ರಾಹುಲ್ ಗಾಂಧಿ ಮಂಗಳೂರು ಸಮಾವೇಶದ ಚಿತ್ರಗಳು
ಮಂಗಳೂರು,
ಏ. 5 : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಶುಕ್ರವಾರ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದಾರೆ. ಬಳ್ಳಾರಿ ಮತ್ತು ಮಂಗಳೂರಿನಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿಜೆಪಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಷಯದಲ್ಲಿ ಏಕೆ ಮೌನ ವಹಿಸಿದೆ ಎಂದು ಪ್ರಶ್ನಿಸಿದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ] id="toptextpromo"> id='are-slot-1' class='oiad oi-axt oiadv'>ಮಂಗಳೂರಿನಲ್ಲಿ
ಮಾತನಾಡಿದ ರಾಹುಲ್, ಕಡ್ಡಾಯ ಶಿಕ್ಷಣ, ಸಂಪೂರ್ಣ ಉದ್ಯೋಗ, ಆರೋಗ್ಯ ಭಾಗ್ಯ ಸಹಿತ ಸರ್ವಾಂಗೀಣ ಪ್ರಗತಿಗಾಗಿ ಯುಪಿಎ ಸರ್ಕಾರವನ್ನು ಮೂರನೆಯ ಬಾರಿಗೆ ಚುನಾಯಿಸುವಂತೆ ಮತದಾರರಿಗೆ ಮನವಿ ಮಾಡಿದರು. ಚಿತ್ರಗಳಲ್ಲಿ ನೋಡಿ ರಾಹುಲ್ ಗಾಂಧಿ ಮಂಗಳೂರು ಸಮಾವೇಶ [ಚಿತ್ರಕೃಪೆ
ಮಂಗಳೂರಿನಲ್ಲಿ ಕಪ್ಪುಬಾವುಟ ಪ್ರದರ್ಶನ
ಮಂಗಳೂರಿನಲ್ಲಿ ರಾಹುಲ್ ಗಾಂಧಿಗೆ ಕಪ್ಪು ಬಾವುಟದ ಸ್ವಾಗತ ದೊರೆಯಿತು. ರಾಜ್ಯದ ಕಾಂಗ್ರೆಸ್ ಸರ್ಕಾರ ನೈತಿಕ ಪೊಲೀಸ್‌ಗಿರಿ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಸಮಾನ ಮನಸ್ಕ ಸಂಘಟನೆಗಳ ಸುಮಾರು 50ಕ್ಕೂ ಅಧಿಕ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಕಪ್ಪುಬಾವುಟ ಪ್ರದರ್ಶಿಸಿದರು. ರಾಹುಲ್ ಗಾಂಧಿ ಗೋ ಬ್ಯಾಕ್ ಎಂದು ಘೋಷಣೆ ಕೂಗಿದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ, ನಂತರ ಬಿಡುಗಡೆ ಮಾಡಿದರು.

ಸಮಾವೇಶಕ್ಕೆ ಬಂದ ರಾಹುಲ್
ಸಂಜೆ 5.30ರ ಸುಮಾರಿಗೆ ರಾಹುಲ್ ಗಾಂಧಿ ಅವರ ಸಮಾವೇಶ ನಗರದ ನೆಹರು ಮೈದಾನದಲ್ಲಿ ಆರಂಭವಾಯಿತು. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವ ರಮಾನಾಥ ರೈ ರಾಹುಲ್ ಗಾಂಧಿ ಜೊತೆಗೆ ವೇದಿಕೆಗೆ ಆಗಮಿಸಿದರು.

ಪೂಜಾರಿ ವೇದಿಕೆಯಿಂದ ದೂರ
ತಮ್ಮ ಪರವಾಗಿ ಪ್ರಚಾರ ನಡೆಸಲು ರಾಹುಲ್ ಗಾಂಧಿ ಮಂಗಳೂರಿಗೆ ಆಗಮಿಸಿದರೂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ವೇದಿಕೆ ಹತ್ತಲಿಲ್ಲ. ಅಭ್ಯರ್ಥಿ ವೇದಿಕೆ ಮೇಲೆ ಕುಳಿತರೆ ಸಮಾವೇಶದ ಖರ್ಚು ಅಭ್ಯರ್ಥಿ ಚುನಾವಣಾ ವೆಚ್ಚಕ್ಕೆ ಸೇರುವುದರಿಂದ ಪೂಜಾರಿ ವೇದಿಕೆ ಏರಲಿಲ್ಲ.

ಸಮಾವೇಶದಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು?
ಉತ್ತಮ ಬಂದರು, ಶಿಕ್ಷಣ, ಬ್ಯಾಂಕುಗಳ ತವರೂರಾದ ಮಂಗಳೂರು ಅಂತಾರಾಷ್ಟ್ರೀಯ ನಗರವಾಗಿ ರೂಪುಗೊಳ್ಳುತ್ತಿದೆ ಎಂದು ಮಂಗಳೂರನ್ನು ಶ್ಲಾಘಿಸಿದ ರಾಹುಲ್ ಗಾಂಧಿ, ಮಂಗಳೂರು ಎಂದರೆ ತಮಗೆ ಬಲು ಹೆಮ್ಮೆ ಎಂದರು.

ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ
ಕೇಂದ್ರದಲ್ಲಿ ಯುಪಿಎ ಮತ್ತೂಮ್ಮೆ ಅಧಿಕಾರಕ್ಕೆ ಬಂದರೆ ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ, ದೇಶದಲ್ಲಿ ಎರಡು ಸಾವಿರ ಮಹಿಳಾ ಪೊಲೀಸ್ ಠಾಣೆ ಸ್ಥಾಪನೆ ಸೇರಿದಂತೆ ಹಲವು ಅಭಿವೃದ್ಧಿಪರ ಕಾರ್ಯಗಳನ್ನು ಕೈಗೊಳ್ಳುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದರು.

ಕಾರಿಡಾರ್ ನಿರ್ಮಿಸಲಾಗುತ್ತದೆ
ದೆಹಲಿ, ಕೋಲ್ಕೊತ್ತಾ, ಮುಂಬೈ, ಚೆನ್ನೈ ಮತ್ತು ಬೆಂಗಳೂರನ್ನು ಒಳಗೊಂಡ ಬೃಹತ್ ಕೈಗಾರಿಕಾ ಕಾರಿಡಾರ್ ನಿರ್ಮಿಸಲಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.

ಕಾರ್ಮಿಕರಿಗೆ ವಿಶೇಷ ಸೌಲಭ್ಯ
ದೇಶದಲ್ಲಿ ಸುಮಾರು 70 ಕೋಟಿ ಕಾರ್ಮಿಕರಿದ್ದಾರೆ. ಇವರ ಮಕ್ಕಳಿಗೆ ಶಾಲೆ, ಕಾಲೇಜು, ವಿವಿಗಳನ್ನು ತೆರೆದು, ಉಚಿತ ಶಿಕ್ಷಣ ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸಿ ಅವರ ಅಭಿವೃದ್ಧಿಗೊಳಿಸಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದರು.

ನಿಮ್ಮ ಪ್ರಣಾಳಿಕೆ ನಿಮ್ಮ ಶಕ್ತಿ
ದೇಶದ ತುಂಬಾ ಸಂಚಾರ ನಡೆಸಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇವೆ. ಇದು ನಿಮ್ಮ ಪ್ರಣಾಳಿಕೆ ಅದರಲ್ಲಿ ನೀಡಿರುವ ಯೋಜನೆಗಳನ್ನು ಕಾರ್ಯಗತಗೊಳಿಸಲು ಯುಪಿಗೆ ಮತ್ತೊಮ್ಮೆ ಅಧಿಕಾರ ನೀಡಿ ಎಂದು ರಾಹುಲ್ ಗಾಂಧಿ ಮನವಿ ಮಾಡಿದರು. [ಕಾಂಗ್ರೆಸ್ ಪ್ರಣಾಳಿಕೆ ನೋಡಿ]

ಹೊಸ ಪ್ರಯತ್ನ ನಡೆಸಿದ್ದೇವೆ
ಮಂಗಳೂರು ಕ್ಷೇತ್ರದಲ್ಲಿ ಆಂತರಿಕ ಚುನಾವಣೆ ನಡೆಸುವ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಯಿತು. ರಾಹುಲ್ ಗಾಂಧಿ ಅವರ ಈ ಪ್ರಯೋಗಕ್ಕೆ ಜನಾರ್ದನ ಪೂಜಾರಿ ಅವರಂತಹ ನಾಯಕರು ಒಪ್ಪಿಗೆ ನೀಡಿ ಚುನಾವಣೆಯಲ್ಲಿ ಪಾಲ್ಗೊಂಡು ಜಯಗಳಿಸಿದರು ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಜನರಿಗೆ ಮನವಿ ಮಾಡಿದರು.


Click it and Unblock the Notifications
