ಕೋಮುಗಲಭೆಗೆ ಆಸ್ಪದ ನೀಡದಿರಿ ಬಜರಂಗ ದಳ ಎಚ್ಚರಿಕೆ
ಮಂಗಳೂರು, ಡಿಸೆಂಬರ್, 09: ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಮತ್ತು ಪೀಸ್ ಟಿವಿ ಸ್ಥಾಪಕ ಮುಸ್ಲಿಂ ವಿದ್ವಾಂಸ ಝಾಕೀರ್ ನಾಯ್ಕ್ ಜನವರಿ 3ರಂದು ಮಂಗಳೂರಿಗೆ ಆಗಮಿಸುವ ವಿಚಾರ ತಿಳಿದ ಮಂಗಳೂರಿನ ಹಿಂದೂಪರ ಸಂಘಟನೆಗಳು ಆಕ್ರೋಶಗೊಂಡಿದ್ದು, ಅವರು ಬಾರದಂತೆ ತಡೆಯಲು ಸಿದ್ಧತೆ ನಡೆಸಿದೆ.
ಝಾಕೀರ್ ನಾಯ್ಕ್ ಸಾರಥ್ಯದ ಪೀಸ್ ಟಿವಿ ವಾಹಿನಿ ಮುಸ್ಲಿಂ ಧರ್ಮ ಪ್ರಚಾರದ ಹೆಸರಿನಲ್ಲಿ ಹಿಂದೂ ಧರ್ಮ ಸೇರಿದಂತೆ ಇತರೆ ಧರ್ಮಗಳ ಅವಹೇಳನ ಮಾಡುತ್ತಿದೆ. ಆದರೆ ಜಿಲ್ಲಾಡಳಿತ ಇವರನ್ನು ಬರಮಾಡಿಕೊಳ್ಳಲು ತಯಾರಾಗಿದೆ ಎಂದು ಜಿಲ್ಲಾಡಳಿತ ಅಧಿಕಾರಿಗಳ ಹಿಂದೂಪರ ಸಂಘಟನೆಗಳು ಕಿಡಿಕಾರಿದ್ದಾರೆ.[ಭಾರತದ ಮೇಲೆ ಹಿಂದೂಗಳಿಗಿರುವಷ್ಟೇ ಹಕ್ಕು ಕ್ರೈಸ್ತರಿಗಿದೆ: ಸೂಲಿಬೆಲೆ]

ಕೆಲ ದಿನಗಳ ಹಿಂದೆಯಷ್ಟೇ ಕಂಕನಾಡಿಯ ಜಾಮೀಯತ್ ಫಲಾಹ್ ಸಭಾಂಗಣದಲ್ಲಿ ಝಾಕೀರ್ ನಾಯ್ಕ್ ಮತ್ತು ರವಿಶಂಕರ್ ಗುರೂಜಿ ಮಧ್ಯೆ ಬೆಂಗಳೂರಿನಲ್ಲಿ ಹಿಂದೂ ಮತ್ತು ಮುಸ್ಲಿಂ ದೇವರು ಎಂಬ ವಿಚಾರದ ಮೇಲೆ ನಡೆದ ಚರ್ಚೆಯಲ್ಲಿ ಝಾಕೀರ್ ನಾಯ್ಕ್ ಪಾಂಡಿತ್ಯ ಒಂದು ಹಂತಕ್ಕೆ ಗೆದ್ದಿತ್ತು.
ಈ ಮಧ್ಯೆ 2011ರ ಜನವರಿಯಲ್ಲಿ ಮಂಗಳೂರು ನಗರದಾದ್ಯಂತ ಪೀಸ್ ಟಿವಿ ಪ್ರಸಾರಕ್ಕೆ ತಡೆ ಒಡ್ಡಲಾಗಿತ್ತು. ಸ್ವತಃ ಮಂಗಳೂರು ಪೊಲೀಸರೇ ಕೇಬಲ್ ಆಪರೇಟರ್‌ಗಳಿಗೆ ನೋಟಿಸ್ ನೀಡುವ ಮೂಲಕ ಪೀಸ್ ಟಿವಿ ಪ್ರಸಾರಕ್ಕೆ ತಡೆ ನೀಡಿದ್ದರು.[ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನೈಕ್ ಜೊತೆ ಮಂಗಳೂರು ಶಾಸಕ!]
ಈ ಹಿಂದೆ ಬೆಂಗಳೂರಿನಲ್ಲಿ ವಿ ಎಚ್ ಪಿ ನಾಯಕ ಪ್ರವೀಣ್ ಭಾಯ್ ತೊಗಾಡಿಯಾ ಭಾಷಣಕ್ಕೆ ನಿಷೇಧ ಹೇರಿದ್ದ ಸರ್ಕಾರ ಇದೀಗ ಝಾಕೀರ್ ನಾಯ್ಕ್ ಅವರನ್ನು ಬರಮಾಡಿಕೊಳ್ಳುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು, ಮತ್ತೊಂದು ಕೋಮು ಗಲಭೆಗೆ ಆಸ್ಪದ ನೀಡದಿರಿ ಎಂದು ಬಜರಂಗ ದಳ ಎಚ್ಚರಿಕೆ ನೀಡಿದೆ.












Click it and Unblock the Notifications