಲ್ಲಿವೆ.

ಬುಧವಾರ ದಿನಪೂರ್ತಿ ಸುರಿದ ಮಳೆ

ಬುಧವಾರ ದಿನಪೂರ್ತಿ ಸುರಿದ ಮಳೆ

ಬುಧವಾರ ಪುತ್ತೂರು, ಸುಬ್ರಹ್ಮಣ್ಯ, ಬಂಟ್ವಾಳದಲ್ಲಿ ಉತ್ತಮ ಮಳೆಯಾಗಿದೆ. ಉಳಿದಂತೆ ಬೆಳ್ತಂಗಡಿ, ಸುಳ್ಯ, ವಿಟ್ಲ, ಕಡಬ, ಉಳ್ಳಾಲ, ಬಜಪೆ, ಕಿನ್ನಿಗೋಳಿ, ಮುಲ್ಕಿ, ಸುರತ್ಕಲ್‌ ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಸುರಿದಿದೆ. ಉಡುಪಿ, ಕಾರ್ಕಳ, ಕುಂದಾಪುರ ತಾಲೂಕಿನಾದ್ಯಂತ ಸಾಧಾರಣ ಮಳೆಯಾಗಿದೆ.

ಎಲ್ಲಿ ಎಷ್ಟು ಮಳೆ ಬಂತು

ಎಲ್ಲಿ ಎಷ್ಟು ಮಳೆ ಬಂತು

ಹವಾಮಾನ ಇಲಾಖೆಯ ಮಾಹಿತಿಯಂತೆ ಪಣಂಬೂರು, ಪುತ್ತೂರು, ಉಪ್ಪಿನಂಗಡಿಯಲ್ಲಿ 6 ಸೆಂ.ಮೀ., ಮುಲ್ಕಿ, ಬೆಳ್ತಗಂಡಿ ಧರ್ಮಸ್ಥಳದಲ್ಲಿ 5 ಸೆಂ.ಮೀ. ಮಂಗಳೂರು ಮತ್ತು ಉಡುಪಿಯಲ್ಲಿ 4 ಸೆಂ.ಮೀ. ಮಳೆಯಾಗಿದೆ.

ಆರಂಭವಾದ ಕಡಲ್ಕೊರೆತ

ಆರಂಭವಾದ ಕಡಲ್ಕೊರೆತ

ಉಳ್ಳಾಲದಲ್ಲಿ ಕಡಲ್ಕೊರೆತ ಆರಂಭವಾಗಿದ್ದು, ಬೃಹತ್‌ ಗಾತ್ರದ ಅಲೆಗಳು ದಡಕ್ಕಪ್ಪಳಿಸುತ್ತಿವೆ. 35ಕ್ಕೂ ಅಧಿಕ ಮನೆಗಳು ಇದರಿಂದಾಗಿ ಅಪಾಯದಲ್ಲಿವೆ. ಉಬ್ಬರದ ಸಂದರ್ಭ ಸುಮಾರು ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+