ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಹಿ ನೀರು ಮೀನುಗಾರಿಕೆಗೆ ಸರ್ಕಾರದ ಭರ್ಜರಿ ಪ್ರೋತ್ಸಾಹ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 24; ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರ್ಕಾರ ಹಲವು ಯೋಜನೆಗಳನ್ನು ಪರಿಚಯಿಸಿದೆ. ಅದರಲ್ಲೂ ಸ್ವ ಉದ್ಯೋಗ ಮಾಡುವ ಸ್ವಾವಲಂಬಿಗಳಿಗೆ ಸರ್ಕಾರ ಸಾಲದ ನೆರವು, ಸಬ್ಸಿಡಿಗಳನ್ನು ನೀಡುತ್ತಲೇ ಬಂದಿದೆ. ಆದರೆ ಹಲವು ಮಂದಿಗೆ ಇದರ ಮಾಹಿತಿ ಸಿಗದೇ ಸರಿಯಾದ ಉದ್ಯೋಗಕ್ಕೆ ಪರದಾಡುತ್ತಾರೆ.

ಸದ್ಯ ರಾಜ್ಯದಲ್ಲಿ ಮೀನುಗಾರಿಕೆ ಹಾಗೂ ಮೀನು ಸಾಕಾಣಿಕೆಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಲವು ನೂತನ ಯೋಜನೆಗಳನ್ನು ಪರಿಚಯಿಸಿದೆ. ಅದರಲ್ಲೂ ಕೃಷಿ ತೋಟಗಳಲ್ಲಿ ಮೀನು ಸಾಕಾಣಿಕೆಯನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.

ಒಂದು ಜಿಲ್ಲೆ ಒಂದು ಉತ್ಪನ್ನ: ಕರಾವಳಿ ಜನರ ಹೊಟ್ಟೆಗೆ ಹಿಟ್ಟು ಕೊಡುತ್ತಿರುವ ಮೀನುಗಾರಿಕೆಒಂದು ಜಿಲ್ಲೆ ಒಂದು ಉತ್ಪನ್ನ: ಕರಾವಳಿ ಜನರ ಹೊಟ್ಟೆಗೆ ಹಿಟ್ಟು ಕೊಡುತ್ತಿರುವ ಮೀನುಗಾರಿಕೆ

ಮೀನು ಸಾಕಾಣಿಕೆ ಮಾಡುವವರಿಗೆ ಸಬ್ಸಿಡಿ, ರಾಜ್ಯದಲ್ಲೇ ಮೀನು ತಳಿಗಳ ಉತ್ಪಾದನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಈ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಆರೋಗ್ಯದ ದೃಷ್ಟಿಯಿಂದ ಮೀನಿಗೆ ಇತ್ತೀಚಿನ ದಿನಗಳಲ್ಲಿ ಭಾರೀ ಬೇಡಿಕೆ ಬರುತ್ತಿದೆ.

ಉಡುಪಿ; 1.81 ಲಕ್ಷಕ್ಕೆ ಮಾರಾಟವಾದ ಒಂದೇ ಮೀನು! ಉಡುಪಿ; 1.81 ಲಕ್ಷಕ್ಕೆ ಮಾರಾಟವಾದ ಒಂದೇ ಮೀನು!

Govt Encouraging Sweet Water Fishing

ಉಪ್ಪು ನೀರಿನ ಮೀನು ಹಾಗೂ ಸಿಹಿ ನೀರಿನ ಮೀನು ಎನ್ನುವ ಎರಡು ರೀತಿಯಲ್ಲಿ ಮೀನುಗಳನ್ನು ವಿಂಗಡಿಸಲಾಗುತ್ತದೆ. ಸಮುದ್ರದಲ್ಲಿ ಸಿಗುವ ಮೀನುಗಳಿಗೆ ಉಪ್ಪು ನೀರಿನ ಮೀನು ಹಾಗೂ ನದಿ ಹಾಗೂ ಕೆರೆ, ತೋಡುಗಳಲ್ಲಿ ಸಿಗುವ ಮೀನುಗಳನ್ನು ಸಿಹಿ ನೀರಿನ ಮೀನುಗಳನ್ನು ಎಂದು ವರ್ಗೀಕರಿಸಲಾಗಿದೆ.

 ಓಯ್! ಮಂಗಳೂರಿನಲ್ಲಿ ಮೀನು ತುಂಬಾ ಅಗ್ಗ ಮಾರ್ರೆ! ಓಯ್! ಮಂಗಳೂರಿನಲ್ಲಿ ಮೀನು ತುಂಬಾ ಅಗ್ಗ ಮಾರ್ರೆ!

ಇತ್ತೀಚೆಗೆ ಮೀನುಗಳಿಗೆ ಸಿಗುತ್ತಿರುವ ಭಾರೀ ಬೇಡಿಕೆಯಿಂದಾಗಿ, ಬೇಡಿಕೆಯನ್ನು ಪೂರೈಸಲಾಗದ ಹಂತದಲ್ಲಿ ಮೀನುಗಾರಿಕಾ ಉದ್ಯಮವಿದ್ದು, ಈ ನಿಟ್ಟಿನಲ್ಲಿ ಸಿಹಿ ನೀರಿನ ಮೀನುಗಾರಿಕೆಗೆ ಹೆಚ್ಚಿನ ಉತ್ತೇಜನವನ್ನು ನೀಡಲು ಸರಕಾರ ತೀರ್ಮಾನಿಸಿದೆ.

ಕೇಂದ್ರ ಸರಕಾರದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಮೂಲಕ ಮೀನುಗಾರಿಕಾ ಇಲಾಖೆಗೆ ಈ ನಿಟ್ಟಿನಲ್ಲಿ ಅನುದಾನಗಳನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ಮೀನು ಸಾಕಾಣಿಕೆಯನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ವೃದ್ಧಿಸಬೇಕು ಎನ್ನುವ ಕಾರಣಕ್ಕಾಗಿ ಕೃಷಿತೋಟಗಳಲ್ಲಿ ಮೀನು ಸಾಕಾಣಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಅದರಲ್ಲೂ ಈ ರೀತಿಯ ಮೀನು ಸಾಕಾಣಿಕೆಯಲ್ಲಿ ತೊಡಗುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವರ್ಗಕ್ಕೆ ಶೇಕಡಾ 60 ಸಬ್ಸಿಡಿಯನ್ನೂ ನೀಡಲಾಗುತ್ತಿದೆ. ಮೀನು ಸಾಕಾಣಿಕೆಗೆ ಬೇಕಾದ ಮೀನಿನ ಮರಿಗಳ ಉತ್ಪಾದನಾ ಘಟಕಗಳನ್ನು ರಾಜ್ಯದಲ್ಲೇ ಆರಂಭಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಈ ಹಿಂದೆ ಮೀನಿನ ಮರಿಗಳಿಗಾಗಿ ತಮಿಳುನಾಡು, ಆಂಧ್ರ ಪ್ರದೇಶ ಹಾಗು ಗುಜರಾತ್ ರಾಜ್ಯಗಳನ್ನು ಅವಲಂಬಿಸಬೇಕಾದ ಪ್ರಮೇಯವನ್ನು ಈ ಮೂಲಕ ನಿವಾರಿಸಲು ನಿರ್ಧರಿಸಲಾಗಿದೆ.

"ರಾಜ್ಯದಲ್ಲಿ ಉತ್ಪಾದನೆಯಾಗುವ ಸಿಹಿ ಹಾಗೂ ಉಪ್ಪು ನೀರಿನ ಮೀನುಗಳನ್ನು ತ್ಪರಿತವಾಗಿ ಮಾರುಕಟ್ಟೆಗಳಿಗೆ ತಲುಪಿಸುವ ನಿಟ್ಟಿನಲ್ಲಿ 8 ಶಿಥಲೀಕರಣ ವ್ಯವಸ್ಥೆಯಿರುವ ವಾಹನಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿದ್ಧವಾಗಿದೆ. ಈ ಶಿಥಲೀಕರಣ ವ್ಯವಸ್ಥೆಯಿರುವ ವಾಹನಗಳನ್ನು ಸೋಲಾರ್ ಮತ್ತು ಎಲೆಕ್ಟ್ರಿಕ್ ಮೂಲಕ ಓಡಿಸುವ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ" ಎಂದು ಮೀನುಗಾರಿಕೆ, ಬಂದರು ಸಚಿವ ಎಸ್.ಅಂಗಾರ ಮಾಹಿತಿ ನೀಡಿದ್ದಾರೆ.

"ಮೀನು ಸಾಕಾಣಿಕೆ ಮಾಡುವವ ಕೃಷಿಕರ ಸಹಕಾರಿ ಸಂಘವೂ ಅಸ್ಥಿತ್ವಕ್ಕೆ ಬರಲಿದ್ದು, ಈ ಮೂಲಕ ಮೀನು ಸಾಕಾಣಿಕೆಯಲ್ಲಿ ತೊಡಗುವ ಕೃಷಿಕರಿಗೆ ಮೀನುಗಾರಿಕೆಗೆ ಬೇಕಾದ ಮೂಲ ವಸ್ತುಗಳಾದ ಮೀನಿನ ಮರಿ, ಮೀನಿನ ಆಹಾರ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನೂ ಮಾಡಲಾಗುತ್ತದೆ. ಸರಕಾರದಿಂದ ನೀಡಲಾಗುವ ಎಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸುವ ಮೂಲಕ ಮೀನು ಸಾಕಾಣಿಕೆಯಲ್ಲಿ ತೊಡಗಿಕೊಳ್ಳಲು ಕೃಷಿಕರು ತೀರ್ಮಾನಿಸಿದ್ದಾರೆ" ಎನ್ನುತ್ತಾರೆ ಮೀನು ಸಾಕಾಣಿಕೆ ಮಾಡುತ್ತಿರುವ ಕೃಷಿಕ ಬೂಡಿಯಾರು ರಾಧಾಕೃಷ್ಣ ರೈ.

ಕರಾವಳಿಯಲ್ಲಿ ಮೀನುಗಾರಿಕೆ ಉತ್ತಮ ಆದಾಯದ ಮೂಲವಾಗಿ ಗುರುತಿಸಿಕೊಂಡಿದ್ದು, ಹೆಚ್ಚಾಗಿ ಉಪ್ಪು ನೀರಿನ ಮೀನುಗಾರಿಕೆಯದ್ದೇ ಇದರಲ್ಲಿ ಹೆಚ್ಚಿನ ಪಾಲಿತ್ತು. ಆದರೆ ಮುಂದಿನ ದಿನಗಳಲ್ಲಿ ಸಿಹಿ ನೀರಿನ ಮೀನುಗಾರಿಕೆಯೂ ಪ್ರಧಾನವಾಗಲಿದೆ.

Recommended Video

ಪಾಕ್ ಬೌಲರ್ ಶಾಹಿನ್ ಅಫ್ರಿದಿಗೆ ಗೆ ಭಾರತದ ಸೋಲಿನಿಂದ ಅನಿಸಿದ್ದೇನು? | Oneindia Kannada

English summary
Government encouraging sweet water fishing. Under Pradhan Mantri Matsya Sampada Yojana govt will create jobs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X