• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯಲ್ಲಿ ಕಡಲ ಅಬ್ಬರ: ನೋಡನೋಡುತ್ತಿದ್ದಂತೆಯೇ ಕಡಲ ಪಾಲಾದ ಮನೆ-ರಸ್ತೆ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 15: ಕರಾವಳಿಯಲ್ಲಿ ಮಳೆ ಅಬ್ಬರ ಕಡಿಮೆಯಾದರೂ, ಮಳೆ ಬಳಿಕದ ಹಾನಿ ಮುಂದುವರಿದಿದೆ. ನದಿಗಳು ಶಾಂತವಾಗಿವೆ, ಆದರೆ ಅರಬ್ಬೀ ಸಮುದ್ರ ಮಾತ್ರ ಅಬ್ಬರಿಸಿ ಬೊಬ್ಬಿರಿಯುತ್ತಿದೆ.‌ ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ. ಕಡಲತೀರದ ಜನ ಹಗಲು ರಾತ್ರಿ ಆತಂಕದಲ್ಲೇ ಮನೆಯಲ್ಲಿ ದಿನಕಳೆಯುವಂತಾಗಿದೆ.

ಮಂಗಳೂರಿನಲ್ಲಿ ಕಡಲ್ಕೊರೆತ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ನಗರದ‌ ಹೊರವಲಯ ಮೀನಕಳಿಯ ಬಳಿ ಕಡಲ್ಕೊರೆತ ತೀವ್ರಗೊಂಡ ಪರಿಣಾಮ 500 ಕ್ಕೂ ಅಧಿಕ ಮನೆಗಳು ಆತಂಕದಲ್ಲಿದೆ. ಮೀನಕಳಿಯ ಜನರು ನೋಡುತ್ತಿದ್ದಂತೆಯೇ ಕಡಲು ಮತ್ತಷ್ಟು ರಸ್ತೆಯನ್ನು ಅಪೋಷನ ಪಡೆದು ಮನೆಗಳತ್ತ ಸಮುದ್ರ ಮುನ್ನುಗ್ಗುತ್ತಿದೆ. ಕಡಲ ಅಬ್ಬರ ಹೆಚ್ಚಾದ ಹಿನ್ನಲೆಯಲ್ಲಿ ಮೀನಕಳಿಯ ಭಾಗದ ಜನರು ಸಂಪರ್ಕ ರಸ್ತೆಯನ್ನೇ ಕಳೆದುಕೊಂಡಿದ್ದಾರೆ.‌ ಸ್ಥಳೀಯ ಶಾಸಕರು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ಮಾಡಿ, ಈ ಬಾರಿಯ ಮಳೆಗಾಲದವರೆಗೆ ತಾತ್ಕಾಲಿಕ ತಡೆಗೋಡೆ ನಿರ್ಮಾಣದ ಭರವಸೆ ನೀಡಿದ್ದಾರೆ.

ಕರಾವಳಿ ಕಡೆಗೆ ಪ್ರವಾಸಕ್ಕೆ ಹೋಗುವ ಮುನ್ನ ಎಚ್ಚರ: ಇಲ್ಲಿದೆ ಕೆಲ ಸೂಚನೆಗಳು!ಕರಾವಳಿ ಕಡೆಗೆ ಪ್ರವಾಸಕ್ಕೆ ಹೋಗುವ ಮುನ್ನ ಎಚ್ಚರ: ಇಲ್ಲಿದೆ ಕೆಲ ಸೂಚನೆಗಳು!

ಅಲೆಗಳ ಹೊಡೆತಕ್ಕೆ ಈಗಾಗಲೇ ಸಾಕಷ್ಟು ಮನೆಗಳು ಸಮುದ್ರ ಪಾಲಾಗಿದೆ. ಅಪಾಯದಲ್ಲಿದ್ದ ಹಲವು ಮನೆಗಳ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದ್ದು, ಇನ್ನುಳಿದ ನಿವಾಸಿಗಳು ಆತಂಕದಲ್ಲಿಯೇ ಜೀವನ ನಡೆಸುತ್ತಿದ್ದಾರೆ.

ಮಂಗಳೂರು: 15 ದಿನವಾದರೂ ಇಳಿಯದ ನೆರೆ ನೀರು, ಮನೆಯಿಂದ ಹೊರಬರಬೇಕಾದರೆ ಬೇಕು ಬೋಟ್! ಮಂಗಳೂರು: 15 ದಿನವಾದರೂ ಇಳಿಯದ ನೆರೆ ನೀರು, ಮನೆಯಿಂದ ಹೊರಬರಬೇಕಾದರೆ ಬೇಕು ಬೋಟ್!

 ಕಡಲ್ಕೊರತಕ್ಕೆ ಸಮುದ್ರ ಪಾಲಾದ ಮನೆಗಳು

ಕಡಲ್ಕೊರತಕ್ಕೆ ಸಮುದ್ರ ಪಾಲಾದ ಮನೆಗಳು

ಮೀನಕಳಿಯ ಭಾಗದಲ್ಲಿ ಈಗಾಗಲೇ ಸ್ಥಳೀಯಾಡಳಿತ ಕಡಲಿಗೆ ಮರಳಿನ ಬ್ಯಾಗ್‌ಗಳನ್ನು ಹಾಕುವ ಕೆಲಸ ಮಾಡುತ್ತಿದೆ. ಆದರೆ ಕಡಲು ಮಾತ್ರ ಅಬ್ಬರಿಸುತ್ತಿದ್ದು,ಈಗಾಗಲೇ ಮೀನು ಮಾರುಕಟ್ಟೆಗೆ ದಕ್ಷಿಣದಲ್ಲಿ ಎಂಟಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ‌. ಈ ಮನೆಗಳ ನಿವಾಸಿಗಳು ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಮನೆಗಳ ಜೊತೆಗೆ ಹಲವಾರು ತೆಂಗಿನ ಮರಗಳು ಬುಡಮೇಲಾಗಿವೆ ಎಂದು ತಿಳಿದುಬಂದಿದೆ.

 8 ವರ್ಷಗಳಲ್ಲೇ ದೊಡ್ಡ ಪ್ರಮಾಣದ ಕಡಲ್ಕೊರತೆ

8 ವರ್ಷಗಳಲ್ಲೇ ದೊಡ್ಡ ಪ್ರಮಾಣದ ಕಡಲ್ಕೊರತೆ

ಕಡಲ್ಕೊರೆತ ಸಮಸ್ಯೆ ಬಗ್ಗೆ ಮಾತನಾಡಿರುವ ಮೀನಕಳಿಯ ನಿವಾಸಿ ದಾಮೋದರ ಪೂಜಾರಿ, ನಾನು ಈ ಭಾಗದಲ್ಲಿ ಕಳೆದ ಎಂಟು ವರ್ಷಗಳಿಂದ ವಾಸಿಸುತ್ತಿದ್ದು ಆದರೆ ಇಷ್ಟು ಪ್ರಮಾಣದ ಕಡಲ್ಕೊರೆತ ಸಮಸ್ಯೆಯನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಕಡಲ್ಕೊರೆತ ಸಮಸ್ಯೆಗೆ ಈ ಹಿಂದೆ ಬಂದಿದ್ದ ಚಂಡಮಾರುತವೇ ಕಾರಣ. ಚಂಡಮಾರುತದ ಬಳಿಕ ಕಡಲು ಮತ್ತಷ್ಟು ಮುಂದೆ ಬಂದಿದೆ. ಕಡಲ್ಕೊರೆತದಿಂದಾಗಿ ಆದ ಹಾನಿಗೆ ಸರಕಾರ ಸೂಕ್ತ ಪರಿಹಾರ ನೀಡುತ್ತದೆ ಎಂಬ ವಿಶ್ವಾಸ ಇದೆ ಅಂತಾ ಹೇಳಿದ್ದಾರೆ.

 ಮರವಂತೆ ಮಾದರಿತ ತಡೆಗೋಡೆಗೆ ಒತ್ತಾಯ

ಮರವಂತೆ ಮಾದರಿತ ತಡೆಗೋಡೆಗೆ ಒತ್ತಾಯ

ಮರವಂತೆ ಮಾದರಿಯಲ್ಲಿ ತಡೆಗೋಡೆ ಹಾಕೋಕೆ ಸ್ಥಳೀಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದಕ್ಕೆ ಇಪ್ಪತ್ತು ಕೋಟಿ ರೂಪಾಯಿ ಅನುದಾನ ಬೇಕಾಗಿದ್ದು, ಮರವಂತೆ ಮಾದರಿಯಲ್ಲಿ ತಡೆಗೋಡೆಯನ್ನು ಹಾಕಿದರೆ ಕಡಲ್ಕೊರೆತ ಸಮಸ್ಯೆ ನಿವಾರಣೆ ಆಗಬಹುದು ಎನ್ನುವ ಅಭಿಪ್ರಾಯ ಸ್ಥಳೀಯರದ್ದಾಗಿದೆ. ಅಲ್ಲದೆ ಸಮುದ್ರಕ್ಕೆ ಕಲ್ಲುಹಾಕಿ ತಡೆಗೋಡೆ ನಿರ್ಮಿಸುವುದರಿಂದ ಅಸುಪಾಸು ಪ್ರದೇಶಕ್ಕೆ ಸಮುದ್ರ ವ್ಯಾಪಿಸುತ್ತಿದೆ. ಮೀನುಗಾರಿಕೆ ನಡೆಸಲು ದೋಣಿ ಇತ್ಯಾದಿಗಳನ್ನು ಸಮುದ್ರಕ್ಕೆ ಕೊಂಡೊಯ್ಯಲು ಕಲ್ಲಿನ ತಡೆಗೋಡೆ ಅಡ್ಡಿಯಾಗುತ್ತಿದೆ ಎಂದು ಮೀನುಗಾರರು ಹೇಳುತ್ತಾರೆ.

 ತಾತ್ಕಾಲಿಕವಾಗಿ ಮುನ್ನೂರು ಮೀಟರ್ ತಡೆಗೋಡೆ ನಿರ್ಮಾಣ

ತಾತ್ಕಾಲಿಕವಾಗಿ ಮುನ್ನೂರು ಮೀಟರ್ ತಡೆಗೋಡೆ ನಿರ್ಮಾಣ

" ಮರವಂತೆ ಮಾದರಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಕಳೆದ ಫ್ರೆಬ್ರವರಿಯಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅದನ್ನು ಮಂಜೂರು ಮಾಡುವ ಎಲ್ಲಾ ಪ್ರಯತ್ನವನ್ನು ಮಾಡುತ್ತೇವೆ. ಈಗ ಕಡಲ್ಕೊರೆತವನ್ನು ನಿವಾರಿಸಲು ತಾತ್ಕಾಲಿಕವಾಗಿ ಮುನ್ನೂರು ಮೀಟರ್ ಉದ್ದಕ್ಕೆ 1.75 ಕೋಟಿ ರೂಪಾಯಿ ವೆಚ್ಚದಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಾಣಕ್ಕೆ ಜಿಲ್ಲಾಧಿಕಾರಿಯವರಿಗೆ ಪ್ರಸ್ತಾಪ ಕಳುಹಿಸಿದ್ದೇನೆ" ಎಂದು ಸ್ಥಳೀಯ ಶಾಸಕ ಡಾ.ವೈ ಭರತ್ ಶೆಟ್ಟಿ, ಹೇಳಿದ್ದಾರೆ.

English summary
Concrete Road and many houses destroyed by Sea Erosion in Meenakaliya, near Baikampad, Dakshina District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X