ಪಣಂಬೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಮುದ್ರ ಪಾಲು
ಮಂಗಳೂರು, ಸೆಪ್ಟೆಂಬರ್ 18 : ಪಣಂಬೂರಿನ ಮೀನಕಳಿಯದ ಬಳಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಸಮುದ್ರ ಪಾಲಾಗಿದ್ದಾನೆ. ಯುವಕನ ಶವವನ್ನು ಹುಡುಕಲು ಭಾರೀ ಅಲೆಗಳು ಅಡ್ಡಿ ಪಡಿಸುತ್ತಿವೆ.
ಮೃತಪಟ್ಟ ವಿದ್ಯಾರ್ಥಿಯನ್ನು ಆಂಧ್ರಪ್ರದೇಶದ ಮೂಲದ ಸಾಯಿ ಚರಣ್ (19) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಸಾಯು ಚರಣ್ ವ್ಯಾಸಂಗ ಮಾಡುತ್ತಿದ್ದ.

ಬೆಂಗಳೂರಿನಿಂದ ಸಾಯಿ ಚರಣ್ ಮತ್ತು ಮೂವರು ಸ್ನೇಹಿತರು ರಜೆ ಕಳೆಯಲು ಬಂದಿದ್ದರು. ಮಡಿಕೇರಿಗೆ ತೆರಳಿದ್ದ ಎಲ್ಲರೂ ಅಲ್ಲಿಂದ ಮಂಗಳೂರಿಗೆ ಭೇಟಿದ್ದರು. ಪಣಂಬೂರಿನ ಮೀನಕಳಿಯದ ಬಳಿ ಆಟವಾಡಲು ಸಮುದ್ರಕ್ಕಿಳಿದಾಗ ಸಾಯಿ ಚರಣ್ ನೀರು ಪಾಲಾಗಿದ್ದಾನೆ.
ಪಣಂಬೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಸಾಯಿ ಚರಣ್ ಶವವನ್ನು ಹುಡುಕಲು ಸಮುದ್ರದ ಅಲೆಗಳ ರಭಸ ಅಡಚಣೆಯಾಗಿದೆ. ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಈಜಲು ತೆರಳಿದ್ದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೇತ್ರಾವತಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಸೆ.4ರಂದು ನಡೆದಿತ್ತು. ಮೃತಪಟ್ಟವರು ಮಂಗಳೂರಿನ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು.
ಗೋವಾದ ಮಡಗಾಂವ್ ನಿಂದ ಪ್ರವಾಸಕ್ಕೆ ಬಂದಿದ್ದ ಐದು ಜನರು ಕಾರವಾರದ ಚೆಂಡಿಯಾ ನಾಗರಮಡಿ ಫಾಲ್ಸ್ ನಲ್ಲಿ ನೀರು ಪಾಲಾದ ಘಟನೆ ಭಾನುವಾರ ನಡೆದಿತ್ತು.












Click it and Unblock the Notifications