Christmas 2023: ಕ್ರಿಸ್‌ಮಸ್‌ಗೆ ಮುಂಬೈ-ಮಂಗಳೂರು ವಿಶೇಷ ರೈಲು: ಇಲ್ಲಿದೆ ಸಂಪೂರ್ಣ ವಿವರ
ಬೆಂಗಳೂರು, ನವೆಂಬರ್ 23: ಮಹಾನಗರಿ ಮುಂಬೈ ಮತ್ತು ಕರಾವಳಿ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ದಕ್ಷಿಣ ಕನ್ನಡ, ಮಂಗಳೂರು ಹಾಗೂ ಉಡುಪಿ ಭಾಗದ ಲಕ್ಷಾಂತರ ಜನರು ವಾಣಿಜ್ಯ ನಗರಿ ಮುಂಬೈಗೆ ಉದ್ಯೋಗಕ್ಕಾಗಿ ತೆರಳಿರುತ್ತಾರೆ. ವರ್ಷಗಟ್ಟಲೆ ಅಲ್ಲಿಯೇ ಕೆಲಸ ಮಾಡಿ ಜೀವನ ಸಾಗಿಸುವ ಕರಾವಳಿಯ ಜನ ಹಬ್ಬ-ಹರಿ ದಿನಗಳಲ್ಲಿ ತಮ್ಮ ಊರುಗಳಿಗೆ ವಾಪಸ್ ಆಗುತ್ತಾರೆ.
ಹೊಸ ವರ್ಷ ಹಾಗೂ ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ಮಂಗಳೂರಿಗರು ಊರಿನತ್ತ ಮುಖ ಮಾಡುತ್ತಾರೆ. ಆದರೆ ಈ ಸಮಯದಲ್ಲಿ ಪ್ರಯಾಣವೇ ದೊಡ್ಡ ತಲೆಬಿಸಿಯಾಗಿರುತ್ತದೆ. ರೈಲಿನ ಮೂಲಕ ಪ್ರಯಾಣ ಬೆಳೆಸಲಿಚ್ಚಿಸುವವರು ಟಿಕೆಟ್ ಸಿಗದೇ ಪರದಾಡುತ್ತಾರೆ. ಹೀಗಾಗಿ ಕೇಂದ್ರ ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಹಬ್ಬ-ಹರಿದಿನಗಳಲ್ಲಿ ವಿಶೇಷ ರೈಲುಗಳನ್ನು ಓಡಿಸಲು ಅನುಮತಿ ನೀಡಿದೆ.

ಈ ಬಾರಿಯ ಕ್ರಿಸ್‌ಮಸ್ ಸಮಯದಲ್ಲಿ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಭಾರೀ ಜನದಟ್ಟಣೆ ಕಡಿಮೆಗೊಳಿಸುವ ಉದ್ದೇಶದಿಂದ ಮುಂಬೈ ಹಾಗೂ ಮಂಗಳೂರಿನ ನಡುವೆ ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಹೀಗಾಗಿ ಮುಂಬೈನಲ್ಲಿರುವ ಕರಾವಳಿ ಜಿಲ್ಲೆಯ ಜನರು ಈ ಬಾರಿ ಕ್ರಿಸ್‌ಮಸ್ ಹಬ್ಬಕ್ಕೆ ಸುಲಭವಾಗಿ ಬರಬಹುದಾಗಿದೆ.
ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ಮುಂಬೈ ಎಲ್‌ಟಿಟಿಯಿಂದ ಮಂಗಳೂರು ಜಂಕ್ಷನ್ ನಡುವೆ ಈ ವಿಶೇಷ ರೈಲು ನಾಲ್ಕು ರೌಂಡ್ ಟ್ರಿಪ್ ನಡೆಸಲಿದೆ. ರೈಲು ಸಂಖ್ಯೆ 01453 ಮುಂಬೈ ಎಲ್‌ಟಿಟಿಯಿಂದ ಮಂಗಳೂರು ಜಂಕ್ಷನ್‌ಗೆ ಡಿಸೆಂಬರ್ 22 ಹಾಗೂ ಡಿಸೆಂಬರ್ 29ರ ಶುಕ್ರವಾರದಂದು ಸಂಚಾರ ನಡೆಸಲಿದೆ.
ಡಿಸೆಂಬರ್ 22ರ ರಾತ್ರಿ 10:15ಕ್ಕೆ ಮುಂಬೈ ಎಲ್‌ಟಿಟಿಯಿಂದ ಹೊರಡಲಿರುವ ಈ ರೈಲು, ಮಾರನೇ ದಿನ ಅಂದರೆ ಡಿಸೆಂಬರ್ 23ರ ಸಂಜೆ 5:05ಕ್ಕೆ ಮಂಗಳೂರು ಜಂಕ್ಷನ್‌ಗೆ ತಲುಪಲಿದೆ. ಇನ್ನು ಡಿಸೆಂಬರ್ 29ರ ರಾತ್ರಿ 10:15ಕ್ಕೆ ಮುಂಬೈ ಎಲ್‌ಟಿಟಿಯಿಂದ ಹೊರಡಲಿರುವ ಈ ರೈಲು, ಮಾರನೇ ದಿನ ಅಂದರೆ ಡಿಸೆಂಬರ್ 30ರ ಸಂಜೆ 5:05ಕ್ಕೆ ಮಂಗಳೂರು ಜಂಕ್ಷನ್‌ಗೆ ತಲುಪಲಿದೆ.

ರೈಲು ಸಂಖ್ಯೆ 01454 ಮಂಗಳೂರು ಜಂಕ್ಷನ್‌ನಿಂದ ಮುಂಬೈ ಎಲ್‌ಟಿಟಿಗೆ ಡಿಸೆಂಬರ್ 23 ಹಾಗೂ ಡಿಸೆಂಬರ್ 30ರ ಶನಿವಾರದಂದು ಸಂಚಾರ ನಡೆಸಲಿದೆ. ಡಿಸೆಂಬರ್ 23ರ ಸಂಜೆ 6:45ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿರುವ ಈ ರೈಲು ಮಾರನೇ ದಿನ ಅಂದರೆ ಡಿಸೆಂಬರ್ 24ರ ಮಧ್ಯಾಹ್ನ 2:25ಕ್ಕೆ ಮುಂಬೈ ಎಲ್‌ಟಿಟಿಗೆ ತಲುಪಲಿದೆ. ಡಿಸೆಂಬರ್ 30ರ ಸಂಜೆ 6:45ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿರುವ ಈ ರೈಲು ಮಾರನೇ ದಿನ ಅಂದರೆ ಡಿಸೆಂಬರ್ 31ರ ಮಧ್ಯಾಹ್ನ 2:25ಕ್ಕೆ ಮುಂಬೈ ಎಲ್‌ಟಿಟಿಗೆ ತಲುಪಲಿದೆ.
ಎಸಿ ರೈಲುಗಳ ವಿವರ
ರೈಲು ಸಂಖ್ಯೆ 01155 ಮುಂಬೈ ಎಲ್‌ಟಿಟಿಯಿಂದ ಮಂಗಳೂರು ಜಂಕ್ಷನ್‌ಗೆ ಡಿಸೆಂಬರ್ 26 ಹಾಗೂ ಜನವರಿ 02ರ ಮಂಗಳವಾರದಂದು ಸಂಚಾರ ನಡೆಸಲಿದೆ. ಡಿಸೆಂಬರ್ 26ರ ರಾತ್ರಿ 10:15ಕ್ಕೆ ಮುಂಬೈ ಎಲ್‌ಟಿಟಿಯಿಂದ ಹೊರಡಲಿರುವ ಈ ರೈಲು, ಮಾರನೇ ದಿನ ಅಂದರೆ ಡಿಸೆಂಬರ್ 27ರ ಸಂಜೆ 5:05ಕ್ಕೆ ಮಂಗಳೂರು ಜಂಕ್ಷನ್‌ಗೆ ತಲುಪಲಿದೆ. ಇನ್ನು ಜನವರಿ 02ರ ರಾತ್ರಿ 10:15ಕ್ಕೆ ಮುಂಬೈ ಎಲ್‌ಟಿಟಿಯಿಂದ ಹೊರಡಲಿರುವ ಈ ರೈಲು, ಮಾರನೇ ದಿನ ಅಂದರೆ ಜನವರಿ 03ರ ಸಂಜೆ 5:05ಕ್ಕೆ ಮಂಗಳೂರು ಜಂಕ್ಷನ್‌ಗೆ ತಲುಪಲಿದೆ.
ರೈಲು ಸಂಖ್ಯೆ 01156 ಮಂಗಳೂರು ಜಂಕ್ಷನ್‌ನಿಂದ ಮುಂಬೈ ಎಲ್‌ಟಿಟಿಗೆ ಡಿಸೆಂಬರ್ 27 ಹಾಗೂ ಜನವರಿ 03ರ ಬುಧವಾರ ಸಂಚಾರ ನಡೆಸಲಿದೆ. ಡಿಸೆಂಬರ್ 27ರ ಸಂಜೆ 6:45ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿರುವ ಈ ರೈಲು ಮಾರನೇ ದಿನ ಅಂದರೆ ಡಿಸೆಂಬರ್ 28ರ ಮಧ್ಯಾಹ್ನ 2:25ಕ್ಕೆ ಮುಂಬೈ ಎಲ್‌ಟಿಟಿಗೆ ತಲುಪಲಿದೆ. ಜನವರಿ 03ರ ಸಂಜೆ 6:45ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿರುವ ಈ ರೈಲು ಮಾರನೇ ದಿನ ಅಂದರೆ ಜನವರಿ 04ರ ಮಧ್ಯಾಹ್ನ 2:25ಕ್ಕೆ ಮುಂಬೈ ಎಲ್‌ಟಿಟಿಗೆ ತಲುಪಲಿದೆ.
ಥಾಣೆ, ಪನ್ವೇಲ್, ರೋಹ, ಖೇಡ್, ಚಿಪ್ಲುನ್, ಸಂಗಮೇಶ್ವರ ರಸ್ತೆ, ರತ್ನಗಿರಿ, ವೈಭವವಾಡಿ ರಸ್ತೆ, ಕಂಕಾವಲಿ, ಸಿಂಧುದುರ್ಗ, ಕೂಡಲ್, ಸಾವಂತವಾಡಿ ರಸ್ತೆ, ತಿವಿಂ, ಕರ್ಮಾಲಿ, ಮಡಗಾಂವ್ ಜೂ, ಕೆನಕೋನ, ಕಾರವಾರ, ಕುಮಟಾ, ಮುರುಡೇಶ್ವರ, ಭಟ್ಕಳ, ಕುಂದಾಪುರ, ಉಡುಪಿ ಮತ್ತು ಸುರತ್ಕಲ್ ಮಾರ್ಗವಾಗಿ ಈ ರೈಲುಗಳು ಸಂಚರಿಸಲಿವೆ.












Click it and Unblock the Notifications