ದಕ್ಷಿಣ ಕನ್ನಡದಲ್ಲಿ ನವೆಂಬರ್ 20 ಈದ್ ಮೀಲಾದ್ ಆಚರಣೆ: ಯು.ಟಿ.ಖಾದರ್
ದಕ್ಷಿಣ ಕನ್ನಡ, ನವೆಂಬರ್ 19: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದ್ ಮಿಲಾದ್ ರಜೆಯನ್ನು ನಾಳೆ ಮಂಗಳವಾರ ನೀಡಲು ತೀರ್ಮಾನಿಸಲಾಗಿದೆ.
ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನ ಮೀಲಾದುನ್ನಬಿ ಆಚರಣೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ನವೆಂಬರ್ 20ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸರಕಾರಿ ರಜೆ ಘೋಷಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಮೀಲಾದ್ ಸರಕಾರಿ ರಜೆ ನವೆಂಬರ್ 21 ರಂದು ನಿಗದಿಯಾಗಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದ್ ಮೀಲಾದ್ 20 ರಂದು ಆಚರಿಸಲು ತಿರ್ಮಾನಿಸಲಾಗಿದೆ. ಈ ಪರಿಣಾಮ ನವೆಂಬರ್ 21 ರ ಸರಕಾರಿ ರಜೆಯನ್ನು ಬದಲಾಯಿಸಿ ನವೆಂಬರ್ 20 ರಂದು ಶಾಲಾ ಕಾಲೇಜುಗಳಿಗೆ, ಸರಕಾರಿ ಕಚೇರಿಗಳಿಗೆ ರಜಾ ದಿನವನ್ನಾಗಿ ಪರಿಗಣಿಸಲು ಹಾಗೂ ನವೆಂಬರ್ 21 ರಂದು ಎಂದಿನಂತೆ ಕಾರ್ಯನಿರ್ವಹಿಸಲು ಆದೇಶ ಹೊರಡಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಇಂದು ಈ ಕುರಿತು ಸರಕಾರಿ ಆದೇಶ ಹೊರಡಿಸಲಾಗುವುದು ಎಂದು ಖಾದರ್ ತಿಳಿಸಿದ್ದಾರೆ.












Click it and Unblock the Notifications