• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ರಾಮನನ್ನು ಅಯೋಧ್ಯೆಯಲ್ಲಿ ಹುಡುಕಬೇಡಿ, ಆತ್ಮದಲ್ಲಿ ಹುಡುಕಿ'

By ಐಸಾಕ್ ರಿಚರ್ಡ್, ಮಂಗಳೂರು
|

ಮಂಗಳೂರು, ಡಿ.14:'ಬಿಜೆಪಿಯವರು ರಾಮನನ್ನು ಅಯೋಧ್ಯೆಯಲ್ಲಿ ಹುಡುಕುತ್ತಿದ್ದಾರೆ. ರಾಮ ಖಂಡಿತವಾಗಿಯೂ ಅಲ್ಲಿ ನೆಲೆಸಿದ್ದ. ಆತ ಸಾಮಾನ್ಯ ಮನುಷ್ಯದ ಆತ್ಮದಲ್ಲಿ ನೆಲೆಸಿದ್ದಾನೆ. ಆದ್ದರಿಂದ ಆತನನ್ನು ಎಲ್ಲೋ ಹುಡುಕಿ ಪ್ರಯೋಜನವೇನು?' ಎಂದು ನಿಡುಮಾಮಿಡಿ ಮಹಾಸಂಸ್ಥಾನ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಪ್ರಶ್ನಿಸಿದ್ದಾರೆ.

ನಂತೂರು ಶಾಂತಿ ಕಿರಣದಲ್ಲಿ 'ಅಭಿಮತ ಮಂಗಳೂರು' ಆಯೋಜಿಸಿದ್ದ 'ಜನ ನುಡಿ' ಕಾರ್ಯಕ್ರಮದಲ್ಲಿ ಮಾತಾಡುತ್ತಾ ಮೇಲಿನ ವಿಚಾರವನ್ನು ಪ್ರಸ್ತಾಪಿಸಿದರು.

ಪ್ರತಿ ಧರ್ಮಕ್ಕೂ ಅದರದ್ದೇ ಆದ ಧರ್ಮಗ್ರಂಥವಿದೆ. ನಮ್ಮ ದೇಶಕ್ಕೆ ಸಂವಿಧಾನವೇ ರಾಷ್ಟ್ರೀಯ ಗ್ರಂಥ ಅದನ್ನು ಬದಲಾಯಿಸಲು ಹೊಂಚು ಹಾಕುತ್ತಿರುವವರ ಮೂರ್ಖತನ ನೆನೆದು ನಗು ಬರುತ್ತದೆ ಎಂದರು. ಜನರು ತಾವು ಮಾಡಿರುವ ತಪ್ಪು, ಅವ್ಯವಹಾರ, ಕಳಂಕಗಳನ್ನು ತೊಡೆದು ಹಾಕಲು, ಸಾರ್ವಜನಿಕ ಪ್ರತಿಷ್ಠೆ ಹೆಚ್ಚಿಸಲು ಸಮ್ಮೇಳನಗಳನ್ನು ಆಯೋಜನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ದಾನ ಧರ್ಮದ ಬಗ್ಗೆ: ನಿಡುಮಾಮಿಡಿ ಮಹಾಸಂಸ್ಥಾನ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಅವರು ಶ್ರೀಮಂತರು ಧಾನ ಧರ್ಮ ಮಾಡುವುದರ ಬಗ್ಗೆ ಪ್ರಶ್ನಿಸುತ್ತಾ, ಮಠ, ದೇಗುಲಗಳಿಗೆ ದಾನ ಮಾಡಬೇಡಿ. ಮಠ- ದೇಗುಲಗಳ ಉದ್ದೇಶ ಅಮೂಲ್ಯ ದ್ರವ್ಯಗಳನ್ನು ಜನರಿಗೆ ತಲುಪಿಸುವುದೇ ಆಗಿದೆ. ಹೀಗಾಗಿ ನೀವು ಬಡಬಗ್ಗರಿಗೆ ಹಣ ನೀಡಿ, ಚಿನ್ನದ ಗೋಪುರ, ಬಾಗಿಲು ಮಾಡಿಸುವ ಮೂಲಕ ದೇವರ ಕೃಪೆ ಸಿಗುತ್ತದೆ ಎಂಬುದು ಹಾಸ್ಯಾಸ್ಪದ.

ಇದರ ಬದಲು ಜನರಿಗೆ ಅಗತ್ಯವಿರುವ ಕುಡಿಯುವ ನೀರು, ಶಿಕ್ಷಣ, ಸಾರಿಗೆ ವ್ಯವಸ್ಥೆ ಕಲ್ಪಿಸಲು ಬೇಕಾದ ಹಣವನ್ನು ಸ್ಥಿತಿವಂತರು ಒದಗಿಸಿದರೆ ಅದೇ ಮಹಾದಾನ ಎಂದರು. ಜನನುಡಿ ಕ್ರಾಂತಿಕಾರಿ ಬದಲಾವಣೆ ತರುವತ್ತ ಸಾಗಬೇಕು, ಇನ್ನಷ್ಟು ಸಾಹಿತಿಗಳು, ಕಾರ್ಯಕರ್ತರಿಗೆ ಸೂಕ್ತ ವೇದಿಕೆ ಒದಗಿಸಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಮಲ್ಲಿಕಾ ಘಂಟೆ ಉಪಸ್ಥಿತರಿದ್ದರು. ಹಿರಿಯ ಸಾಹಿತಿಗಳಾದ ಸಾರಾ ಅಬೂಬಕ್ಕರ್, ಮಾವಳ್ಳಿ ಶಂಕರ್, ಕೆ.ಎಸ್ ವಿಮಲಾ ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Don't Search Lord Rama in Ayodhya search your Soul said Veerabhadra Chennamalla Swamiji of Sri Nidumamidi Mutt during his speech at Jana Nudi program organised by Abhimatha, Mangaluru. He also said give money to the poor, not temples.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more