ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ: ಪಿಎಫ್ಐ ಸಮಾವೇಶಕ್ಕೆ ಷರತ್ತು ಬದ್ದ ಒಪ್ಪಿಗೆ

10ನೇ ವರ್ಷಾಚರಣೆ ಪ್ರಯುಕ್ತ ಇಂದು (ಫೆಬ್ರವರಿ 17) ರಂದು ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಮಂಗಳೂರು ಪೊಲೀಸರು ಷರತ್ತು ಬದ್ಧ ಒಪ್ಪಿಗೆ ನೀಡಿದ್ದಾರೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ 17: 10ನೇ ವರ್ಷಾಚರಣೆ ಪ್ರಯುಕ್ತ ಇಂದು (ಫೆಬ್ರವರಿ 17) ರಂದು ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಮಂಗಳೂರು ಪೊಲೀಸರು ಷರತ್ತು ಬದ್ಧ ಒಪ್ಪಿಗೆ ನೀಡಿದ್ದಾರೆ.

ಇದೇ ರೀತಿ ಬೆಳ್ತಂಗಡಿ ತಾಲೂಕಿನ ಉಪ್ಪಿನಂಗಡಿಯ ಇಳಂತಿಲದಲ್ಲಿ ಮಾತ್ರ ಸಮಾವೇಶಕ್ಕೆ ಅನುಮತಿ ನೀಡಲಾಗಿದೆ. ಇಂದು ಮಧ್ಯಾಹ್ನ 2:30ರಿಂದ ಸಂಜೆ 7 ಗಂಟೆಯೊಳಗೆ ಇಳಂತಿಲ ಎಚ್.ಎಂ. ಮೈದಾನದಿಂದ ಸಮೀಪದ ಮೈದಾನದವರೆಗೆ ಪಥ ಸಂಚಲನ ಮತ್ತು ಮೈದಾನದಲ್ಲಿ ಸಾರ್ವಜನಿಕ ಸಮಾವೇಶ ನಡೆಸಲು ಅನುಮತಿ ನೀಡಲಾಗಿದೆ.

Dakshina Kannada: Police permit PFI to hold public function on subject to conditions

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಸಹವರ್ತಿ ಸಂಘಟನೆಗಳು ನಡೆಸಲು ಉದ್ದೇಶಿಸಿರುವ ಸಾರ್ವಜನಿಕ ಹೊರಾಂಗಣ ಕಾರ್ಯಕ್ರಮಗಳಾದ ಸಭಾ ಕಾರ್ಯಕ್ರಮ, ರ್ಯಾಲಿ, ಪರೇಡ್, ಮಾರ್ಚ್ ಫಾಸ್ಟ್ ಗೆ ಆರಂಭದಲ್ಲಿ ನಿರ್ಬಂಧ ಹೇರಲಾಗಿತ್ತು. ಆದರೆ ನಿನ್ನೆ ಷರತ್ತು ಬದ್ದ ಒಪ್ಪಿಗೆ ನೀಡಲಾಗಿದೆ.[ಪಿಎಫ್ ಐ ಸಮಾವೇಶ, ಉಳ್ಳಾಲದಲ್ಲಿ ನಿಷೇಧಾಜ್ಞೆ ಜಾರಿ]

ನಾಲ್ಕು ತಾಲೂಕುಗಳಲ್ಲಿ ನಿಷೇಧಾಜ್ಞೆ

ಇದಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳಾದ ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅತ್ತ ಮುಸ್ಲಿಂ ಬಾಹುಳ್ಯವಿರುವ ಉಳ್ಳಾಲದಲ್ಲಿಯೂ ಸೆಕ್ಷನ್144 ಜಾರಿಗೊಳಿಸಲಾಗಿದೆ. ಫೆಬ್ರವರಿ 17 ರಂದು ಬೆಳಿಗ್ಗೆ 5 ಗಂಟೆಯಿಂದ ಫೆ. 19 ರಂದು ರಾತ್ರಿ 12 ಗಂಟೆವರೆಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.[ಮಂಗ್ಳೂರಿನ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಎರಡು ಶವ ಪತ್ತೆ]

Dakshina Kannada: Police permit PFI to hold public function on subject to conditions

ಉಳ್ಳಾಲದಲ್ಲಿ ಪಿಎಫ್ಐ ವಿರುದ್ಧ ಕೇಸ್

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ (ಪಿಎಫ್ಐ) ವಿರುದ್ಧ ಮಂಗಳೂರಿನ ಉಳ್ಳಾಲದಲ್ಲಿ ಕೇಸ್ ಕೂಡಾ ದಾಖಲಾಗಿದೆ.

ಫೆ.17ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಳ್ಳಾಲದಲ್ಲಿ 'ಯುನಿಟಿ ಮಾರ್ಚ್' ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಹೀಗಾಗಿ ಕಳೆದ ಬುಧವಾರ ತಡರಾತ್ರಿ ಆಯೋಜಕರು ಉಳ್ಳಾಲ, ಕಲ್ಲಾಪು, ತೊಕ್ಕೊಟ್ಟು, ಚೆಂಬುಗುಡ್ಡೆ ಭಾಗದಲ್ಲಿ ಸ್ವಾಗತ ಕಮಾನು, ಬ್ಯಾನರ್ ಗಳನ್ನು ಹಾಗೂ ಧ್ವಜಗಳನ್ನು ಪ್ರಚಾರಕ್ಕೆಂದು ಅಳವಡಿಸಿದ್ದರು.

Dakshina Kannada: Police permit PFI to hold public function on subject to conditions

ಆದರೆ ಈ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಹೀಗಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಕಮೀಷನರ್ ಅವರ ಆದೇಶದಂತೆ ಪೊಲೀಸರು ಕಮಾನು, ಬ್ಯಾನರ್ ತೆರವುಗೊಳಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Mangaluru City Police permitted the Popular Front of India (PFI) to conduct a public program in Nehru Maidan on Friday subject to conditions. And also a case was filed against PFI organization in Ullala police station for not taking permission to hold the Unity March progaram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X