ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡದಲ್ಲಿ ಗಮನ ಸೆಳೆವ ಆಕರ್ಷಕ ಪಾರಂಪರಿಕ ಮತಗಟ್ಟೆಗಳು

|
Google Oneindia Kannada News

ಮಂಗಳೂರು, ಏಪ್ರಿಲ್ 17:ಮತದಾನದ ಮಹಾಹಬ್ಬಕ್ಕೆ ಗುರುವಾರ (ಏ.17) ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಸಾಕ್ಷಿಯಾಗಲಿದೆ. ಈ ಬಾರಿ ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಂಕಲ್ಪ ಮಾಡಿದೆ. ಈ ಹಿನ್ನೆಲೆಯಲ್ಲಿ ಜಾಗೃತಿ ಅಭಿಯಾನ ಕೂಡ ನಡೆಸಲಾಗಿತ್ತು.

ದಕ್ಷಿಣ ಕನ್ನಡ ಕ್ಷೇತ್ರ ವ್ಯಾಪ್ತಿಯ ಮತದಾರರನ್ನು ಸೆಳೆಯಲು ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ ತಾಲೂಕಿಗೊಂದರಂತೆ ಪಾರಂಪರಿಕ ಮತಗಟ್ಟೆಗಳನ್ನು ರಚಿಸಲಾಗಿದೆ. ಮತಗಟ್ಟೆಗಳನ್ನು ಸ್ಥಳೀಯ ತುಳು ಸಂಸ್ಕೃತಿ ಮತ್ತು ಕಲೆ ಹಾಗೂ ಸಂಪನ್ಮೂಲಗಳನ್ನು ಬಳಸಿ ರಚಿಸಲಾಗಿದ್ದು, ಮತದಾರರನ್ನು ಮತದಾನದ ದಿನದಂದು ಆಕರ್ಷಿಸಲಿದೆ.

Dakshina Kannada have traditional polling stations

 ಚುನಾವಣಾ ಅಕ್ರಮಗಳಿಗೆ ಹರಿದಾರಿಯಾದ ಮಂಗಳೂರಿನ ಚೆಕ್ ಪೋಸ್ಟ್ ಗಳು ಚುನಾವಣಾ ಅಕ್ರಮಗಳಿಗೆ ಹರಿದಾರಿಯಾದ ಮಂಗಳೂರಿನ ಚೆಕ್ ಪೋಸ್ಟ್ ಗಳು

ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಅಧಿಕಾರಿ ಹೇಮಲತಾ ಅವರ ನಿರ್ದೇಶನದಲ್ಲಿ ಈ ರಚನೆಗಳು ಸಿದ್ಧಗೊಂಡಿದ್ದು, ಪಾರಂಪರಿಕೆ ಬುಡಕಟ್ಟು ವರ್ಗದವರ ಕಲೆ, ಸಂಸ್ಕೃತಿ ಅನಾವರಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Dakshina Kannada have traditional polling stations

 ಲೋಕಸಭಾ ಚುನಾವಣೆ ಹಿನ್ನೆಲೆ:ದಕ್ಷಿಣ ಕನ್ನಡದ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ಲೋಕಸಭಾ ಚುನಾವಣೆ ಹಿನ್ನೆಲೆ:ದಕ್ಷಿಣ ಕನ್ನಡದ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ

ಬೆಳ್ತಂಗಡಿಯ ಕನ್ಯಾನ ಜಿಲ್ಲಾ ಪಂಚಾಯತ್ ಸರ್ಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಪುತ್ತೂರಿನ ಉಜ್ರುಪಾದೆ ಬಲ್ನಾಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಯದ ಬಡ್ಯಡ್ಕದ ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬೆಳ್ತಂಗಡಿಯ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಕೇಂದ್ರಗಳು ಅತ್ಯಾಕರ್ಷಕವಾಗಿ ಮೂಡಿ ಬಂದಿವೆ.

English summary
Lok Sabha Elections 2019:The election commission have setup traditional polling station in each taluks of Dakshina Kannada. These polling stations reflects traditional tulu culture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X