ಕರಾವಳಿಯಲ್ಲಿ ಸೋಮವಾರದಿಂದ ರಂಜಾನ್ ಉಪವಾಸ:ದಕ್ಷಿಣ ಕನ್ನಡ ಖಾಝಿ ಘೋಷಣೆ

ಮಂಗಳೂರು, ಮೇ 06:ಕರಾವಳಿಯಲ್ಲಿ ಮುಸ್ಲಿಂ ಬಾಂಧವರ ಪವಿತ್ರ ರಮ್ಜಾನ್ ಉಪವಾಸ ಆರಂಭವಾಗಿದೆ. ರಮ್ಜಾನ್ ತಿಂಗಳ ಚಂದ್ರ ದರ್ಶನ ಭಾನುವಾರ ಆಗಿರುವುದರಿಂದ ಮೇ 6 ರಿಂದ ಮುಸ್ಲೀಮರು ಒಂದು ತಿಂಗಳ ಉಪವಾಸ ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯರ್ ಘೋಷಿಸಿದ್ದಾರೆ.

ಸಾಮಾಜಿಕ ಸಾಮರಸ್ಯ ಗಟ್ಟಿಗೊಳಿಸಲು ಉಪವಾಸದಿಂದ ಸಾಧ್ಯವಾಗಲಿ. ರಮ್ಜಾನ್ ಎಂಬುದು ಹಸಿವು, ದಾಹ, ಭಾವನೆಗಳನ್ನು ಅರಿತುಕೊಳ್ಳುವ ತಿಂಗಳಾಗಿದ್ದು, ಮಾನವ ಸೌಹಾರ್ದತೆ ಮತ್ತು ಧರ್ಮಸಹಿಷ್ಣುತೆಗೆ ಈ ತಿಂಗಳು ಒತ್ತು ನೀಡುತ್ತದೆ ಎಂದು ಖಾಝಿ ತಿಳಿಸಿದ್ದಾರೆ.

Dakshina Kannada Kazhi announced Monday to mark beginning of Holy Ramzan

ಈ ತಿಂಗಳಲ್ಲಿ ಉಪವಾಸ ಮಾಡುವ ಮೂಲಕ ಮುಸ್ಲಿಮರು ಸ್ವಧರ್ಮವನ್ನು ಅರಿತುಕೊಳ್ಳಲು ಮತ್ತು ಇತರ ಧರ್ಮೀಯರೊಂದಿಗೆ ಸೌಹಾರ್ದ ಸಂಬಂಧ ಗಟ್ಟಿಗೊಳಿಸಲು ಪ್ರಯತ್ನಿಸಬೇಕು. ರಂಜಾನ್ ಸ್ವಶುದ್ಧೀಕರಣದ ತಿಂಗಳು. ನೈತಿಕವಾಗಿ ಮತ್ತು ಮಾನಸಿಕವಾಗಿ ಶುದ್ಧೀಕರಣಗೊಳ್ಳುವ ತಿಂಗಳಾಗಿ ಮುಸ್ಲಿಮರು ಈ ತಿಂಗಳನ್ನು ಸ್ವೀಕರಿಸಲಿ. ನಾಡಿನ ಸಮಸ್ತರಿಗೆ ರಂಜಾನ್ ಶುಭಾಶಯಗಳು ಎಂದು ಖಾಝಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+