ಬಿಜೆಪಿ ಪಕ್ಷದ ಬಗ್ಗೆ ಜನಾರ್ದನ ಪೂಜಾರಿ ಮಂಗಳೂರಲ್ಲಿ ಹೇಳಿದ್ದೇನು?

ಮಂಗಳೂರು, ಡಿಸೆಂಬರ್.10: ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಇದು ರಾಜಧರ್ಮವಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಬಿಜೆಪಿ ಪಕ್ಷದ ಮೇಲೆ ಕಿಡಿಕಾರಿದ್ದಾರೆ.

ಮಂಗಳೂರಿನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ನಡೆಸುವ ಸರ್ಕಾರಕ್ಕೆ ಸಂಸತ್ ನಡೆಸುವ ಅರಿವಿರಬೇಕು. ಕೋಮು ಗಲಭೆ, ಅಸಹಿಷ್ಣುತೆ ಸೃಷ್ಟಿಸುವ ಹೇಳಿಕೆ ನೀಡುವವರ ವಿರುದ್ಧ ಕೇಂದ್ರ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಈ ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಸಂಸತ್ ಮೇಲೆ ಜನರು ನಂಬಿಕೆ ಕಳೆದುಕೊಳ್ಳುತ್ತಾರೆ ಎಂದು ಪಕ್ಷದ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.[ದಿಕ್ಕು ತಪ್ಪಿದ ಸಂಸತ್ ಕಲಾಪ, ಸಮಯ ವ್ಯರ್ಥ ಪೋಲು]

Congress leader janardhana poojari blame the BJP government at Mangaluru

ದೇಶದಲ್ಲಿ ಆಗುಹೋಗುಗಳ ಬಗ್ಗೆ ಅವಲೋಕನ ಮಾಡುವುದು ಹಾಗೂ ಸಮರ್ಪಕ ಉತ್ತರ ಮತ್ತು ಕ್ರಮಕೈಗೊಳ್ಳುವುದು ಪ್ರತಿಪಕ್ಷದ ಕರ್ತವ್ಯ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಈ ಅಂಗಗಳು ಪ್ರಬಲ ಹಾಗೂ ಬಲಿಷ್ಠವಾಗಿರಬೇಕು. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಸುವ್ಯವಸ್ಥೆಯತ್ತ ಸಾಗಲಿದೆ ಎಂದು ಹೇಳಿದರು.[ಚಳಿಗಾಲದ ಸಂಸತ್ ಅಧಿವೇಶನ: ಯಾರು, ಏನು ಹೇಳಿದರು?]

ಈ ಸಂದರ್ಭದಲ್ಲಿ ರಮಾನಂದ ಪೂಜಾರಿ, ಡಿ.ಕೆ ಸುಧೀರ್, ಸವಿತಾ ಸನಿಲ್, ಪಿ.ವಿ. ಮೋಹನ್, ಮಾಜೀ ಮೇಯರ್ ಕವಿತಾ ಹೊಯ್ಗೆ ಬಜಾರ್ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+