ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಜಕ್ಕೂ ಮಂಗಳೂರು ಮುಳುಗುತ್ತಾ?; ಹಿರಿಯ ವಿಜ್ಞಾನಿ ಹೇಳಿದ್ದೇನು?

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಆಗಸ್ಟ್ 12; ಇನ್ನು ಒಂದು ದಶಕದೊಳಗೆ ರಾಜ್ಯದ ಕಡಲ ನಗರಿ ಮಂಗಳೂರು, ದೇಶದ ವಾಣಿಜ್ಯ ನಗರಿ ಮುಂಬೈ ಸೇರಿದಂತೆ ಕಡಲತಡಿಯಲ್ಲಿರುವ ಮಹಾನಗರಗಳು ಸಮುದ್ರದ ನೀರಿನಲ್ಲಿ ಮುಳುಗಡೆಯಾಗಲಿದೆ ಎಂಬ ಭಯಾನಕ ವಿಚಾರವನ್ನು ನಾಸಾ ಹೊರಹಾಕಿದೆ. ನಾಸಾ ವಿಜ್ಞಾನಿಗಳ ಅಧ್ಯಯನದ ವರದಿಗೆ ನಾನಾ ಅಭಿಪ್ರಾಯಗಳು ಕೇಳಿ ಬಂದಿದೆ.

ಕೆಲವರು ಇದೆಲ್ಲಾ ಸುಳ್ಳು, ನಗರಗಳು ಮುಳುಗೋದು ಅಷ್ಟು ಸುಲಭನಾ? ಜಗತ್ತು ಮುಳುಗಡೆಯಾಗುತ್ತದೆ ಅಂತಾ ಈ ಹಿಂದೆ ಹೇಗೆ ಪುಕಾರು ಎಬ್ಬಿಸಲಾಯಿತೋ ಇದೂ ಅದರ ಮುಂದುವರಿದ ಭಾಗ ಅಂತಾ ನಾನಾ ಅಭಿಪ್ರಾಯಗಳು ವ್ಯಕ್ತವಾಗಿವೆ.

ಭೂಮಿಗೆ ಬಾಂಬ್ ಇಟ್ಟಿದ್ದಾಯ್ತು, ಈಗ ಸಮುದ್ರ ನಾಶ ಮಾಡಲು ತಯಾರಿ? ಭೂಮಿಗೆ ಬಾಂಬ್ ಇಟ್ಟಿದ್ದಾಯ್ತು, ಈಗ ಸಮುದ್ರ ನಾಶ ಮಾಡಲು ತಯಾರಿ?

ಕೆಲವರು ಇದೇ ವಿಚಾರವನ್ನು ಟ್ರೋಲ್‌ಗಳಿಗೂ ಬಳಸಿ ಇದೆಲ್ಲಾ ಬೋಗಸ್ ಅಂತಾ ಹೇಳಿದ್ದಾರೆ. ಹಾಗಾದರೆ ನಾಸಾ ವಿಜ್ಞಾನಿಗಳು ಹೇಳಿದ್ದು ಸುಳ್ಳಾ?, ಅಧ್ಯಯನ ಮಾಡದೇ ಈ ಇಂತಹ ಗಂಭೀರ ವಿಚಾರವನ್ನು ಸಾರಾಸಗಟಾಗಿ ಹೇಳಬಹುದಾ ಅನ್ನುವ ಕುತೂಹಲಕ್ಕೆ ಮಂಗಳೂರಿನ ಹಿರಿಯ ವಿಜ್ಞಾನಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.

ಅರಬ್ಬೀ ಸಮುದ್ರ ಪ್ರಕ್ಷುಬ್ಧ; ಪೆಣಂಬೂರು ಬೀಚ್‌ನಲ್ಲಿ ತೀವ್ರ ಕಡಲ್ಕೊರೆತಅರಬ್ಬೀ ಸಮುದ್ರ ಪ್ರಕ್ಷುಬ್ಧ; ಪೆಣಂಬೂರು ಬೀಚ್‌ನಲ್ಲಿ ತೀವ್ರ ಕಡಲ್ಕೊರೆತ

Mangaluru City Drowning Report Viral Dr KV Rao Explains

ಮಂಗಳೂರಿನ ಪಿಲಿಕುಳ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ, ಸಂಶೋಧಕ, ಪ್ರೊ. ಕೆ.ವಿ ರಾವ್ ಈ ಎಲ್ಲಾ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. "ನಾಸಾ ವಿಜ್ಞಾನಿಗಳು ಹೇಳಿರುವ ಮಾಹಿತಿ ಸತ್ಯ ಮತ್ತು ಭವಿಷ್ಯದ ದಿನಗಳಲ್ಲಿ ಸಂಭವಿಸಬಹುದಾದ ಘಟನೆ" ಎಂದು ಅಂತಾ ಪ್ರೊ. ಕೆ. ವಿ. ರಾವ್ ಹೇಳಿದ್ದಾರೆ.

4,077 ಕೋಟಿ ರೂ ವೆಚ್ಚದ ಆಳ ಸಮುದ್ರ ಅಭಿಯಾನಕ್ಕೆ ಸಂಪುಟ ಅಸ್ತು 4,077 ಕೋಟಿ ರೂ ವೆಚ್ಚದ ಆಳ ಸಮುದ್ರ ಅಭಿಯಾನಕ್ಕೆ ಸಂಪುಟ ಅಸ್ತು

"ಜಗತ್ತಿನಲ್ಲಿ ಪ್ರತಿನಿತ್ಯವಾಗುತ್ತಿರುವ ನಗರೀಕರಣ, ಕಾರ್ಖಾನೆಗಳ ಸಂಖ್ಯೆ ಹೆಚ್ಚಳವಾಗುತ್ತಿರೋದ್ರಿಂದ ವಾತವರಣದಲ್ಲೂ ಮಾಲಿನ್ಯ ಜಾಸ್ತಿಯಾಗುತ್ತಿದೆ. ಹೀಗೆಯೇ ಮುಂದುವರಿದರೆ ಮಾಲಿನ್ಯ ಅತಿಯಾಗಿ ಪರಿಸ್ಥಿತಿ ಮನುಷ್ಯನ ಕೈತಪ್ಪಿ ಜಗತ್ತಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋದೂ ಅಸಾಧ್ಯ" ಅಂತಾ ಕೆ. ವಿ. ರಾವ್ ತಿಳಿಸಿದ್ದಾರೆ.

"ನಿರಂತರ ಪರಿಸರ ಮಾಲಿನ್ಯದಿಂದ ಜಾಗತಿಕ ತಾಪಮಾನದಲ್ಲೂ ಎರಿಕೆ ಕಾಣುತ್ತಿದೆ. ಈ ತಾಪಮಾನವನ್ನು ಕೂಡಲೇ ಪರಿಹಾರ ಮಾಡೊಕೆ ಆಗಲ್ಲ. ಆದರೆ ಅದರ ಪರಿಣಾಮ‌ ಗಂಭೀರ ವಾಗಿರುತ್ತದೆ. ಪ್ರಕೃತಿ ನಮಗೆ ಬೇಕಾದಷ್ಟೇ ಆಕ್ಸಿಜನ್, ನೈಟ್ರೋಜನ್ ಸೇರಿದಂತೆ ಇತರ ಅನಿಲಗಳನ್ನು ನೀಡುತ್ತಿದೆ. ನಮಗೆ ಬೇಕಾದ ಪೂರಕವಾದ ವಾತಾವರಣ ಪೃಕೃತಿ ನೀಡುತ್ತಿದೆ. ಆದರೆ ನಾವು ಅದನ್ನು ಹಾಳು ಮಾಡುತ್ತಿದ್ದೇವೆ. ಕಾಡು ನಾಶವಾಗಿ, ಕಾಡುಗಳೆಲ್ಲಾ ನಗರವಾಗಿ ಬದಲಾಗುತ್ತಿದೆ. ಇದರಿಂದ ಜಾಗತಿಕ ತಾಪಮಾನ ಬಹಳ ಹದಗೆಡುತ್ತಿದೆ" ಎಂದು ವಿವರಿಸಿದ್ದಾರೆ.

"ನಾವು ಪರಿಸರ ರಕ್ಷಣೆ ಮಾಡದೇ ಇದ್ದಿದ್ದರಿಂದ ಸಾಗರದ ಹಿಮಗಡ್ಡೆಗಳು ನಾವು ನಿರೀಕ್ಷೆ ಮಾಡದಿರೋದಕ್ಕಿಂತ ಬೇಗ ಕರಗುತ್ತಿದೆ. ಇದರ ಪರಿಣಾಮ ಹಿಮ ಕರಗುವಿಕೆಯಿಂದ ಸಾಗರದ ನೀರಿನ ಮಟ್ಟ ಏರಿಕೆಯಾಗುತ್ತಿದೆ. ನಾವಿರುವ ಜಾಗವನ್ನು ಸರಿಯಾಗಿ ನೋಡಕೊಳ್ಳದಿದ್ದರೆ, ವಾತವರಣದ ಉಷ್ಣತೆಯಿಂದ ನೀರ್ಗಲ್ಲುಳು ಕರಗುತ್ತಾ ಹೋದರೆ ಸಮುದ್ರ ಮಟ್ಟ ಏರಿಕೆ ಯಾಗುತ್ತದೆ. ಇದೇ ಅಂಶವನ್ನು ನಾಸಾ ವಿಜ್ಞಾನಿಗಳು ಅಧ್ಯಯನದ ಮೂಲಕ ಹೇಳಿದ್ದಾರೆ" ಎಂದು ಪ್ರೊ. ಕೆ. ವಿ. ರಾವ್ ತಿಳಿಸಿದ್ದಾರೆ.

ನೀರ್ಗಲ್ಲುಗಳ ಕರಗುವಿಕೆಯ ಮಟ್ಟ ಯಾವ ರೀತಿ ಇದೆ. ಹೀಗೆ ಕರಗುತ್ತಾ ಹೋದರೆ ಯಾವ ರೀತಿ ಸಮಸ್ಯೆಯುಂಟಾಗಬಹುದು ಎಂಬುವುದನ್ನು ನಾಸಾ ಲೆಕ್ಕ ಹಾಕಿದಾಗ ಪರಿಣಾಮ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಬಹಳ ವೇಗವಾಗುತ್ತಿದೆ ಅಂತಾ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ನಾವು ಎಷ್ಟೇ ಜಾಗೃತೆ ವಹಿಸಿದರೂ, ಈಗ ಇರುವ ಉಷ್ಣತೆಯನ್ನು ಕಾಪಾಡದಿದ್ದರೆ ಮುಂದಿನ ದಿನಗಳಲ್ಲಿ ಪರಿಣಾಮ ಗಂಭೀರವಾಗಬಹುದು ಎಂಬುದನ್ನು ನಾಸಾ ಅಂದಾಜು ಮಾಡಿದೆ.

"ದಕ್ಷಿಣದ ಮಹಾನಗರಗಳಾದ ಮಂಗಳೂರು, ಮುಂಬೈ ಸಮುದ್ರದ ಹತ್ತಿರ ಇದೆ. ಸಮುದ್ರದಲ್ಲಿ ಒಂದು ಮೀಟರ್ ನೀರು ಜಾಸ್ತಿಯಾದರೂ ಬಹಳಷ್ಟು ನಗರಗಳು ಮುಳುಗಲಿದೆ. ಈ ಬಗ್ಗೆ ವಿಶ್ವಸಂಸ್ಥೆ, ಜಾಗತಿಕ ಸಂಸ್ಥೆಗಳಲ್ಲಿ ಸಾಕಷ್ಟು ಚರ್ಚೆ ಯಾಗಿದೆ. ಒಮ್ಮೆ ಸಮುದ್ರ ನಗರಗಳನ್ನು ಆಪೋಷನ ಮಾಡಿದರೆ ಮತ್ತೆ ಸಮುದ್ರ ಹಿಂದೆ ಹೋಗಲ್ಲ ಅನ್ನುವ ಮಾಹಿತಿಯೂ ಲಭ್ಯವಾಗಿದೆ ಎಂಬ ವಿಚಾರವನ್ನು" ಪ್ರೊ. ಕೆ. ವಿ. ರಾವ್ ಹೇಳಿದ್ದಾರೆ.

"ಅಂತರಿಕ್ಷಾ, ವಿಮಾನಯಾನ, ಬೇಕಾಬಿಟ್ಟಿ ಕಾಡುಗಳನ್ನು ಕಡಿದರೆ ಜಾಗೃತೆಯಿಂದ ನೋಡಿಕೊಳ್ಳದಿದ್ದರೆ ಅಪಾಯ ಖಂಡಿತಾ ಇದೆ. ಮುಂದಿನ ದಿನಗಳಲ್ಲಿ ಇದಕ್ಕೆ ತಯಾರು ಇರಬೇಕು. ಈಗಲೇ ಕೆಲವೆಡೆ ಭಾರೀ ಮಳೆಯಾಗುತ್ತಿದೆ. ಹವಾಮಾನವೇ ಬದಲಾಗುತ್ತಿದೆ. ನಿರೀಕ್ಷೆಗಿಂತ ಜಾಸ್ತಿ ಮಳೆಯಾಗುತ್ತಿದೆ. ಅತಿವೃಷ್ಟಿ ಜಾಸ್ತಿಯಾಗುತ್ತಿದೆ. ಮೇಘಸ್ಫೋಟದಿಂದ ನೆರೆ ಸಂಭವಿಸುತ್ತಿದೆ. ಸಮುದ್ರದ ನೀರು ತಾನಾಗಿಯೇ ಉಕ್ಕಿ ಹರಿಯೋದು, ಸುನಾಮಿ, ಸೈಕ್ಲೋನ್ ಬೇಕಾದ ಹಾಗೆ ಬರುತ್ತಿರೋದು ವಾತವರಣ ಮಾಲಿನ್ಯದ ಸಂಕೇತವಾಗಿದೆ" ಎಂದು ಹೇಳಿದ್ದಾರೆ.

"ವಾತವರಣವನ್ನು ಸರಿ ಮಾಡಿದಿದ್ದರೆ ಗಭೀರ ಪರಿಣಾ‌ಮ ಎದುರಿಸಬೇಕಾಗುತ್ತದೆ. ಮನುಷ್ಯ ತಾನಾಗಿಯೇ ಪರಿಸರ ರಕ್ಷಣೆ ಮಾಡಬೇಕು. ಭೂಮಿಯಲ್ಲಿ ಜೀವ ಉಗಮವಾಗಬೇಕಾದರೆ ಬಹಳಷ್ಟು ಶತಮಾನಗಳೇ ಹೋಗಿದೆ. ಆ ಶತಮಾನದಲ್ಲಿ ಜೀವಿ ವಿಕಾಸವಾಗಿ ಈ ಮಟ್ಟಕ್ಕೆ ಮನಷ್ಯ ಬಂದಿದ್ದಾನೆ‌‌. ಮನುಷ್ಯ ಉಳಿಯಬೇಕು, ಜೀವ ಸಂಕುಲ ಉಳಿಯಬೇಕೆಂದರೆ ಪರಿಸರ ರಕ್ಷಣೆ ಮಾಡಬೇಕು" ಎಂದು ವಿವರಣೆ ನೀಡಿದ್ದಾರೆ.

Recommended Video

ಭಾರತದ ಹೆಲಿಕಾಪ್ಟರ್ ಗಳನ್ನ ವಶಪಡಿಸಿಕೊಂಡ ತಾಲಿಬಾನ್!! | Oneindia Kannada

English summary
Senior scientist Dr. K. V. Rao explained about Mangaluru city drowning report that went goes viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X