Breaking: ಫಾಜಿಲ್ ಹತ್ಯೆ ಹಿಂದೆ ಸುಹಾಸ್ ಶೆಟ್ಟಿ ಗ್ಯಾಂಗ್!?

ಮಂಗಳೂರು, ಆ.01: ಮಂಗಳೂರಿನ ಸುರತ್ಕಲ್ ಯುವಕ ಮಹಮ್ಮದ್ ಫಾಜಿಲ್ ಮಂಗಲಪೇಟೆ ಕೊಲೆ ಪ್ರಕರಣದ ಹಿಂದೆ ಸುಹಾಸ್ ಶೆಟ್ಟಿ ಗ್ಯಾಂಗ್ ಕೈವಾಡ ಇದೆಯೆಂದು ಹಿರಿಯ ಅಧಿಕಾರಿಗಳು ಶಂಕಿಸಿದ್ದಾರೆ.

ಪ್ರಕರಣದಲ್ಲಿ ಐವರನ್ನು ವಶಕ್ಕೆ ಪಡೆಯಲಾಗಿದೆ. ಭಾನುವಾರವಷ್ಟೇ ಮಹಮ್ಮದ್ ಫಾಜಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಂಧನವಾಗಿತ್ತು. ಆರೋಪಿ ಅಜಿತ್ ಕ್ರಾಸ್ತ ಎಂಬುವವನನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳು ಹತ್ಯೆ ಮಾಡಲು ಅಜಿತ್ ಕಾರಿನಲ್ಲಿ ಆಗಮಿಸಿದ್ದರು ಎಂಬುದು ಸದ್ಯದ ಮಾಹಿತಿ.

ಫಾಜಿಲ್ ಹತ್ಯೆಗೆ ಬಿಳಿ ಹುಂಡೈ ಕಾರನ್ನು ಬಳಸಲಾಗಿತ್ತು. ಫಾಜಿಲ್ ಹತ್ಯೆಗೆ ಬಳಸಿದ್ದ ಕಾರು ಸಂಚಾರ ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆರೋಪಿ ಅಜಿತ್ ಕ್ರಾಸ್ತಾ ಈ ಹುಂಡೈ ಕಾರಿನ ಮಾಲೀಕ. ಈಗ ಮತ್ತೆ ಪ್ರಕರಣದಲ್ಲಿ ಐವರನ್ನು ವಶಕ್ಕೆ ಪಡೆಯಲಾಗಿದೆ.

Fazil case 5 taken into custody, Praveen Nettar case 4 more taken into custody

ಇನ್ನು, ಫಾಜಿಲ್ ಹತ್ಯೆಯ ತನಿಖೆಯನ್ನು ಮಂಗಳೂರು ಪೊಲೀಸ್‌ ಕಮಿಷನರೇಟ್‌ನ ಎಸಿಪಿ ಮಹೇಶ್‌ ಕುಮಾರ್‌ಗೆ ವಹಿಸಿ ನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಭಾನುವಾರ ಆದೇಶ ಹೊರಡಿಸಿದ್ದಾರೆ.

ಇನ್ನು, ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬೆಂಗಳೂರು ಮತ್ತು ಕೇರಳದಿಂದ ಇನ್ನೂ 4 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Recommended Video

      Dinesh Karthik ಭಾರತ ಕಂಡ ಶ್ರೇಷ್ಠ 360° ಆಟಗಾರ | *Cricket | OneIndia Kannada

      ಎರಡೂ ಪ್ರಕರಣಗಳ ತನಿಖೆ ಬಹುತೇಕ ಪೂರ್ಣಗೊಂಡಿದೆ ಎಂದು ಮಾಹಿತಿ ಲಭ್ಯವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+