ಎಡಮಂಗಲ: ದೈವನರ್ತನದ ವೇಳೆಯೇ ಕುಸಿದು ಬಿದ್ದು ಸಾವನ್ನಪ್ಪಿದ ದೈವ ನರ್ತಕ
ಮಂಗಳೂರು, ಮಾರ್ಚ್, 30: ದೈವನರ್ತನದ ವೇಳೆಯೇ ದೈವ ನರ್ತಕ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಕಡಬ ತಾಲೂಕಿನ ಇಡ್ಯಡ್ಕದಲ್ಲಿ ಎಂಬಲ್ಲಿ ನಡೆದಿದೆ.
ಕಡಬ ತಾಲೂಕಿನ ಎಡಮಂಗಲ ನಿವಾಸಿ ಕಾಂತು (60) ಸಾವಿಗೀಡಾದ ದೈವ ನರ್ತಕರಾಗಿದ್ದಾರೆ. ಇಡ್ಯಡ್ಕದಲ್ಲಿ ಶಿರಾಡಿ ದೈವ ಕೋಲ ನಡೆದಿದ್ದು, ಈ ವೇಳೆ ದೈವದ ನರ್ತನ ಮಾಡುತ್ತಿರುವಾಗಲೇ ನರ್ತಕ ಕಾಂತು ಅವರು ಕುಸಿದು ಬಿದ್ದು ಸಾವನ್ನಪಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಶಿರಾಡಿ ದೈವದ ನರ್ತನಕ್ಕೆ ಮೊದಲು ಇಡ್ಯಡ್ಕದಲ್ಲಿ ಉಳ್ಳಾಕುಲು, ನಾಗಬ್ರಹ್ಮ ದೈವದ ನರ್ತನ ಮಾಡಲಾಗಿದ್ದು, ಈ ವೇಳೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.ಇನ್ನು ಪರಶುರಾಮ ಸೃಷ್ಟಿಯ ತುಳುನಾಡು ನಾಗಾರಾಧನೆಯಲ್ಲಿ ಬಹಳ ಪಾವಿತ್ರ್ಯತೆಯನ್ನು ಹೊಂದಿದೆ. ದಕ್ಷಿಣ ಭಾರತದಲ್ಲಿ ಹಲವು ನೆಲೆಗಳಲ್ಲಿ ನಾಗಾರಾಧನೆ ನಡೆಯುತ್ತಿದ್ದರೂ ಕರಾವಳಿ ನಾಗಾರಾಧನೆಯ ಮೂಲ ನೆಲ ಎಂದು ನಂಬಲಾಗಿದೆ.
ಇಲ್ಲಿ ನಾಗನಿಗೆ ಸಂಬಂಧಿಸಿ ತನು ಎರೆಯುವುದು, ನಾಗಪ್ರತಿಷ್ಠೆ, ಸರ್ಪಸಂಸ್ಕಾರ, ನಾಗದರ್ಶನ, ಆಶ್ಲೇಷಾ ಬಲಿ, ಢಕ್ಕೆಬಲಿ, ಬ್ರಹ್ಮಮಂಡಲ, ನಾಗಮಂಡಲ, ಕಾಡ್ಯನಾಟ ಮೊದಲಾದ ಸೇವೆಗಳು ನಡೆಯುತ್ತದೆ. ಆದರೆ ಇವರಿಗೆ ವೈದಿಕರಿಂದ ನಡೆಯುತ್ತಿದ್ದ ನಾಗಬ್ರಹ್ಮಮಂಡಲ ಸೇವೆ ಇದೇ ಮೊದಲ ಬಾರಿಗೆ ಚೌಕಟ್ಟು ಮೀರಿ ಬಿಲ್ಲವ ಶಾಂತಿ ಪಾತ್ರಿಗಳಿಂದ ನಡೆದಿದೆ.
ಮಂಗಳೂರು ನಗರದ ಕಂಕನಾಡಿಯ ಶ್ರೀಬ್ರಹ್ಮ ಬೈದ್ಯರ್ಕಳ ಗರಡಿ ಕ್ಷೇತ್ರದಲ್ಲಿ ಕಾವೂರು ಶ್ರೀಮನೋಜ್ ಶಾಂತಿ ಹಾಗೂ ಬಳಗದವರಿಂದ ಅರ್ಧ ಮಂಡಲ ಅಂದರೆ ಚತುಶ್ಪವಿತ್ರ ನಾಗ ಬ್ರಹ್ಮಮಂಡಲ ಸೇವೆ ಸಂಭ್ರಮದಿಂದ ನಡೆದಿದೆ.
ಈ ನಾಗಬ್ರಹ್ಮ ಮಂಡಲೋತ್ಸವ ಐತಿಹಾಸಿಕ ಕ್ರಾಂತಿಯೊಂದಕ್ಕೆ ಮುನ್ನುಡಿ ಬರೆದಿದೆ. ಈ ಹಿನ್ನೆಲೆಯಲ್ಲಿ ನಾಗಮಂಡಲ ಸೇವೆಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಲಾಗಿದೆ. ನಾಗಮಂಡಲ ಢಕ್ಕೆಬಲಿಯ ವಿಸ್ತೃತ ಹಾಗೂ ವೈಭವೀಕೃತ ರೂಪ. ನಾಗಮಂಡಲದ ಪ್ರಮಾಣಕ್ಕನುಗುಣವಾಗಿ ರಂಗದ ಅಳತೆಯಿರುತ್ತದೆ. ನಾಗಮಂಡಲದಲ್ಲಿ ಪೂರ್ಣಮಂಡಲ, ಅರ್ಧಮಂಡಲ, ಕಾಲುಮಂಡಲ ಎಂಬ ಪ್ರಭೇದವಿದೆ.
ಪೂರ್ಣ ಮಂಡಲದಲ್ಲಿ 16 ಪವಿತ್ರ ಗಂಟುಗಳು, 14 ಹೆಡೆಯ ಸರ್ಪಾಕೃತಿ, ಅರ್ಧಮಂಡಲದಲ್ಲಿ 8 ಪವಿತ್ರಗಂಟುಗಳು, 7 ಹೆಡೆಯ ಸರ್ಪಾಕೃತಿ, ಕಾಲು ಮಂಡಲದಲ್ಲಿ 4 ಪವಿತ್ರ ಗಂಟುಗಳು, 5 ಹೆಡೆಯ ಸರ್ಪಾಕೃತಿಯ ಮಂಡಲ ಬಿಡಿಸಲಾಗುತ್ತದೆ. ಕೆಂಪು, ಕಪ್ಪು, ಹಳದಿ, ಬಿಳಿ ಹಾಗೂ ಹಸಿರು ಪಂಚವರ್ಣದ ಹುಡಿಗಳಿಂದ ಮಂಡಲ ರಚನೆಯಿರುತ್ತದೆ. ರಾತ್ರಿ ನಾಗಬನದಲ್ಲಿ ಹಾಲಿಟ್ಟು ಸೇವೆ ಜರುಗಿದ ಬಳಿಕ ನಾಲಮಂಡಲ ಸೇವೆ ನಡೆಯುತ್ತದೆ.
ನಾಗಪಾತ್ರಿ ಹಾಗೂ ನಾಗಕನ್ನಿಕೆ ಢಕ್ಕೆ ಬಲಿಯ ರೀತಿ ನರ್ತಿಸುತ್ತಾರೆ. 'ವೈದ್ಯ'ರ ತಂಡದವರೇ ಡಮರು ಮೇಳವನ್ನು ನಿರ್ವಹಿಸುತ್ತಾರೆ. ಇವರಲ್ಲಿ ಅರ್ಧನಾರಿ ವೇಷತೊಟ್ಟು ಕೈಯಲ್ಲಿ ಕಂಚಿನ ಢಕ್ಕೆ ಹಿಡಿದವನು ನಾಗಯಕ್ಷಿಯನ್ನೂ , ನಾಗಪಾತ್ರಿಯು ಪುರುಷನನ್ನೂ ಪ್ರತಿನಿಧಿಸುತ್ತಾರೆ. ಇವರು ನಾಗನೃತ್ಯದ ವಿವಿಧ ಭಂಗಿಯನ್ನು ಪ್ರದರ್ಶಿಸಿ ಕೊನೆಗೆ ತೋಳುಗಳನ್ನು ಹೆಣೆದುಕೊಂಡು ಪವಿತ್ರ ಗಂಟಿನ ಆಕಾರದಲ್ಲಿ ನರ್ತಿಸುತ್ತಾರೆ. ಇದು ಮಿಥುನಬಂಧದ ಪ್ರತೀಕ. ಆ ಬಳಿಕ ಗಂಟು ಬಿಡಿಸುವ ಚಲನೆಯೂ ಇದೆ.
ಈ ನಡುವೆ ನಾಗಪಾತ್ರಿ ಅಡಿಕೆ ಹೂವನ್ನು ಮುಖಕ್ಕೂ ಮೈಗೂ ಉಜ್ಜಿಕೊಂಡು ಉಗ್ರವಾಗಿ ಕಂಪಿಸಿ ಹಾವಿನ ರೀತಿಯಲ್ಲಿ ಬುಸುಗುಡುತ್ತಾ, ಹೆಡೆಯೆತ್ತಿ ಆಡುವಂತೆ, ನೆಲದಲ್ಲಿ ಹೊರಳಾಡುತ್ತಾನೆ. ಬೆಳ್ಳಂಬೆಳಗ್ಗೆ ನಾಗಮಂಡಲಸೇವೆ ಸಂಪೂರ್ಣಗೊಳ್ಳುತ್ತದೆ. ಒಟ್ಟಿನಲ್ಲಿ ಇದೊಂದು ಫಲಸಮೃದ್ಧಿಯ, ಸಂತಾನಪೇಕ್ಷೆಯ ಆಚರಣೆಯಾಗಿ ಗೋಚರವಾಗುತ್ತದೆ.
ಜೊತೆಗೆ ಸರ್ಪದೋಷ, ದೃಷ್ಟಿದೋಷ, ಚರ್ಮವ್ಯಾಧಿ ನಿವಾರಣೆ ಸೇರಿದಂತೆ ವಿವಿಧ ಕಾರಣಗಳಿಂದ ಇತ್ತೀಚೆಗೆ ನಾಗಮಂಡಲದ ಸಂಖ್ಯೆ ಹೆಚ್ಚುತ್ತಿದೆ. 120 ವರ್ಷಗಳ ಹಿಂದೆ ಬ್ರಹ್ಮಶ್ರೀ ನಾರಾಯಣ ಗುರುಗಳು 'ನಿಮ್ಮ ಶಿವನನ್ನು ನೀವೇ ಪೂಜೆ ಮಾಡಿ' ಎಂದು ಕರೆ ನೀಡಿ ಹೊಸಕ್ರಾಂತಿಗೆ ಮುನ್ನುಡಿ ಬರೆದಿದ್ದರು.
ಇದೀಗ ಬಿಲ್ಲವ ಸಮುದಾಯ 'ನಮ್ಮ ನಾಗನನ್ನು ನಾವೇ ಆರಾಧನೆ ಮಾಡುತ್ತೇವೆ' ಎಂದು ನಾಗಾರಾಧನೆಯ ಇತಿಹಾಸದಲ್ಲಿ ಹೊಸಭಾಷ್ಯವನ್ನು ಬರೆದಿದ್ದಾರೆ. ಅಲ್ಲದೆ ಬಿಲ್ಲವ ನಾಗಪಾತ್ರಿ ಮನೋಜ್ ಶಾಂತಿ ನಾಗಮಂಡಲದಲ್ಲಿಯೇ ವಿನೂತನ ಪರಂಪರೆಯೊಂದನ್ನು ಸೃಷ್ಟಿಸಿದ್ದಾರೆ.












Click it and Unblock the Notifications