ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುವೈತ್‌ನಲ್ಲಿ ಪುತ್ತೂರಿನ ಮಹಿಳೆಗೆ ಹಿಂಸೆ ಆರೋಪ: ಸಹಾಯಕ್ಕಾಗಿ ಮನವಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್‌12: ಉದ್ಯೋಗ ನಿಮಿತ್ತ ಕುವೈತ್‌ಗೆ ತೆರಳಿದ್ದ ಪುತ್ತೂರಿನ ಮಹಿಳೆಗೆ ಅಲ್ಲಿ ಹಿಂಸೆ ನೀಡುತ್ತಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಂತ್ರಸ್ತ ಮಹಿಳೆ ದಲಿತ ಮುಖಂಡರೊಬ್ಬರಿಗೆ ವಾಯ್ಸ್ ಮೆಸೇಜ್‌ ಮೂಲಕ ವಿಷಯ ಮುಟ್ಟಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಪುತ್ತೂರಿನ ಮಹಿಳೆಯೊಬ್ಬರು ಉದ್ಯೋಗ ನಿಮಿತ್ತ ಕುವೈತ್‌ಗೆ ತೆರಳಿದ್ದು ಅಲ್ಲಿ ಅವರನ್ನು ಸಂಸ್ಥೆಯೊಂದು ರೂಮಿನಲ್ಲಿ ಕೂಡಿ ಹಾಕಿ ಹಿಂಸೆ ನೀಡುತ್ತಿದ್ದಾರೆ ಎನ್ನಲಾಗಿದೆ. ಮಹಿಳೆ ತನಗಾಗುತ್ತಿರುವ ಅನ್ಯಾಯದ ಕುರಿತು ಪುತ್ತೂರಿನ ದಲಿತ್ ಸೇವಾ ಸಮಿತಿ ಮುಖಂಡರೊಬ್ಬರಿಗೆ ವಾಯ್ಸ್‌ ಮೆಸೇಜ್‌ ಕಳುಹಿಸಿದ್ದಾರೆ ಎನ್ನಲಾಗಿದೆ.

ದೈವಗಳು ಅಭಯ ನೀಡುತ್ತವೆ, ಕೊಲ್ಲುವುದಿಲ್ಲ: ಕಾಂತಾರ ಸ್ಥಗಿತಕ್ಕೆ ದಲಿತ ಸಮುದಾಯ ಆಗ್ರಹದೈವಗಳು ಅಭಯ ನೀಡುತ್ತವೆ, ಕೊಲ್ಲುವುದಿಲ್ಲ: ಕಾಂತಾರ ಸ್ಥಗಿತಕ್ಕೆ ದಲಿತ ಸಮುದಾಯ ಆಗ್ರಹ

ತಮಿಳುನಾಡು ಮೂಲದವರಾದ ನಾಗಮ್ಮ ಪುತ್ತೂರಿನ ಉರ್ಲಾಂಡಿಯಲ್ಲಿ ವಾಸ್ತವ್ಯವಿದ್ದರು. ಕಳೆದ 10 ತಿಂಗಳ ಹಿಂದೆ ಉದ್ಯೋಗಕ್ಕೆಂದು ಏಜೆನ್ಸಿಯ ಮೂಲಕ ಕುವೈತ್‌ಗೆ ತೆರಳಿದ್ದರು. ಅಲ್ಲಿ ಅವರಿಗೆ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ಕೆಲಸಕ್ಕೆ ಕರೆದುಕೊಂಡ ಸಂಸ್ಥೆ ಕೋಣೆಯಲ್ಲಿ ಕೂಡಿ ಹಾಕಿ ಹಿಂಸೆ ನೀಡುತ್ತಿರುವ ಆರೋಪ ಕೇಳಿ ಬಂದಿದೆ.

Harrasement For Puttur Women In Kuwait

'ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ನನಗೆ ಸರಿಯಾದ ಔಷಧ ನೀಡುತ್ತಿಲ್ಲ. ಮತ್ತು ಅನಾರೋಗ್ಯ ಇದ್ದರೆ ವಿದೇಶಕ್ಕೆ ಯಾಕೆ ಬಂದಿರುವುದು ಎಂದು ಬೆದರಿಸಿ ಕೋಣೆಯೊಳಗೆ ಕೂಡಿ ಹಾಕಿದ್ದಾರೆ. ದಿನಕ್ಕೆ ಒಂದು ಹೊತ್ತು ಮಾತ್ರ ಊಟ ನೀಡುತ್ತಿದ್ದಾರೆ. ನನ್ನೊಂದಿಗೆ ಶ್ರೀಲಂಕಾದ ಮಹಿಳೆಯರು ಇದ್ದಾರೆ' ಎಂದು ವಾಯ್ಸ್ ಸಂತ್ರಸ್ತ ಮಹಿಳೆ ವಾಯ್ಸ್‌ ಮೆಸೇಜ್‌ನಲ್ಲಿ ಅಣ್ಣಪ್ಪ ಕಾರೆಕ್ಕಾಡು ಅವರಿಗೆ ತಿಳಿಸಿದ್ದಾರೆ.

ನಾಪತ್ತೆಯಾಗಿದ್ದ ಡಾ.ಕೃಷ್ಣಮೂರ್ತಿ ಶವ ರೈಲ್ವೆ ಹಳಿಯಲ್ಲಿ ಪತ್ತೆ: ಮುಸ್ಲಿಂ ಲೀಗ್ ಕಾರ್ಯಕರ್ತರ ಬಂಧನನಾಪತ್ತೆಯಾಗಿದ್ದ ಡಾ.ಕೃಷ್ಣಮೂರ್ತಿ ಶವ ರೈಲ್ವೆ ಹಳಿಯಲ್ಲಿ ಪತ್ತೆ: ಮುಸ್ಲಿಂ ಲೀಗ್ ಕಾರ್ಯಕರ್ತರ ಬಂಧನ

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಣ್ಣಪ್ಪ ಕಾರೆಕ್ಕಾಡು " ದಿ.ಪಾಂಡಿಯನ್ ಎಂಬವರ ಪತ್ನಿ ನಾಗಮ್ಮ ಅವರು ಪುತ್ತೂರು ಬೊಳುವಾರು ಉರ್ಲಾಂಡಿಯಲ್ಲಿ ಮನೆ ಮಾಡಿಕೊಂಡಿದ್ದರು. ಮನೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ವಿದೇಶಕ್ಕೆ ಕೆಲಸಕ್ಕೆ ಹೋಗಿದ್ದಾರೆ. ಅವರ ಪುತ್ರಿಗೆ ವಿವಾಹವಾಗಿದೆ. ಪುತ್ರ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರು ಈಗ ಸಮಸ್ಯೆಯಲ್ಲಿದ್ದಾರೆ. ನಾಗಮ್ಮ ಅವರಿಗೆ ವಿದೇಶಕ್ಕೆ ತೆರಳಲು ವೀಸಾ ಮಾಡಿಕೊಟ್ಟ ಏಜೆನ್ಸಿಯವರು ಕರೆ ಸ್ವೀಕರಿಸುತ್ತಿಲ್ಲ. ಹಾಗಾಗಿ ಪೊಲೀಸರಿಗೆ ಈ ಕುರಿತು ದೂರು ನೀಡುವುದಾಗಿ ತಿಳಿಸಿದ್ದಾರೆ.

English summary
Harrasement for Puttur women in Kuwait
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X