ದಂಡೊಲೆ ಗ್ರಾಮದ ಖಾಲಿ ಬಾವಿಯೊಂದರಲ್ಲಿ ಮೊಸಳೆ ಪತ್ತೆ

ಮಂಗಳೂರು, ಜೂನ್ 03: ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪದ ಗ್ರಾಮವೊಂದರ ಖಾಲಿ ಬಾವಿಯಲ್ಲಿ ಮೊಸಳೆ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ದಂಡೊಲೆಯ ಗ್ರಾಮದಲ್ಲಿನ ದಾಮೋದರ್ ಎಂಬುವರ ಮನೆಯ ಬಾವಿಯಲ್ಲಿ ಈ ಮೊಸಳೆ ಕಾಣ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಬೇಸಿಗೆ ಹಿನ್ನೆಲೆಯಲ್ಲಿ ಬಾವಿ ನೀರು ಬತ್ತಿಹೋಗಿದ್ದರಿಂದ ಈ ಮೊಸಳೆ ಕಾಣಿಸಿದೆ. ಈ ಮೂಲಕ ಈ ಭಾಗದ ನೇತ್ರಾವತಿ ನದಿಯಲ್ಲಿ ಮೊಸಳೆಗಳು ವಾಸ್ತವ್ಯವಿರುವುದು ಧೃಡಪಟ್ಟಿದೆ. ನೇತ್ರಾವತಿ ನದಿ ತಟದಲ್ಲಿ ಈ ಗ್ರಾಮವಿದ್ದು, ನದಿಯಿಂದ ಈ ಕಡೆಗೆ ವಲಸೆ ಬಂದ ಮೊಸಳೆ ಈ ಬಾವಿ ಸೇರಿಕೊಂಡಿದೆ ಎಂದು ಶಂಕಿಸಲಾಗಿದೆ. ಮೊಸಳೆ ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ನದಿ ತಟದ ಜನರು ಭಯಭೀತರಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Crocodile found in a dry well

ಬಾವಿಯಲ್ಲಿ ಪತ್ತೆಯಾಗಿರುವ ಮೊಸಳೆಯ ರಕ್ಷಣೆಗೆ ಅರಣ್ಯ ಇಲಾಖೆಯ ಅಧಿಕಾರಿ ಮುಂದಾಗಿದ್ದಾರೆ. ನೇತ್ರಾವತಿ ನದಿಯಲ್ಲಿ ಈವರೆಗೆ ಮೊಸಳೆಗಳಿಲ್ಲ ಎಂದೇ ನಂಬಲಾಗಿತ್ತು. ಆದರೆ ಈಗ ಮೊಸಳೆಯೊಂದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯಲ್ಲೂ ಮೊಸಳೆಗಳ ವಾಸ್ತವ್ಯವಿದೆ ಎಂದು ಅಂದಾಜಿಸಲಾಗಿದ್ದು ಈ ಕುರಿತು ಶೋಧ ನಡೆಸುವ ಅವಶ್ಯಕತೆಯಿದೆಯೆಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+