ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನ ಪೊಲೀಸ್ ಬೀಟ್ ವ್ಯವಸ್ಥೆಯಲ್ಲಿ ಬದಲಾವಣೆ

ಮಂಗಳೂರಿನ ಭದ್ರತೆಗಾಗಿ ಪೊಲೀಸ್ ಬೀಟ್ ವ್ಯವಸ್ಥೆಯಲ್ಲಿ ಬದಲವಾಣೆ ಮಾಡಲಾಗಿದ್ದು, 480 ಬೀಟ್ ಸ್ಥಳಗಳಿಗೆ 88 ಎ ಎಸ್ ಐ ದರ್ಜೆಯ ಪೊಲೀಸರನ್ನು ನೇಮಿಸಲಾಗಿದೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಎಪ್ರಿಲ್ 15 : ಕರಾವಳಿಯ ಸುಂದರ ಜಿಲ್ಲೆ, ಮಂಗಳೂರು ಬೆಳೆಯುತ್ತಿರುವ ನಗರಿ. ಜನಸಂಖ್ಯೆ ಜಾಸ್ತಿಯಾದಂತೆ ಭದ್ರತೆಯತ್ತ ವಿಶೇಷ ಗಮನ ನೀಡಲೇಬೇಕಾಗುತ್ತದೆ.

ಮಂಗಳೂರು ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ 16 ಪೊಲೀಸ್ ಠಾಣೆಗಳಲ್ಲಿ 480 ಬೀಟ್ ಸ್ಥಳಗಳಿವೆ. ಇದೀಗ ಇಲ್ಲಿಗೆ ಎಎಸ್ಐ ದರ್ಜೆಯ 88 ಮಂದಿ ಪೊಲೀಸ್‌ ಸಿಬ್ಬಂದಿಯನ್ನು ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ. [ಎಂಬಿಎನಲ್ಲಿ ಚಿನ್ನದ ಪದಕ ಗೆದ್ದ ಮಂಗಳೂರಿನ ಡ್ಯಾಫ್ನಿ ಡಿಸೋಜಾ]

ಅಂದರೆ ನಾಲ್ಕರಿಂದ ಆರು ಬೀಟ್ ಗಳಿಗೆ ಎಎಸ್ಐ ದರ್ಜೆಯ ಪೊಲೀಸರನ್ನೇ ಮೇಲ್ವಿಚಾರಕರನನ್ನಾಗಿ ನೇಮಿಸಲಾಗಿದೆ.

Government changes Police beat in Mangaluru

ಕದ್ರಿಯಲ್ಲಿರುವ 35 ಬೀಟ್ ಗಳಿಗೆ ಹತ್ತು ಮೇಲ್ವಿಚಾರಕರನ್ನ ನೇಮಿಸಲಾಗಿದೆ. ಮಂಗಳೂರು ಗ್ರಾಮಾಂತರದ 36 ಬೀಟ್‌ಗಳಿಗೆ 5 ಮೇಲ್ವಿಚಾರಕರು, ಉಳ್ಳಾಲದ 42 ಬೀಟ್‌ಗಳಿಗೆ 7 ಮೇಲ್ವಿಚಾರಕರು, ಸುರತ್ಕಲ್ ನ 33 ಬೀಟ್‌ಗಳಿಗೆ 8 ಮೇಲ್ವಿಚಾರಕರನ್ನ ನೇಮಿಸಲಾಗಿದೆ. [ಶಾರ್ಟ್ ಸರ್ಕ್ಯೂಟ್, ಮಂಗಳೂರು ಕಾರ್ಪೊರೇಶನ್ ಬ್ಯಾಂಕಿಗೆ ಬೆಂಕಿ]

ಹಾಗೆಯೇ ಬರ್ಕೆಯ 20 ಬೀಟ್‌ ಗಳಿಗೆ 4 ಮೇಲ್ವಿಚಾರಕರು, ಕೊಣಾಜೆಯ 32 ಬೀಟ್‌ ಗಳಿಗೆ 6 ಮೇಲ್ವಿಚಾರಕರು, ಪಾಂಡೇಶ್ವರದ 41 ಬೀಟ್‌ ಗಳಿಗೆ 7 ಮೇಲ್ವಿಚಾರಕರು, ಕಂಕನಾಡಿನ ನಗರದ 21 ಬೀಟ್‌ ಗಳಿಗೆ 4 ಮೇಲ್ವಿಚಾರಕರನ್ನು ನೇಮಿಸಲಾಗಿದೆ.

English summary
For safety of Coastal district Mangaluru, Government has changed police beat system in the region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X