ಖೇಲೋ ಇಂಡಿಯಾದಲ್ಲಿ ಕರಾವಳಿ ಬಾಲಕಿಯರ ಪಾರಮ್ಯ

ಮಂಗಳೂರು, ಜನವರಿ 15: ಖೇಲೋ ಇಂಡಿಯಾ ಕ್ರೀಡಾ ಕೂಟದಲ್ಲಿ ಕರಾವಳಿಯ ಕ್ರೀಡಾಳುಗಳು ರಾಷ್ಟ್ರದ ಗಮನ ಸೆಳೆಯುತ್ತಿದ್ದಾರೆ . ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಕ್ರೀಡಾ ಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಮೂಲದ ಅಪೇಕ್ಷಾ ಅಂಡರ್ -17 ವಿಭಾಗದ 200ಮೀ ಫ್ರೀಸೈಲ್ ಈಜು ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದ್ದಾರೆ.

ಈ ಕ್ರೀಡಾ ಕೂಟದಲ್ಲಿ 17ರ ವಿಭಾಗದ ಬಾಲಕಿಯರ 4೦೦ ಮೀ.ಈಜು ಸ್ಪರ್ಧೆಯಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿ ಚಿನ್ನದ ಪದಕ ಪಡೆದು ದಾಖಲೆ ನಿರ್ಮಿಸಿದ್ದಾರೆ.

ಬಾಲ್ಯದಿಂದಲೂ ಈಜು ಸ್ಪರ್ಧೆಯಲ್ಲಿ ಅನೇಕ ಪ್ರಶಸ್ತಿ ಪಡೆದ ಅಪೇಕ್ಷಾ ಕಿನ್ನಿಗೋಳಿಯ ದಾಮಸ್ ಕಟ್ಟೆಯ ಸಮೀಪದ ಅರಸರಗುತ್ತು ಬಳಿಯ ನಿವಾಸಿ ಡಾ ಪ್ರೋಬೇಲನ್ ಫೆರ್ನಾಂಡಿಸ್ ಹಾಗೂ ಶಾಲೆಟ್ ಫೆರ್ನಾಂಡಿಸ್ ದಂಪತಿಯ ಪುತ್ರಿ.

Girls from Dakshina Kannada bagged gold medals in Khelo India sports events

ಮುಂಬಯಿಯ ಪೂವಾಯಿಯ ಬಾಂಬೆ ಸ್ಯಾಟಿಸ್ ಶಾಲೆಯಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಪೇಕ್ಷಾ ಕ್ರೀಡೆಯ ಜತೆಗೆ ಪಾಠದ ಕಡೆಗೂ ಹೆಚ್ಚಿನ ಗಮನ ನೀಡುತ್ತಿದ್ದು ಪ್ರಬಂಧ ಹಾಗೂ ಗಾಯನ ಸ್ಪರ್ಧೆಯಲ್ಲಿ ಅನೇಕ ಬಹುಮಾನ ಪಡೆದಿದ್ದಾರೆ.

Girls from Dakshina Kannada bagged gold medals in Khelo India sports events

ಅದಲ್ಲದೇ, ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಲಾವಣ್ಯ ರೈ 71 ಕೆ.ಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಈಕೆ ನಾಗ್ಪುರದಲ್ಲಿ ನಡೆದ ಜ್ಯೂನಿಯರ್ ನ್ಯಾಶನಲ್ ಚಾಂಪಿಯನ್ ಶಿಪ್ ನಲ್ಲಿ ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಪಡೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+