ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆ ಸಂಪರ್ಕಕ್ಕಾಗಿ ಈ ಯುವಕರು ಕೈಗೊಂಡ ಕಾರ್ಯಕ್ಕೆ ಭಾರೀ ಮೆಚ್ಚುಗೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್.22: ಕರಾವಳಿ ಹಾಗೂ ಘಟ್ಟ ಪ್ರದೇಶದಲ್ಲಿ ಸಂಭವಿಸಿದ ಜಲಪ್ರಳಯಕ್ಕೆ ಮಂಗಳೂರಿನಿಂದ ರಾಜಧಾನಿ ಬೆಂಗಳೂರು ಹಾಗೂ ಮತ್ತಿತರ ನಗರಗಳನ್ನು ಸಂಪರ್ಕಿಸುವ ಬಹುತೇಕ ಮಾರ್ಗಗಳು ಮುಚ್ಚಿ ಹೋಗಿವೆ.

ಗುಡ್ಡ ಕುಸಿತ, ಜಲ ಪ್ರಳಯದಂಥ ಪಾಕೃತಿಕ ವಿಕೋಪಕ್ಕೆ ತುತ್ತಾಗಿ ಸಂಪೂರ್ಣ ಬಂದ್ ಆಗಿರುವುದರಿಂದ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಗರು ರಸ್ತೆಯ ಸಂಪರ್ಕದ ಪರ್ಯಾಯ ಮಾರ್ಗಕ್ಕಾಗಿ ಟ್ವಿಟ್ಟರ್‌ ಅಭಿಯಾನ ಆರಂಭಿಸಿದ್ದಾರೆ.

ರಣಗಾಳಿಗೆ ಬೆಚ್ಚಿಬಿದ್ದ ಮಲೆನಾಡಿಗರು, ಕಾಫಿನಾಡಲ್ಲಿ ಹೆಚ್ಚಾಯ್ತು ಭೂ ಕುಸಿತ ರಣಗಾಳಿಗೆ ಬೆಚ್ಚಿಬಿದ್ದ ಮಲೆನಾಡಿಗರು, ಕಾಫಿನಾಡಲ್ಲಿ ಹೆಚ್ಚಾಯ್ತು ಭೂ ಕುಸಿತ

#connectustomangalore ಹ್ಯಾಷ್ ಟ್ಯಾಗ್‌ ಜತೆ 'ಕನೆಕ್ಟ್ ಅಸ್ ಟು ಮಂಗಳೂರು' ಎಂಬ ಸಂದೇಶವನ್ನು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಟ್ವೀಟ್ ಮಾಡುತ್ತಿದ್ದು, ಮಂಗಳೂರಿನಿಂದ ಬೆಂಗಳೂರು ಹಾಗೂ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸಲು ಬೇಕಾದ ರಸ್ತೆ ಸಂಪರ್ಕವನ್ನು ಆದಷ್ಟು ಬೇಗ ಸರಿಪಡಿಸಿ. ಮಧ್ಯಮ ವರ್ಗದವರಿಗೂ ಅನುಕೂಲವಾಗುವಂತ ಸಾರಿಗೆ ವ್ಯವಸ್ಥೆ ಕಲ್ಪಿಸಿ ಎಂದು ಹಕ್ಕೊತ್ತಾಯ ಮಾಡಲಾಗಿದೆ.

Coasters have begun Twitter campaign

ಬಂಟ್ವಾಳ ತಾಲೂಕಿನ ಮಾಣಿ ಜಂಕ್ಷ ನ್‌ ನಿವಾಸಿ ಪ್ರಸ್ತುತ ಬೆಂಗಳೂರಿನ ಉದ್ಯೋಗಿ ಗೋಪಾಲ ಪೈ, ಸಿದ್ಧಾರ್ಥ್ ಪೈ, ನಿತಿನ್, ವಿಘ್ನೇಶ್ ಮತ್ತು ಸ್ನೇಹಿತರು ಜತೆಗೂಡಿ ಈ ಅಭಿಯಾನ ಶುರು ಮಾಡಿದ್ದಾರೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಂದು ನಿರ್ದಿಷ್ಟ ಸಮಯದಲ್ಲಿ ಹ್ಯಾಷ್ ಟ್ಯಾಗ್‌ ಜತೆ ಪ್ರಧಾನಮಂತ್ರಿ ಹಾಗೂ ಕೇಂದ್ರ ಭೂಸಾರಿಗೆ ಸಚಿವರ ಸಹಿತ ಪ್ರಮುಖರ ಗಮನ ಸೆಳೆಯುವ ಉದ್ದೇಶ ಈ ತಂಡಕ್ಕಿದೆ.

Coasters have begun Twitter campaign

ಇತ್ತೀಚೆಗೆ ಸುರಿದ ಮಹಾಮಳೆಗೆ ಮಂಗಳೂರನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳು ಹಾಳಾಗಿದ್ದು ಶಿರಾಡಿ, ಸಂಪಾಜೆ ಮಾರ್ಗಗಳು ಸಂಪೂರ್ಣ ಬಂದ್ ಆಗಿವೆ. ಅಲ್ಲದೆ ಚಾರ್ಮಾಡಿ ಮೂಲಕ ಸಂಚಾರ ಕೂಡ ಕಷ್ಟದಾಯಕವಾಗಿದ್ದು, ಅಲ್ಲಿ ಭೂ ಕುಸಿತ ಭಯದಲ್ಲೇ ವಾಹನ ಚಲಾಯಿಸುವ ಆತಂಕ ಎದುರಾಗಿದೆ.

ಕೇರಳ, ಕೊಡಗು ಪ್ರವಾಹಕ್ಕೆ 'ಸೋಮಾಲಿ ಜೆಟ್‌' ಕಾರಣ: ಸ್ಫೋಟಕ ಮಾಹಿತಿಕೇರಳ, ಕೊಡಗು ಪ್ರವಾಹಕ್ಕೆ 'ಸೋಮಾಲಿ ಜೆಟ್‌' ಕಾರಣ: ಸ್ಫೋಟಕ ಮಾಹಿತಿ

ಈ ಹಿನ್ನಲೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಬರಬೇಕು ಎಂದರೆ ತುಂಬಾ ಕಷ್ಟ. ಕೆಲವೊಮ್ಮೆ ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ಬರುವವರೂ ಇದ್ದಾರೆ. ಅನಿವಾರ್ಯವಾಗಿ ಬೆಂಗಳೂರಿನಲ್ಲಿ ಉದ್ಯೋಗ ಹಿಡಿದವರು ಊರಿಗೆ ಆಗಾಗ್ಗೆ ಬಂದು ಹೋಗುತ್ತಿರುತ್ತಾರೆ.

ಬೆಂಗಳೂರಿನಲ್ಲಿರುವವರೆಲ್ಲರೂ ಕೈತುಂಬಾ ಸಂಬಳದಲ್ಲಿರುವವರೇನಲ್ಲ. ಹೀಗಾಗಿ ಇರುವ ರಸ್ತೆಯನ್ನಾದರೂ ಸುಸ್ಥಿತಿಯಲ್ಲಿ ಇರಿಸಲು ಸರಕಾರ ಮುಂದಾಗಬೇಕೆನ್ನುವುದು ಇವರ ಬೇಡಿಕೆ.

ಈ ಕಾರ್ಯಕ್ಕೆ ಇವರು ಆರಿಸಿಕೊಂಡದ್ದು ಟ್ವಿಟ್ಟರ್‌ ಮಾರ್ಗ. ಕೇಂದ್ರ ಹಾಗೂ ರಾಜ್ಯ ಸರಕಾರದ ಎಲ್ಲಾ ಮಂತ್ರಿಗಳು ಅಧಿಕಾರಿಗಳು ಅಂತರ್ಜಾಲದಲ್ಲಿ ಸಕ್ರಿಯರಾಗಿದ್ದು, ಈಗಿನ ಕೇಂದ್ರ ಮಂತ್ರಿಮಂಡಲದ ಸದಸ್ಯರು ಅಂತರ್ಜಾಲ ಮಾಧ್ಯಮದಲ್ಲಿ ಬರುವ ಮನವಿಗಳಿಗೆ ಸ್ಪಂದಿಸುತ್ತಾರೆ. ರಾಜ್ಯ ಸರಕಾರವೂ ಸ್ಪಂದಿಸುತ್ತಿದೆ.

ಕೊಡಗಿನಲ್ಲಿ ಪ್ರವಾಹವೇನೋ ಹೋಯ್ತು, ರೋಗ-ರುಜಿನ ಚಿಂತೆ ಬಂತುಕೊಡಗಿನಲ್ಲಿ ಪ್ರವಾಹವೇನೋ ಹೋಯ್ತು, ರೋಗ-ರುಜಿನ ಚಿಂತೆ ಬಂತು

ಹೀಗಾಗಿ ಟ್ವಿಟ್ಟರ್‌ ಮೂಲಕ 'ಕನೆಕ್ಟ್ ಅಸ್ ಟು ಮಂಗಳೂರು' ಎಂದು ಬರೆದು ಪೋಸ್ಟ್ ಮಾಡುವ ಉದ್ದೇಶ ನಮಗಿದೆ. ಆಗಸ್ಟ್ 24ರಂದು ಬೆಳಗ್ಗೆ ಸುಮಾರು 10 ಗಂಟೆಗೆ ಜಗತ್ತಿನೆಲ್ಲೆಡೆ ಇರುವ ಮಂಗಳೂರಿಗರು ಇದನ್ನು ಬೆಂಬಲಿಸಿ ಅಭಿಯಾನ ಕೈಗೊಂಡರೆ, ಸರಕಾರದ ಗಮನ ಸೆಳೆಯಲು ಸಾಧ್ಯ ಎನ್ನುತ್ತಾರೆ ತಂಡ ಸದಸ್ಯ ಗೋಪಾಲ ಪೈ ಮಾಣಿ ಅವರು.

ಈಗಿನ ಪರಿಸ್ಥಿತಿಯಲ್ಲಿ ಕೊಡಗಿನಲ್ಲಿ ನಮಗಿಂತ ಹೆಚ್ಚಾಗಿ ಸಂಕಷ್ಟದಲ್ಲಿದ್ದಾರೆ. ಆದರೆ ನಾವು ನಮ್ಮ ಊರಿಗೆ ಸಂಕಷ್ಟ ಸಂದರ್ಭದಲ್ಲಿ ತಲುಪುವುದು ಈಗಿನ ಸಂದರ್ಭದಲ್ಲಿ ಕಷ್ಟವಾಗಿದ್ದು, ಸರಕಾರಗಳು ಕೊನೇ ಪಕ್ಷ ಒಂದು ಮಾರ್ಗವನ್ನಾದರೂ ಆದಷ್ಟು ಬೇಗ ಸರಿ ಮಾಡಬೇಕು ಎಂಬ ಒತ್ತಾಯವನ್ನು ಈ ಅಭಿಯಾನದ ಮೂಲಕ ಮಾಡುತ್ತಿದ್ದಾರೆ.

English summary
Most of the routes connecting Mangalore to Capital city and other cities are closed. Coasters have begun Twitter campaign for an alternative route of road connectivity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X