ಕರಾವಳಿಯಲ್ಲಿ ಕಾಂಗ್ರೆಸ್ ಹಿಂದುತ್ವ ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದೆಯೇ?!

ಮಂಗಳೂರು, ಏಪ್ರಿಲ್ 09: ಕರಾವಳಿ ಅದರಲ್ಲೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಚಾರದ ಕಾರ್ಯ ವೈಖರಿ ಬದಲಿಸಿದೆ. ಸಂಘ ಪರಿವಾರ ಪ್ರತಿಪಾದಿಸುವ ಹಿಂದುತ್ವವನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತಾ ಬಂದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದರೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಹಿಂದುತ್ವವನ್ನೇ ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದೆಯೇ ಎನ್ನುವ ಅನುಮಾನ ಮೂಡಲಾರಂಭಿಸಿದೆ. ಇದಕ್ಕೆ ಕಾಂಗ್ರೆಸ್ ಮುಖಂಡರ ಹೇಳಿಕೆಗಳು ಪುಷ್ಠಿ ನೀಡುತ್ತಿವೆ.

ಹಿಂದುತ್ವದ ಕುರಿತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಹೇಳಿಕೆ ನೀಡಿದ್ದಾರೆ. ಬೆಳ್ತಂಗಡಿ ವಿಧಾನಸಭಾ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದ್ದಾರೆ. ಎಲ್ಲಾ ಜಾತಿ ಧರ್ಮದವರನ್ನು ಒಗ್ಗೂಡಿಸಿ ಮುನ್ನಡೆಸುವ ನಾವು ನೈಜ ಹಿಂದುತ್ವದ ಸಿದ್ಧಾಂತ ಅನುಸರಿಸುತ್ತಿದ್ದೇವೆ. ನಮ್ಮದು ನಿಜವಾದ ಹಿಂದುತ್ವ ಎಂದು ಹೇಳಿದ್ದಾರೆ.

Congress Chanting Hinduthva in Dakshina kannada constituency

ಧರ್ಮಗಳ ನಡುವೆ ವೈಷಮ್ಯ ಬೆಳೆಸಿ ರಾಜಕೀಯ ನಡೆಸುವುದು ಹಿಂದುತ್ವ ಅಲ್ಲ. ನನ್ನ ರಾಜಕೀಯ ಸಿದ್ಧಾಂತ ಸ್ಪಷ್ಟವಾಗಿದೆ. ಎಲ್ಲರಿಗೂ ಸಮಪಾಲು ಸಹಬಾಳ್ವೆಗಾಗಿ. ಎಲ್ಲಾ ಜಾತಿ-ಧರ್ಮದವ ರನ್ನು ಗೌರವಿಸಿ ಒಟ್ಟಿಗೆ ಮುನ್ನಡೆಸುವುದೇ ನಿಜವಾದ ಹಿಂದೂ ಧರ್ಮ ಎಂದು ಅವರು ತಿಳಿಸಿದ್ದಾರೆ.

Congress Chanting Hinduthva in Dakshina kannada constituency

ಆ ನಂತರ ಮಿಥುನ್ ರೈ ಸೋಮನಾಥೇಶ್ವರ ದೇವಸ್ಥಾನ, ಹೋಲಿ ರೆಡಿಮೆರ್ ಚರ್ಚ್‌, ಜುಮಾ ಮಸೀದಿಗೆ ಭೇಟಿ ನೀಡಿದರು. ಕನ್ಯಾಡಿ ರಾಮಕ್ಷೇತ್ರದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳ ಆಶೀರ್ವಾದ ಪಡೆದು, ಕೊಕ್ಕಡ ಸಾರ್ವಜನಿಕ ಸಭೆಗೂ ಮುನ್ನ ಸೌತಡ್ಕದ ಮಹಾಗಣಪತಿ ದೇವರ ದರ್ಶನ ಪಡೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+