• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಿಲಕದ ಬಗ್ಗೆ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ:ಸಿದ್ದರಾಮಯ್ಯ

|

ಮಂಗಳೂರು, ಮಾರ್ಚ್ 06: ತಿಲಕ‌ ಕಂಡರೆ ಭಯವಿಲ್ಲ, ಆದರೆ ಬಿಜೆಪಿಯವರ ಉದ್ದದ ತಿಲಕ‌ ಕಂಡರೆ ಭಯವಾಗುತ್ತದೆ ಎಂದು ಹೇಳಿರುತ್ತೇನೆ .ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಳೊಂದಿಗೆ ಮಾತನಾಡಿದ ಅವರು ತಿಲಕ ಹಾಕದೆ ಇರೋರು ಹಿಂದೂಗಳು ಅಲ್ವಾ? ತಿಲಕ ಹಾಕಿದವರು ಮಾತ್ರ ಹಿಂದೂಗಳಾ? ಎಂದು ಪ್ರಶ್ನಿಸಿದರು.

ತಿಲಕ ಇಡುವವರನ್ನು ಕಂಡ್ರೆ ಭಯ: ಸಿದ್ದರಾಮಯ್ಯ ವಿಡಿಯೋ ವೈರಲ್

ಬಿಜೆಪಿಯವರ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ. ನಾನು ತಿಲಕ ಇಡಲ್ಲ, ನಾನು ಹಿಂದೂ ಅಲ್ವಾ? ಉದ್ದ ನಾಮ‌ ಹಾಕಿದವರು ಬಿಜೆಪಿಯವರು. ಈ ಉದ್ದ ನಾಮ ಕಂಡ್ರೆ ಭಯ ಆಗುತ್ತದೆ. ತಿಲಕ ಅಂದ್ರೆ ಸಣ್ಣದಾಗಿ ಹಾಕಬೇಕು. ದೊಡ್ಡ ನಾಮ ಕಂಡ್ರೆ ಭಯ ಆಗುತ್ತದೆ ಎಂದರು.

ಶಾಸಕ ಉಮೇಶ್ ಜಾಧವ್ ಸ್ಪೀಕರ್ ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅದನ್ನು ಸ್ಪೀಕರ್ ಪರಿಶೀಲನೆ ಮಾಡುತ್ತಿದ್ದಾರೆ. ಜಾಧವ್ ಅವರ ರಾಜೀನಾಮೆ ಅಂಗೀಕಾರವಾಗಿಲ್ಲ ಎಂದು ಹೇಳಿದ ಸಿದ್ದರಾಮಯ್ಯ ಅವರು, ಜಾಧವ್ ಸೇರಿ ನಾಲ್ಕು ಜನರ ಮೇಲೆ ಪಿಟಿಷನ್ ಹಾಕಿದ್ದೇವೆ. ಪಿಟಿಷನ್ ಇನ್ನೂ ಪೆಂಡಿಂಗ್ ಇದೆ ಎಂದು ಸ್ಪಷ್ಟಪಡಿಸಿದರು.

ಸೀಟು ಹಂಚಿಕೆ: ಗೌಡ್ರ ವ್ಯವಹಾರ ಏನಿದ್ರೂ ಡೈರೆಕ್ಟ್ ರಾಹುಲ್ ಗಾಂಧಿ, ನಾಟ್ ಸಿದ್ದರಾಮಯ್ಯ

ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರವಾಗದೆ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸೋದು ಅಪರಾಧ. ಅಂಗೀಕಾರವಾಗದೆ ಹೇಗೆ ಭಾಗವಹಿಸುತ್ತಾರೆ ? ಕಾಂಗ್ರೆಸ್ ಶಾಸಕರಾಗಿ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಜಾಧವ್ ಮೇಲೆ ಮತ್ತೆ ಕೇಸ್ ಬಗ್ಗೆ ಚಿಂತಿಸಲಾಗುವುದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಯಾವ ಅತೃಪ್ತ ಶಾಸಕರು ಪಕ್ಷ ಬಿಡೋಲ್ಲ : ಸಿದ್ದರಾಮಯ್ಯ

ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೈತ್ರಿ ಪಕ್ಷದ ಎಲ್ಲರನ್ನು ಭೇಟಿಯಾಗುತ್ತಿದ್ದು, ಮೂರು ನಾಲ್ಕು ದಿನದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಅಂತ್ಯವಾಗುತ್ತದೆ ಎಂದ ಸಿದ್ದರಾಮಯ್ಯ ಅವರು ಜೆಡಿಎಸ್ ಕಾರ್ಯಕರ್ತರ ಹಾಗೆ ನಮ್ಮ ಕಾರ್ಯಕರ್ತರು ಸೀಟು ಕೇಳ್ತಾರೆ. ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಕೊಡಬೇಕೆಂದು ಕೇಳುತ್ತಿದ್ದಾರೆ. ನಮ್ಮ ಎಂಪಿ ಸೀಟು ಬಿಟ್ಟುಕೊಡಲ್ಲ ಮತ್ತು ನಾವು ಅವರ ಎಂಪಿ ಸೀಟ್ ಕೇಳಲ್ಲ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

English summary
Former Chief Minister Siddaramaiah said that don't give special attention or meaning to My thilaka statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X