• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹನುಮಾನ್ ಚಾಲೀಸಾ ಪಠಿಸಿದ ಮಿಥುನ್ ರೈ:ಸ್ಪಷ್ಟನೆ ಕೊಟ್ಟ ಖಾದರ್

|

ಮಂಗಳೂರು ಏಪ್ರಿಲ್ 11:ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಹಿಂದುತ್ವದತ್ತ ವಾಲುತ್ತಿದೆಯೇ ? ಎನ್ನುವ ಸಂಶಯ ಮೂಡಲಾರಂಭಿಸಿದೆ.ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ಬಳಿ ಈ ಪ್ರಶ್ನೆ ಮುಂದಿಟ್ಟಾಗ ಉತ್ತರಿಸಿದ ಖಾದರ್, ನಮ್ಮದು ಸ್ಟ್ರಾಂಗ್ ಅಥವಾ ಮೃದು ಹಿಂದುತ್ವವಲ್ಲ. ಉತ್ತಮ ಹಿಂದುತ್ವ ಎಂದು ಸ್ಪಷ್ಟಪಡಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರು ಹೇಳಿಕೊಟ್ಟ ಹಿಂದುತ್ವವನ್ನು ಪಾಲಿಸುತ್ತದೆ. ಆದರೆ ಬಿಜೆಪಿಯದ್ದು ಬೇರೆಯದ್ದೇ ಹಿಂದುತ್ವ ಎಂದು ಕಿಡಿಕಾರಿದರು.

ಕರಾವಳಿಯಲ್ಲಿ ಕೇಸರಿಯಾಗಿ ಬದಲಾದ ಕಾಂಗ್ರೆಸ್: ಉದ್ದೇಶವೇನು?

ಇದೇ ವೇಳೆ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹನುಮಾನ್ ಚಾಲೀಸಾ, ಖುರಾನ್ ಪಠಣ ಮಾಡಿದ್ದನ್ನು ಸಚಿವ ಖಾದರ್ ಸಮರ್ಥಿಸಿಕೊಂಡಿದ್ದಾರೆ.

ಹನುಮಾನ್ ಚಾಲೀಸಾ ಪಠಿಸಿದರೆ ಸ್ವರ್ಗಕ್ಕೆ ಹೋಗ್ತಾರೆ. ಒಂದು ವೋಟ್ ಹೆಚ್ವು ಬರುತ್ತದೆ. ಖುರಾನ್ ಪಠಣ ಮಾಡಿದರೆ ಮತ್ತಷ್ಟು ವೋಟ್ ಲಭಿಸಲಿದೆ ಎಂದು ಖಾದರ್ ಹೇಳಿಕೆ ನೀಡಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಮತ್ತೆ ಪ್ರಚಾರ ವೈಖರಿ ಬದಲಿಸಿದ ಕಾಂಗ್ರೆಸ್

ಬಿಜೆಪಿಯದ್ದು ಕಟ್ ಆಂಡ್ ಪೇಸ್ಟ್ ಪ್ರಣಾಳಿಕೆ. ಕಾಂಗ್ರೆಸ್ ನೀಡುವ ಭರವಸೆ ಚುನಾವಣೆ ಜುಮ್ಲಾವಲ್ಲ. ಜನರ ಆಶೋತ್ತರ, ಸ್ವಾಭಿಮಾನ ಮತ್ತು ನೆಮ್ಮದಿಯಿಂದ ಜೀವನ ಸಾಗಿಸುವ ದೃಷ್ಠಿಯಿಂದ ರೂಪಿಸಲಾದ ಪ್ರಣಾಳಿಕೆ ಎಂದು ಹೇಳಿದರು.

ಈ ಬಾರಿ ಜನರು ಭಾವನಾತ್ಮಕವಾಗಿ ಮತ ಚಲಾಯಿಸುವುದಿಲ್ಲ ಎಂದ ಖಾದರ್ ಆತ್ಮಾವಲೋಕನ ಮಾಡಿ ಮತ ಚಲಾಯಿಸುತ್ತಾರೆ.ರಫೇಲ್ ದಾಖಲೆ ಕದ್ದು ಹೋಗಿರೋದು ತಲೆ ತಗ್ಗಿಸುವ ವಿಚಾರ. ಇಡೀ ವಿಶ್ವದೆದುರು ತಲೆ ತಗ್ಗಿಸುವಂತಾಗಿದೆ ಎಂದು ಅಭಿಪ್ರಾಯಪಟ್ಟರು.

English summary
Lok Sabha Elections 2019: In Mangaluru Dakshina Kannada district incharge minister UT Khadar said that ours is not strong or soft hindutva. Congress propositions good hindutva.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X