ನಂಬಿಕೆ: ಕೊರೊನಾವೈರಸ್‌ಗೆ ರಾಮಬಾಣ ಹಾಲೆ ಮರದ ರಸ!

ಮಂಗಳೂರು, ಜು. 20: ಮಹಾಮಾರಿ ಕೊರೊನಾವೈರಸ್ ಮಧ್ಯೆ ಕರಾವಳಿ ಭಾಗದಲ್ಲಿ ಆಷಾಢ ಅಮಾವಾಸ್ಯೆ ಆಚರಣೆ ನಡೆದಿದೆ. ಅಮಾವಾಸ್ಯೆ ದಿನ ಕರಾವಳಿ ಭಾಗದಲ್ಲಿ ಹಾಲೆ ಮರದ ರಸ ಸೇವಿಸುವ ಸಂಪ್ರದಾಯವಿದೆ. ಅದ್ರಂತೆ ಇಂದು ಆಟಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕರಾವಳಿ ಜನತೆ ಹೆಚ್ಚಿನ ಉತ್ಸುಕತೆಯಿಂದ ಕಷಾಯ ಸೇವಿಸಿದರು. ಈ ಮೂಲಕ ಕೊರೊನಾವೈರಸ್‌ಗೂ ರಾಮಬಾಣ ಆಗುವ ನಂಬಿಕೆಯಿಂದ ಈ ಬಾರಿ ಕರಾವಳಿಯಾದ್ಯಂತ ಕಷಾಯವನ್ನ ಸೇವಿಸಿದ್ದಾರೆ. ಇನ್ನು ಕೊರೊನಾದಿಂದಾಗಿ ಈಗಾಗಲೇ ಕರಾವಳಿ ಮಂದಿ ಕಷಾಯದ ಮೊರೆ ಹೋಗಿದ್ದರು.

ಅಮೃತ ಬಳ್ಳಿ, ತುಳಸಿ ದಳದ ಕಷಾಯ ಸೇವನೆ ಮಾಡುತ್ತಾ ಇದ್ದಾರೆ. ಆದರೆ ವರ್ಷಕ್ಕೊಮ್ಮೆ ಆಟಿ ಅಮಾವಾಸ್ಯೆಯಂದು ಸೇವಿಸುವ ಈ ಹಾಲೆ ಮರ ರಸ ಔಷಧೀಯ ಗುಣ ಹೊಂದಿರುವ ನಂಬಿಕೆಯಿದೆ. ಸೂರ್ಯೋದಯಕ್ಕೂ ಮುನ್ನವೇ ತೊಗಟೆ ರಸ ಸಂಗ್ರಹಮಾಡಿ, ಬಳಿಕ ತೆಂಗಿನಕಾಯಿ ತುರಿ ಗಂಜಿ ಜೊತೆಗೆ ಕಷಾಯ ಸೇವಿಸುವಂತ ಸಂಪ್ರದಾಯ ಕರಾವಳಿಯಲ್ಲಿ ಇಂದಿಗೂ ನಡಿಯುತ್ತಿದೆ.

'

Decoction Of Marine Vine And Basil Juice Is Believed To Have Medicinal Properties

ಇನ್ನು ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಭಾಗದಲ್ಲಿ ಹಾಲೆ ಮರ ರಸ ಸವಿಯಲು ಜನರಲ್ಲಿ ಹೆಚ್ಚು ಉತ್ಸುಕತೆ ಇರುತ್ತೆ. ಆದ್ರೆ ಈ ಬಾರಿ ಕೊರೊನಾವೈರಸ್ ಸೋಂಕಿನ ಹಿನ್ನೆಲೆಯಲ್ಲಿ ನಗರದ ಮಂದಿಯಲ್ಲೂ ಹೆಚ್ಚಿನ ಉತ್ಸಾಹ ಇತ್ತು. ಯಾಕಂದ್ರೆ ಕೊರೊನಾ ಸೋಂಕಿಗೆ ಹಾಲೆ ಮರ ಕಷಾಯ ರಾಮಬಾಣವಾಗೋ ನಂಬಿಕೆ. ಹಾಗಾಗಿ ಈ ಬಾರಿ ಕರಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಟಿ ಅಮಾವಾಸ್ಯೆಯನ್ನ ಆಚರಣೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+