ಬೆಂಗಳೂರು-ಮಂಗಳೂರು: ತಿಂಗಳು ರೈಲು ಸಂಚಾರ ಸ್ಥಗಿತ ಸಂಭವ

ಸಕಲೇಶಪುರ, ಆಗಸ್ಟ್ 18: ಭಾರಿ ಮಳೆ ಹಾಗೂ ಭೂ ಕುಸಿತದಿಂದಾಗಿ ಬೆಂಗಳೂರು-ಮಂಗಳೂರು ನಡುವೆ ಸುಮಾರು 50 ಕಡೆಗಳಲ್ಲಿ ರೈಲು ಹಳಿ ಸಂಪರ್ಕ ಕಡಿತಗೊಂಡಿದ್ದು, ತಿಂಗಳುಗಳ ಕಾಲ ಈ ಮಾರ್ಗದಲ್ಲಿ ರೈಲು ಸಂಚಾರ ಅನುಮಾನ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಈ ನಡುವೆ ಕಳೆದ ಒಂದು ವಾರದಿಂದ ಸ್ಥಗಿತಗೊಂಡಿದ್ದ ಬಸ್‌ ಸಂಚಾರ ಕ್ರಮೇಣ ಆರಂಭವಾಗಿದ್ದು, ಶನಿವಾರ ಬೆಂಗಳೂರಿನಿಂದ ಮಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್‌ ಸಚಾರ ಆರಂಭಿಸಿದೆ.

ಪರಿಣಾಮ ಸಕಲೇಶಪುರ ತಾಲೂಕು ಎಡಕುಮೇರಿ ರೈಲು ಹಳಿಯ ಮೇಲೆ ಗುಡ್ಡ ಕುಸಿದಿದೆ. ಅಷ್ಟೇ ಅಲ್ಲದೇ ಬೆಂಗಳೂರು ಮಂಗಳೂರು ರೈಲ್ವೇ ಸಂಪರ್ಕದಲ್ಲಿ 50 ಕಡೆ ಗುಡ್ಡ ಕುಸಿತ ಉಂಟಾಗಿದೆ. ಇದರಿಂದ ಇನ್ನು ಒಂದು ತಿಂಗಳು ರೈಲು ಸಂಚಾರ ಅನುಮಾನವಾಗಿದೆ.

Heavy rain causes train interruption between Bengaluru and Mangaluru

ಕಾವೇರಿ ನೀರು ಅಪಾಯದ ಮಟ್ಟವನ್ನು ತಲುಪಿದೆ. ಪರಿಣಾಮ ಜಿಲ್ಲೆಯ ರಾಮನಾಥಪುರ ಪಟ್ಟಣದಲ್ಲಿ ಸಾಕಷ್ಟು ಅವಾಂತರಕ್ಕೆ ಕಾರಣವಾಗಿದೆ. ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಕೆಲವು ಮನೆಗಳು ಕುಸಿದು ಬಿದ್ದಿವೆ. ಪಟ್ಟಣದಿಂದ ಮೈಸೂರು ಮತ್ತು ಮಡಿಕೇರಿಗಳಿಗೆ ಸಂಪರ್ಕ ರಸ್ತೆಗಳು ಜಲಾವೃತಗೊಂಡಿವೆ. ಪ್ರಸನ್ನ ಸುಬ್ರಮಣ್ಯ ದೇವಾಲಯದ ಬಳಿಯೂ ನೀರು ನುಗ್ಗಿದ್ದು, ಸದಾ ಭಕ್ತರಿಂದ ಇದ್ದ ಆಂಜನೇಯ ದೇವಾಲಯಗಳು ಮತ್ತು ರಾಮನಾಥಪುರ ದೇವಸ್ಥಾನಗಳು ಜಲಾವೃತಗೊಂಡಿವೆ.

ಸದ್ಯಕ್ಕೆ ಸಕಲೇಶಪುರ ತಾಲೂಕು ಎಡಕುಮರಿ ಸುತ್ತಲೂ ರೈಲ್ವೇ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ತೆರವು ಕಾರ್ಯಾಚರಣೆಗೆ ಕಾರ್ಮಿಕರ ಕೊರತೆಯಿಂದ ಕಾರ್ಯ ವಿಳಂಬವಾಗುತ್ತಿದೆ. ಮಳೆಯಿಂದ ರೈಲ್ವೇ ಇಲಾಖೆಗೆ ಅಪಾರ ನಷ್ಟವಾಗಿದೆ. ಈಗಾಗಲೇ ಭಾರೀ ಮಳೆಯಿಂದ ಶಿರಾಡಿಘಾಟ್ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಒಂದು ತಿಂಗಳುಗಳ ಕಾಲ ರೈಲ್ವೆ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+